ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಆಸ್ಪತ್ರೆಯಲ್ಲಿನ ಕೋವಿಡ್-19 ಚಿಕಿತ್ಸೆಯ ಬಿಲ್: ಅಬ್ಬಬ್ಬಾ ಇಷ್ಟೊಂದಾ?!

|
Google Oneindia Kannada News

ಮುಂಬೈ, ಮೇ 23: ಭಾರತದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಆರ್ಭಟ ಮುಂದುವರೆದಿದೆ. ಇಲ್ಲಿಯವರೆಗೂ ಭಾರತದ 1,25,121 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಆ ಪೈಕಿ 51,836 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದರೆ, 3,728 ಮಂದಿ ಜೀವ ಬಿಟ್ಟಿದ್ದಾರೆ.

Recommended Video

ತರಕಾರಿಯಿಂದಲು ಹಬ್ಬುತ್ತಿದೆ ಕೊರೋನಾ ಮಹಾಮಾರಿ!! ಎಚ್ಚರ!! | Oneindia Kannada

ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ದೆಹಲಿ ಮತ್ತು ರಾಜಸ್ಥಾನದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಅತಿಯಾಗಿದೆ. ದಿನದಿಂದ ದಿನಕ್ಕೆ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆಲವು ರಾಜ್ಯಗಳು ತಮ್ಮಲ್ಲಿನ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್-19 ಚಿಕಿತ್ಸೆಗೆ ಅವಕಾಶ ಮಾಡಿಕೊಟ್ಟಿದೆ.

ಸೋಂಕಿತರು ಇಚ್ಛಿಸಿದಲ್ಲಿ ಖಾಸಗಿ ಆಸ್ಪತ್ರೆಯಲ್ಲೂ ಕೋವಿಡ್-19 ಗೆ ಚಿಕಿತ್ಸೆ ಪಡೆಯಬಹುದಾಗಿದೆ. ಹೀಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾದರೆ ನಿಮ್ಮ ಜೇಬಿನ ಜೊತೆಗೆ ಗುಂಡಿಗೆ ಕೂಡ ಗಟ್ಟಿಯಾಗಿರಬೇಕು. ಯಾಕಂದ್ರೆ, ಹೇಳಿ ಕೇಳಿ ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯಕೀಯ ವ್ಯವಸ್ಥೆ ಸಿಕ್ಕಾಪಟ್ಟೆ ದುಬಾರಿ. ಹೀಗಿರುವಾಗ, ಕೋವಿಡ್-19 ಚಿಕಿತ್ಸೆ ಅಂದ್ರೆ ಕೇಳ್ಬೇಕಾ.?

ಕಹಿ ಸುದ್ದಿ: ಚಮತ್ಕಾರ ಮಾಡದ ಕೋವಿಡ್-19 ಆಕ್ಸ್ ಫರ್ಡ್ ಲಸಿಕೆ.!ಕಹಿ ಸುದ್ದಿ: ಚಮತ್ಕಾರ ಮಾಡದ ಕೋವಿಡ್-19 ಆಕ್ಸ್ ಫರ್ಡ್ ಲಸಿಕೆ.!

ಮುಂಜಾಗ್ರತಾ ಮತ್ತು ಸುರಕ್ಷತಾ ಕ್ರಮಗಳ ಹೆಸರಿನಲ್ಲಿ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು 'ದುಬಾರಿ' ಚಿಕಿತ್ಸಾ ದರವನ್ನು ದಾಖಲು ಮಾಡುತ್ತಿವೆ. ಅದಕ್ಕೆ ಸಾಕ್ಷಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ 'ಕೋವಿಡ್-19 ಚಿಕಿತ್ಸೆಯ ಬಿಲ್'.

ಥಾಣೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ 14 ದಿನ ಚಿಕಿತ್ಸೆ

ಥಾಣೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ 14 ದಿನ ಚಿಕಿತ್ಸೆ

ಮುಂಬೈನಲ್ಲಿ ನೆಲೆಸಿರುವ 36 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಥಾಣೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಮೇ 3 ನೇ ತಾರೀಖಿನಂದು ದಾಖಲಾದರು. ಮೇ 16 ರವರೆಗೂ ಸೋಂಕಿತ ವ್ಯಕ್ತಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದರು.

ಬರೋಬ್ಬರಿ 2,67,830 ರೂಪಾಯಿ!

ಬರೋಬ್ಬರಿ 2,67,830 ರೂಪಾಯಿ!

14 ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದ ವ್ಯಕ್ತಿಗೆ ಡಿಸ್ಚಾರ್ಚ್ ಆಗುವ ಸಮಯದಲ್ಲಿ ಸಿಕ್ಕ ಬಿಲ್ ಮೊತ್ತ ಎಷ್ಟು ಗೊತ್ತೇ.? ಬರೋಬ್ಬರಿ 2,67,830 ರೂಪಾಯಿಗಳು.!

ಬ್ರೆಜಿಲ್ ನಲ್ಲಿ ಕೊರೊನಾ ವೈರಸ್ ಅಟ್ಟಹಾಸ: ದಕ್ಷಿಣ ಅಮೇರಿಕಾ ಹೊಸ ಕೇಂದ್ರಬಿಂದು!ಬ್ರೆಜಿಲ್ ನಲ್ಲಿ ಕೊರೊನಾ ವೈರಸ್ ಅಟ್ಟಹಾಸ: ದಕ್ಷಿಣ ಅಮೇರಿಕಾ ಹೊಸ ಕೇಂದ್ರಬಿಂದು!

ಯಾವುದಕ್ಕೆ ಎಷ್ಟೆಷ್ಟು.?

ಯಾವುದಕ್ಕೆ ಎಷ್ಟೆಷ್ಟು.?

ರೆಜಿಸ್ಟ್ರೇಷನ್ ಚಾರ್ಜಸ್ - 1,000 ರೂಪಾಯಿ,

ಕನ್ಸಲ್ಟಂಟ್ ಚಾರ್ಜಸ್ - 16,800 ರೂಪಾಯಿ,

ಪ್ಯಾಥಾಲಜಿ ಚಾರ್ಜಸ್ - 37,615 ರೂಪಾಯಿ,

ಐಸೋಲೇಷನ್ ಬೆಡ್ ಚಾರ್ಜಸ್ - 84,000 ( ಒಂದು ದಿನಕ್ಕೆ 6,000),

ಕೋವಿಡ್ ಕೇರ್ ಚಾರ್ಜಸ್ - 14,000 (ಒಂದು ದಿನಕ್ಕೆ 1,000),

ಮೆಡಿಸಿನ್ ಚಾರ್ಜ್ - 1,14,415 ರೂಪಾಯಿ.

ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗುವ ಹೊತ್ತಿಗೆ ಒಟ್ಟಾರೆ ತಗುಲಿದ ಚಿಕಿತ್ಸಾ ವೆಚ್ಚ 2,67,830 ರೂಪಾಯಿ.

ಉಪಯೋಗಕ್ಕೆ ಬಂದ ಆರೋಗ್ಯ ವಿಮೆ

ಉಪಯೋಗಕ್ಕೆ ಬಂದ ಆರೋಗ್ಯ ವಿಮೆ

ಸೋಂಕಿತ ವ್ಯಕ್ತಿಯ ಬಳಿ ಆರೋಗ್ಯ ವಿಮೆ ಇದ್ದ ಕಾರಣ, ಚಿಕಿತ್ಸೆ ಬಿಲ್ ಕ್ಲೇಮ್ ಆಗಿದೆ. ಹೀಗಾಗಿ ಸೋಂಕಿತನ ಜೇಬಿಗೆ ಹೆಚ್ಚು ಕತ್ತರಿ ಬಿದ್ದಿಲ್ಲ. ಒಂದು ವೇಳೆ ಆರೋಗ್ಯ ವಿಮೆ ಇಲ್ಲದೆ ಮಧ್ಯಮ ವರ್ಗದವರೇನಾದರೂ ಕೊರೊನಾ ವೈರಸ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದರೆ... ಕೊರೊನಾ ವೈರಸ್ ಸೋಂಕಿನಿಂದ ಬದುಕುಳಿದರೂ, ಚಿಕಿತ್ಸೆಯ ಬಿಲ್ ನೋಡಿ ದಿಗಿಲುಬೀಳುವುದು ಖಂಡಿತ.

ಕೊರೊನಾ ವೈರಸ್ ರೂಪಾಂತರ: ಚೀನಾದಿಂದ ಬಂತು ಮತ್ತೊಂದು ಬೆಚ್ಚಿಬೀಳಿಸುವ ಸುದ್ದಿ!ಕೊರೊನಾ ವೈರಸ್ ರೂಪಾಂತರ: ಚೀನಾದಿಂದ ಬಂತು ಮತ್ತೊಂದು ಬೆಚ್ಚಿಬೀಳಿಸುವ ಸುದ್ದಿ!

English summary
Private hospitals have been enrolled to treat COVID-19 patients, the big question is how much will that treatment cost. Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X