ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಪ್ಪರೆ ಮಗು.. ಕೊರೊನಾ ವೈರಸ್ ನ ಬಗ್ಗುಬಡಿದ 36 ದಿನದ ಹಸುಗೂಸು.!

|
Google Oneindia Kannada News

ಮುಂಬೈ, ಮೇ 28: ವಿಶ್ವದಾದ್ಯಂತ 57,92,992 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಡೆಡ್ಲಿ ಕೋವಿಡ್-19 ಗೆ 3,57,480 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ವೈರಸ್ ವಿರುದ್ಧ ಹೋರಾಡಿ 24,99,168 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

Recommended Video

ಆರ್ಥಿಕ ಸುನಾಮಿ ದೇಶವನ್ನು ಸಂಕಷ್ಟಕ್ಕೆ ದೂಡಿದೆ ಎಂದ ಡಿಕೆಶಿ | DK Shivakumar | Oneindia Kannada

ಭಾರತದಲ್ಲಿ ಈವರೆಗೂ 1,58,613 ಮಂದಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ. ಆ ಪೈಕಿ 4540 ಮಂದಿ ಮೃತಪಟ್ಟಿದ್ದು, 67,753 ಜನ ಗುಣಮುಖರಾಗಿದ್ದಾರೆ.

ಹಾಗೆ ಮಹಾಮಾರಿ ಕೊರೊನಾ ವೈರಸ್ ಅನ್ನು ಬಗ್ಗುಬಡಿದು ಗುಣಮುಖರಾದವರ ಪೈಕಿ 36 ದಿನದ ಹಸುಗೂಸು ಕೂಡ ಒಂದು ಅನ್ನೋದು ನೀವೆಲ್ಲರೂ ಗಮನಿಸಬೇಕಾದ ಅಚ್ಚರಿಯ ಸಂಗತಿ.!

ಸಾವನ್ನೇ ಗೆದ್ದುಬಂದ ಈ ಎಳೆಗೂಸಿಗೆ ಚಪ್ಪಾಳೆಯ ಸುರಿಮಳೆಸಾವನ್ನೇ ಗೆದ್ದುಬಂದ ಈ ಎಳೆಗೂಸಿಗೆ ಚಪ್ಪಾಳೆಯ ಸುರಿಮಳೆ

ಹೌದು, ಮಹಾರಾಷ್ಟ್ರದಲ್ಲಿ ಕೇವಲ 36 ದಿನಗಳ ಹಿಂದೆಯಷ್ಟೇ ಜನ್ಮ ತಾಳಿದ ಕಂದಮ್ಮ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಗೆಲುವು ಕಂಡಿದೆ. ಕೊರೊನಾ ವೈರಸ್ ಅನ್ನು ಸದೆಬಡಿಯುವಲ್ಲಿ 36 ದಿನದ ಹಸುಗೂಸು ಅಕ್ಷರಶಃ ಯಶಸ್ವಿಯಾಗಿದೆ.

ಕೋವಿಡ್-19 ನಿಂದ ಗುಣಮುಖವಾದ ಪುಟ್ಟ ಮಗು

ಕೋವಿಡ್-19 ನಿಂದ ಗುಣಮುಖವಾದ ಪುಟ್ಟ ಮಗು

ಮಹಾರಾಷ್ಟ್ರದಲ್ಲಿ ತಿಂಗಳ ಹಿಂದೆ ಹುಟ್ಟಿದ ಮಗುವಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿತ್ತು. ಇದೀಗ ಆ ಮಗು ಕೋವಿಡ್-19 ರೋಗದಿಂದ ಗುಣಮುಖವಾಗಿದೆ. ಸಂಪೂರ್ಣವಾಗಿ ಚೇತರಿಸಿಕೊಂಡ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವಾಗ ವೈದ್ಯರು ಮತ್ತು ನರ್ಸ್ ಚಪ್ಪಾಳೆ ತಟ್ಟಿ ಶಬ್ಬಾಸ್ ಹೇಳಿದ್ದಾರೆ.

ಒಳ್ಳೇ ಸುದ್ದಿ: ಆಗ್ರಾದಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆಒಳ್ಳೇ ಸುದ್ದಿ: ಆಗ್ರಾದಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ

ಚಪ್ಪಾಳೆ ತಟ್ಟಿದ ವೈದ್ಯರು

ಮುಂಬೈನಲ್ಲಿನ ಸಿಯಾನ್ ಆಸ್ಪತ್ರೆಯಿಂದ ಮಗು ಡಿಸ್ಚಾರ್ಜ್ ಆಗುವ ಸಂದರ್ಭದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ವಿಡಿಯೋವನ್ನು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಮಗುವಿಗೆ ಮತ್ತು ಚಿಕಿತ್ಸೆ ನೀಡಿದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಗೆ ಮಹಾರಾಷ್ಟ್ರ ಸಿಎಂ ಭೇಷ್ ಎಂದಿದ್ದಾರೆ.

ಚಪ್ಪಾಳೆ ತಟ್ಟಿದ ಪ್ರವಾಸೋದ್ಯಮ ಸಚಿವ

ಇದೇ ವಿಡಿಯೋವನ್ನು ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಕೂಡ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡು ಚಪ್ಪಾಳೆ ತಟ್ಟಿದ್ದಾರೆ.

ವೈರಲ್ ಆದ ವಿಡಿಯೋ

ವೈರಲ್ ಆದ ವಿಡಿಯೋ

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 3 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋನ ವೀಕ್ಷಿಸಿದ್ದು, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಹಸುಗೂಸು ಯಶಸ್ವಿಯಾಗಿರುವುದರಿಂದ ಹಲವರಿಗೆ ಜೀವದ ಮೇಲೆ ಭರವಸೆ ಮೂಡಿದೆ.

ಯಶವಂತಪುರದಲ್ಲಿ ಪವಾಡ: ಹಸುಗೂಸಿನ ಪಾಲಿಗೆ ಆಟೋ ಡ್ರೈವರ್ ಹೀರೋ!ಯಶವಂತಪುರದಲ್ಲಿ ಪವಾಡ: ಹಸುಗೂಸಿನ ಪಾಲಿಗೆ ಆಟೋ ಡ್ರೈವರ್ ಹೀರೋ!

English summary
36 day old baby recovered from Covid 19 in Maharashtra. Doctor and Nurses gave a big round of applause to the baby.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X