ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗಕಾಮ ರೋಗ ಲಕ್ಷಣವಲ್ಲ: ಮನೋರೋಗ ವೈದ್ಯರು

By Srinath
|
Google Oneindia Kannada News

ಮುಂಬೈ, ಫೆ. 7: ಅತ್ತ ಸುಪ್ರೀಂಕೋರ್ಟ್ 'ಸಲಿಂಗಕಾಮ ಮಹಾಪರಾಧ' ಎಂದು ಸಾರಿರುವ ಹೊತ್ತಿನಲ್ಲಿ ಸಲಿಂಗಕಾಮವನ್ನು ವೈದ್ಯಲೋಕ ಚಿಕಿತ್ಸಕ ದೃಷ್ಟಿಯಿಂದ ನೋಡಿದೆ.

ಸಲಿಂಗಕಾಮವು ಮಾನಸಿಕ ಅಸ್ವಸ್ಥತೆ ಅಥವಾ ರೋಗ ಲಕ್ಷಣವಲ್ಲ. ಅದು ಮನೋಶಾಸ್ತ್ರಜ್ಞರ ಚಿಕಿತ್ಸೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ದೇಶದ ಪ್ರಮುಖ ಮನೋರೋಗ ವೈದ್ಯರುಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Homosexuality is not a disease says Indian Psychiatric Society Mumbai
ಕಳೆದ ತಿಂಗಳು ಸಲಿಂಗಕಾಮದ ಬಗ್ಗೆ (homosexuality) ಸಂಸ್ಥೆಯ ಮಾಜಿ ಅಧ್ಯಕ್ಷೆ ಡಾ. ಇಂದಿರಾ ಶರ್ಮಾ ಅವರು ನೀಡಿದ್ದ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮನೋರೋಗ ವೈದ್ಯರುಗಳ ಮಹಾಸಂಸ್ಥೆಯಾದ Indian Psychiatric Society (IPS) ಈ ಪ್ರತಿಕ್ರಿಯೆ ನೀಡಿದೆ.

'ಸಲಿಂಗಕಾಮಿಗಳು, ಸಲಿಂಗಕಾಮ ವಿಷಯವನ್ನು ರಸ್ತೆಗೆ ತಂದಿದ್ದಾರೆ. ಇದರಿಂದ ಜನ ಇರುಸುಮುರುಸುಗೊಂಡಿದ್ದಾರೆ. ಅದು ಅಸ್ವಾಭಾವಿಕ. ನಮ್ಮ ಸಮಾಜ ಸೆಕ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡಲು ಇಚ್ಛಿಸುವುದಿಲ್ಲ. ಅದು ತೀರಾ ಖಾಸಗಿತನದ್ದು' ಎಂದು ಡಾ. ಇಂದಿರಾ ಶರ್ಮಾ ಅವರು ತಟಸ್ಥ ಹೇಳಿಕೆ ನೀಡಿದ್ದರು.

ಇದರ ವಿರುದ್ಧ ಸಲಿಂಗ ರತಿ ಸ್ತ್ರೀ-ಪುರುಷ ಸಮುದಾಯವು IPSಗೆ ದೂರು ನೀಡಿತ್ತು. ಚಾಲ್ತಿಯಲ್ಲಿರುವ ಮನೋಶಾಸ್ತ್ರದ ವೈಜ್ಞಾನಿಕ ಸಾಕ್ಷ್ಯಗಳು ಮತ್ತು ಉತ್ತಮ ಪದ್ಧತಿಗಳನ್ನು ಆಧಾರವಾಗಿಸಿಕೊಂಡು ಸಲಿಂಗಕಾಮವು ಮಾನಸಿಕ ರೋಗ ಲಕ್ಷಣವಲ್ಲ ಎಂದು ಹೇಳಲು ಯಾವುದೇ ಅಡ್ಡಿಯಿಲ್ಲ. ಅದು ಮನೋಶಾಸ್ತ್ರಜ್ಞರ ವ್ಯಾಪ್ತಿಗೆ ಒಳಪಡುವುದಿಲ್ಲ' ಎಂದು IPS ಹಾಲಿ ಅಧ್ಯಕ್ಷ ಡಾ. ಡಿವಿ ಅಶೋಕನ್ ಹೇಳಿದ್ದಾರೆ.

English summary
Homosexuality is not a disease says Indian Psychiatric Society. The Indian Psychiatric Society (IPS), an umbrella body for psychiatrists across the country, said this in response to the furore over its former president Dr Indira Sharma's statement on homosexuality last month. Dr Sharma had said "The manner in which homosexuals have brought the talk of sex to the roads makes people uncomfortable. It's unnatural. Heterosexuals don't talk about sex. It is a private matter.''
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X