• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸನ್‌ಬರ್ನ್‌ ಉತ್ಸವದಲ್ಲಿ ದಾಳಿಗೆ ಸಂಚು ಮಾಡಿದ್ದ ಸನಾತನ ಸಂಸ್ಥಾ: ಎಟಿಎಸ್

|

ಮುಂಬೈ, ಆಗಸ್ಟ್ 29: ಇತ್ತೀಚೆಗೆ ಬಂಧಿತರಾಗಿದ್ದ ಬಲಪಂಥೀಯ ಸಂಘಟನೆ ಸನಾತನ ಸಂಸ್ಥಾದ ಐವರು ಬೆಂಬಲಿಗರು ಪುಣೆಯಲ್ಲಿ ಕಳೆದ ವರ್ಷ ನಡೆದ 'ಸನ್‌ಬರ್ನ್' ವಾರ್ಷಿಕ ಸಂಗೀತ-ನೃತ್ಯ ಕಾರ್ಯಕ್ರಮದಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್) ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.

ಶಸ್ತ್ರಾಸ್ತ್ರ ಪ್ರಕರಣವೊಂದರಲ್ಲಿ ಈ ಐವರನ್ನು ಈ ತಿಂಗಳ ಆರಂಭದಲ್ಲಿ ನಲ್ಲಾಸೊಪಾರ, ಪುಣೆ ಮತ್ತು ಜಲ್ನಾಗಳಿಂದ ಬಂಧಿಸಲಾಗಿತ್ತು.

ಸನಾತನ ಸಂಸ್ಥೆ ಸದಸ್ಯನ ಮನೆ ಮೇಲೆ ದಾಳಿ, 8 ಬಾಂಬ್ ವಶ

ಕಾನೂನು ವಿರೋಧಿ ಚಟುವಟಿಕೆಗಳ (ತಡೆ) ಕಾಯ್ದೆ ಪ್ರಕರಣಗಳನ್ನು ಇತ್ಯರ್ಥಪಡಿಸಲೆಂದೇ ವಿಶೇಷವಾಗಿ ರಚಿಸಿರುವ ನ್ಯಾಯಾಲಯದಲ್ಲಿ ಆರೋಪಿಗಳನ್ನು ಮಂಗಳವಾರ ಹಾಜರುಪಡಿಸಲಾಯಿತು.

ಈ ಐವರಿಗೂ ತಮ್ಮ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಸನಾತನ ಸಂಸ್ಥಾ ಹೇಳಿಕೆ ನೀಡಿತ್ತು.

ಎಟಿಎಸ್ ಕಸ್ಟಡಿ ವಿಸ್ತರಣೆ

ಎಟಿಎಸ್ ಕಸ್ಟಡಿ ವಿಸ್ತರಣೆ

ಐವರು ಆರೋಪಿಗಳ ಪೈಕಿ ವೈಭವ್ ರಾವತ್, ಶರದ್ ಕಳಾಸ್ಕರ್, ಸುಧನ್ವ ಗೊಂದಳೇಕರ್ ಮತ್ತು ಶ್ರೀಕಾಂತ್ ಪಂಗಾರ್ಕರ್ ಅವರನ್ನು ಹಾಜರುಪಡಿಸಿದ ಎಟಿಎಸ್, ಆರೋಪಿಗಳ ಕಸ್ಟಡಿಯ ಅವಧಿಯ ವಿಸ್ತರಣೆಗೆ ಮನವಿ ಮಾಡಿತು. ಅದನ್ನು ಮಾನ್ಯಮಾಡಿದ ನ್ಯಾಯಾಧೀಶ ಸಮೀರ್ ಅಡ್ಕರ್, ಏಳು ದಿನಗಳವರೆಗೆ ಕಸ್ಟಡಿಯನ್ನು ವಿಸ್ತರಿಸಿದರು. ಐದನೇ ಆರೋಪಿ ಅವಿನಾಶ್ ಪವಾರ್‌ನನ್ನು ಆಗಸ್ಟ್ 31ರಂದು ಕೋರ್ಟ್‌ಗೆ ಹಾಜರುಪಡಿಸಲಾಗುವುದು.

ಗೌರಿ ಹತ್ಯೆಯಲ್ಲಿ ಸನಾತನ ಸಂಸ್ಥೆ ಕೈವಾಡ ಸಾಬೀತಾಗಿಲ್ಲ: ಪರಂ

ದಾಳಿಗೆ ಸಂಚು ರೂಪಿಸಿದ್ದರು

ದಾಳಿಗೆ ಸಂಚು ರೂಪಿಸಿದ್ದರು

ಆರೋಪಿಗಳಲ್ಲಿ ಗೊಂದಳೇಕರ್ ಮತ್ತು ರಾವತ್ ಇಬ್ಬರೂ 2017ರ ಡಿಸೆಂಬರ್‌ನಲ್ಲಿ ಪುಣೆಯಲ್ಲಿ ನಡೆದ ಸಂಗೀತ ಹಬ್ಬದ ಕಾರ್ಯಕ್ರಮದಲ್ಲಿ ಸ್ಫೋಟ ನಡೆಸಲು ಉದ್ದೇಶಿಸಿದ್ದರು. ಈ ಕಾರ್ಯಕ್ರಮವು ಹಿಂದೂ ಸಂಸ್ಕೃತಿಗೆ ವಿರುದ್ಧವಾದ ಕಾರಣಕ್ಕೆ ದಾಳಿಗೆ ಅವರು ಮುಂದಾಗಿದ್ದರು ಎಂದು ಎಟಿಎಸ್ ತಿಳಿಸಿದೆ.

ಸನ್‌ಬರ್ನ್ ಕಾರ್ಯಕ್ರಮವು 2015ರವರೆಗೂ ಗೋವಾದಲ್ಲಿ ನಡೆಯುತ್ತಿತ್ತು. 2016ರಿಂದ ಅದು ಪುಣೆಗೆ ಸ್ಥಳಾಂತರಗೊಂಡಿತ್ತು.

ಗೌರಿ ಲಂಕೇಶ್ ಹತ್ಯೆ: ಪುಣೆಯಲ್ಲಿ ಮತ್ತೊಂದು ಬೈಕ್ ಪತ್ತೆ

ಕರ್ನಾಟಕದಲ್ಲಿಯೂ ದಾಳಿ

ಕರ್ನಾಟಕದಲ್ಲಿಯೂ ದಾಳಿ

'ಪದ್ಮಾವತ್' ಸಿನಿಮಾ ಪ್ರದರ್ಶನ ವಿರೋಧಿಸಿ ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ಮತ್ತು ಕರ್ನಾಟಕದ ಬೆಳಗಾವಿಯಲ್ಲಿ ಚಿತ್ರಮಂದಿರಗಳ ಹೊರಗೆ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣದಲ್ಲಿ ಈ ಐವರೂ ಭಾಗಿಯಾಗಿದ್ದರು ಎಂದೂ ಎಟಿಎಸ್ ಹೇಳಿದೆ.

ವ್ಯಕ್ತಿಗಳ ಮೇಲೆ ದಾಳಿಗೆ ಸಂಚು

ವ್ಯಕ್ತಿಗಳ ಮೇಲೆ ದಾಳಿಗೆ ಸಂಚು

ಹಿಂದೂ ಧರ್ಮದ ವಿರುದ್ಧದ ಚಟುವಟಿಕೆಗಳಲ್ಲಿ ಅಥವಾ ಪ್ರಚಾರಗಳಲ್ಲಿ ತೊಡಗಿದ್ದಾರೆ ಎಂಬ ಭಾವನೆ ಬರುವ ವ್ಯಕ್ತಿಗಳ ಮೇಲೆ ಈ ಆರೋಪಿಗಳು ದಾಳಿ ನಡೆಸಲು ಉದ್ದೇಶಿಸಿದ್ದರು.

ಆ ವ್ಯಕ್ತಿಗಳು ಯಾರು ಎಂಬುದನ್ನು ಬಹಿರಂಗಪಡಿಸಲು ಎಟಿಎಸ್ ಮುಖ್ಯಸ್ಥ ಅತುಲ್‌ಚಂದ್ರ ಕುಲಕರ್ಣಿ ನಿರಾಕರಿಸಿದ್ದಾರೆ. ಆ ವ್ಯಕ್ತಿಗಳ ಭದ್ರತೆಗೆ ಧಕ್ಕೆ ಉಂಟಾಗುವ ಕಾರಣದಿಂದ ಆ ವ್ಯಕ್ತಿಗಳ ಹೆಸರನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಮರಾಠಿ ದಿನಪತ್ರಿಕೆಯೊಂದರ ಸಂಪಾದಕರಾಗಿದ್ದ, ಬರಹಗಾರ-ಇತಿಹಾಸಕಾರೊಬ್ಬರು ಸೇರಿದಂತೆ ಮೂವರು ಮರಾಠಿ ಲೇಖಕರು ಹಾಗೂ ನಾಟಕಕಾರರು ಈ ಪಟ್ಟಿಯಲ್ಲಿ ಇದ್ದಾರೆ ಎಂದು ಎಟಿಎಸ್‌ನ ಮೂಲಗಳು ತಿಳಿಸಿವೆ.

ಒಂದು ಬೈಕ್ ಗೌರಿ ಹತ್ಯೆಗೆ ಬಳಸಿದ್ದು

ಒಂದು ಬೈಕ್ ಗೌರಿ ಹತ್ಯೆಗೆ ಬಳಸಿದ್ದು

ನಲ್ಲಾಸೋಪಾರದಲ್ಲಿ ಒಂದು ಮತ್ತು ಪುಣೆಯಲ್ಲಿ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂರೂ ಶರದ್ ಕಳಾಸ್ಕರ್‌ಗೆ ಸೇರಿದ ಬೈಕ್‌ಗಳಾಗಿದ್ದು, 2017ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆಗೆ ಒಂದು ಬೈಕ್‌ಅನ್ನು ಬಳಸಿರಬಹುದು ಎಂದು ಎಟಿಎಸ್ ಅಧಿಕಾರಿಗಳು ಹೇಳಿದ್ದಾರೆ.

ಶಸ್ತ್ರಾಸ್ತ್ರಗಳ ವಶ

ಶಸ್ತ್ರಾಸ್ತ್ರಗಳ ವಶ

ಮಹಾರಾಷ್ಟ್ರದ ವಿವಿಧೆಡೆ ದಾಳಿ ನಡೆಸಿದ್ದ ಎಟಿಎಸ್ ಪೊಲೀಸರು 10 ಪಿಸ್ತೂಲು, ಒಂದು ಏರ್ ಪಿಸ್ತೂಲ್, ಒಂದು ದೇಶಿ ನಿರ್ಮಿತ ರಿವಾಲ್ವರ್, 10 ಪಿಸ್ತೂಲ್ ಬ್ಯಾರೆಲ್, ಆರು ಪಿಸ್ತೂಲ್ ಬಾಡಿಗಳು, ಆರು ಮ್ಯಾಗಜಿನ್‌ಗಳು, ಮೂರು ಸ್ವತಃ ನಿರ್ಮಿತ ಮ್ಯಾಗಜಿನ್‌ಗಳು, ಒಂದು ಅರ್ಧ ತಯಾರಿಸಿದ್ದ ಸ್ವದೇಶಿ ರಿವಾಲ್ವರ್ ಮತ್ತು ಗೊಂದಳೇಕರ್‌ನಿಂದ ಏಳು ಸ್ವದೇಶಿ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದರು.ಟಿಎಸ್ ಪರವಾಗಿ ಹಾಜರಾಗಿದ್ದ ಪ್ರಾಸಿಕ್ಯೂಟರ್ ಸುನಿಲ್ ಗೋನ್ಸಲ್ವೆಸ್, ಈ ಆರೋಪಿಗಳು ಬಂಧನದಿಂದ ತಪ್ಪಿಸಿಕೊಳ್ಳಲು ತಾವು ಬಳಸಿದ ಶಸ್ತ್ರಾಸ್ತ್ರಗಳನ್ನು ಛಿದ್ರಮಾಡಿದ್ದಾರೆ ಮತ್ತು ವಿವಿಧೆಡೆ ಎಸೆದಿದ್ದಾರೆ. ಅವುಗಳನ್ನು ವಶಕ್ಕೆ ತೆಗೆದುಕೊಳ್ಳಬೇಕಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.ಮಹಾರಾಷ್ಟ್ರದ ವಿವಿಧೆಡೆ ದಾಳಿ ನಡೆಸಿದ್ದ ಎಟಿಎಸ್ ಪೊಲೀಸರು 10 ಪಿಸ್ತೂಲು, ಒಂದು ಏರ್ ಪಿಸ್ತೂಲ್, ಒಂದು ದೇಶಿ ನಿರ್ಮಿತ ರಿವಾಲ್ವರ್, 10 ಪಿಸ್ತೂಲ್ ಬ್ಯಾರೆಲ್, ಆರು ಪಿಸ್ತೂಲ್ ಬಾಡಿಗಳು, ಆರು ಮ್ಯಾಗಜಿನ್‌ಗಳು, ಮೂರು ಸ್ವತಃ ನಿರ್ಮಿತ ಮ್ಯಾಗಜಿನ್‌ಗಳು, ಒಂದು ಅರ್ಧ ತಯಾರಿಸಿದ್ದ ಸ್ವದೇಶಿ ರಿವಾಲ್ವರ್ ಮತ್ತು ಗೊಂದಳೇಕರ್‌ನಿಂದ ಏಳು ಸ್ವದೇಶಿ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದರು.

ಎಟಿಎಸ್ ಪರವಾಗಿ ಹಾಜರಾಗಿದ್ದ ಪ್ರಾಸಿಕ್ಯೂಟರ್ ಸುನಿಲ್ ಗೋನ್ಸಲ್ವೆಸ್, ಈ ಆರೋಪಿಗಳು ಬಂಧನದಿಂದ ತಪ್ಪಿಸಿಕೊಳ್ಳಲು ತಾವು ಬಳಸಿದ ಶಸ್ತ್ರಾಸ್ತ್ರಗಳನ್ನು ಛಿದ್ರಮಾಡಿದ್ದಾರೆ ಮತ್ತು ವಿವಿಧೆಡೆ ಎಸೆದಿದ್ದಾರೆ. ಅವುಗಳನ್ನು ವಶಕ್ಕೆ ತೆಗೆದುಕೊಳ್ಳಬೇಕಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Maharashtra's ATS claimed the five arrested sympathisers of the Sanatan Sanstha planned to plant exposives at 2017 Sunburn festival at Pune.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more