• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೇರವಾಗಿ ಸೋನಿಯಾ ಗಾಂಧಿಯನ್ನು ಗುರಿಯಾಗಿಸಿದ ಕಂಗನಾ ರಣಾವತ್

|

ಮುಂಬೈ, ಸೆ 11: ಶಿವಸೇನೆ ಮತ್ತು ಮಹಾರಾಷ್ಟ್ರದ ಉದ್ದವ್ ಠಾಕ್ರೆ ಸರಕಾರದ ವಿರುದ್ದ ಕಿಡಿಕಾರುತ್ತಿರುವ ಬಾಲಿವುಡ್ ನಟಿ ಕಂಗನ್ ರಣಾವತ್, ಈಗ, ನೇರವಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಟಾರ್ಗೆಟ್ ಮಾಡಿ ಟ್ವೀಟ್ ಮಾಡಿದ್ದಾರೆ.

ತನ್ನ ಕಚೇರಿಯನ್ನು ಧ್ವಂಸ ಮಾಡಿರುವುದು ಮಹಾರಾಷ್ಟ್ರ ಸರಕಾರ ನನಗೆ ಕೊಡುತ್ತಿರುವ ಕಿರುಕುಳ ಎಂದು ಹೇಳಿರುವ ಕಂಗನಾ, ಇಲ್ಲಿ ಮೈತ್ರಿ ಸರಕಾರ ಇರುವುದರಿಂದ, ಕಾಂಗ್ರೆಸ್ ಕೂಡಾ ಇದಕ್ಕೆ ಜಬಾಬ್ದಾರಿ ಎಂದಿದ್ದಾರೆ.

ಮುಂಬೈಗೆ ಬಂದಿಳಿಯುತ್ತಿದ್ದಂತೆಯೇ ಸಿಎಂ ಉದ್ಧವ್ ಠಾಕ್ರೆಗೆ ಕಂಗನಾ ಬಹಿರಂಗ ಸವಾಲು

"ಇತಿಹಾಸ ನಿಮ್ಮ ಮೌನವನ್ನು ನಿರ್ಣಯಿಸುತ್ತದೆ" ಎಂದು ಸೋನಿಯಾ ಗಾಂಧಿ ಹೆಸರು ಉಲ್ಲೇಖಿಸಿ ಕಂಗನಾ ಟ್ವೀಟ್ ಮಾಡಿದ್ದಾರೆ. "ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಜಿ, ಮಹಾರಾಷ್ಟ್ರ ಸರಕಾರ ನನಗೆ ಕೊಡುತ್ತಿರುವ ಕಿರುಕುಳದಿಂದ ನೀವು ದುಃಖಿತರಾಗಿಲ್ಲವೇ"ಎಂದು ಪ್ರಶ್ನಿಸಿದ್ದಾರೆ.

"ಡಾ.ಅಂಬೇಡ್ಕರ್ ನಮಗೆ ನೀಡಿರುವ ಸಂವಿಧಾನದ ತತ್ವಗಳನ್ನು ಎತ್ತಿ ಹಿಡಿಯುವಂತೆ ಕೋರಲು, ನಿಮ್ಮ ಸರಕಾರಕ್ಕೆ ಸೂಚಿಸಲು ನಿಮಗೆ ಸಾಧ್ಯವಿಲ್ಲವೇ"ಎಂದು ಕಂಗನಾ, ಟ್ವೀಟ್ ನಲ್ಲಿ ಸೋನಿಯಾ ಗಾಂಧಿಯವರನ್ನು ಪ್ರಶ್ನಿಸಿದ್ದಾರೆ.

"ನೀವು ಪಶ್ಚಿಮದಲ್ಲಿ ಹುಟ್ಟಿ ಬೆಳೆದು ಭಾರತದಲ್ಲಿ ನೆಲೆಸಿದ್ದೀರಿ. ಮಹಿಳೆಯರು ಹೋರಾಟದ ಬಗ್ಗೆ ನಿಮಗೆ ಗೊತ್ತಿರಬಹುದು. ನಿಮ್ಮ ಸರಕಾರ ಮಹಿಳೆಗೆ ಕಿರುಕುಳ ನೀಡಿ, ವ್ಯವಸ್ಥೆಯನ್ನು ಅಪಹಾಸ್ಯ ಮಾಡುತ್ತಿದೆ. ನಿಮ್ಮ ಮೌನವನ್ನು ಇತಿಹಾಸ ನಿರ್ಣಯಿಸುತ್ತದೆ. ನೀವು ಈ ವಿಚಾರದಲ್ಲಿ ಮಧ್ಯಪ್ರವೇಶಿಸುತ್ತೀರಿ ಎಂದು ನಂಬಿದ್ದೇನೆ"ಎಂದು ಕಂಗನಾ ರಣಾವತ್ ಟ್ವೀಟ್ ನಲ್ಲಿ ಹೇಳಿದ್ದಾರೆ.

"ಬನ್ನಿ..ಉದ್ಧವ್ ಠಾಕ್ರೆ ಮತ್ತು ಕರಣ್ ಜೋಹರ್ ಗ್ಯಾಂಗ್, ನೀವು ನನ್ನ ಕಚೇರಿಯನ್ನು ನೆಲಸಮಗೊಳಿಸಿದಿರಿ, ಬನ್ನಿ ನನ್ನ ಮನೆ, ದೇಹವನ್ನೂ ನೆಲಸಮ ಮಾಡಿ. ಇಡೀ ಜಗತ್ತೇ ನೀವು ಮಾಡುತ್ತಿರುವುದನ್ನು ನೋಡಲಿ. ನಾನು ಸಾಯಲಿ ಅಥವಾ ಬದಕಲಿ, ನಿಮ್ಮ ಎಲ್ಲಾ ವಿಷಯಗಳನ್ನು ಬಹಿರಂಗಗೊಳಿಸದೇ ಬಿಡುವುದಿಲ್ಲ"ಎಂದು ಕಂಗನಾ ರಣಾವತ್, ಸವಾಲು ಹಾಕಿದ್ದರು.

English summary
History Will Judge Your Silence: Bollywood Actres Kangana Ranaut Tweet To Sonia Gandhi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X