ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ನಿರ್ಮಾಣವಾಗಲಿದೆ ಶಿವಾಜಿ ಪ್ರತಿಮೆ

By Srinath
|
Google Oneindia Kannada News

Highest Chhatrapati Shivaji statue in Arabian Sea off Chowpatty shore Mumbai
ಮುಂಬೈ, ಫೆ.6- ಅತ್ತ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನಿರ್ಮಿಸುತ್ತಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬೃಹತ್ ಪ್ರತಿಮೆಗಿಂತಲೂ ಎತ್ತರದ ಛತ್ರಪತಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಿದೆ. ಇದರೊಂದಿಗೆ ಲೋಕಸಭೆ ಚುನಾವಣೆ ಕಾಲದಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ 'statue war' ಶುರುವಾಗಿದೆ. ಇವರಿಬ್ಬರ ಪೈಕಿ ಮತದಾರ ಮಾತ್ರ ಯಾರಿಗೆ 'ಸ್ಟಾಚ್ಯೂ' ಹೇಳುತ್ತಾರೋ ಇನ್ನು ಮೂರೇ ತಿಂಗಳಲ್ಲಿ ಗೊತ್ತಾಗಲಿದೆ.

ಈ ಸಂಬಂಧ ಮಹಾರಾಷ್ಟ್ರ ಸರಕಾರವು 100 ಕೋಟಿ ರೂ ವ್ಯಯಿಸಲಿದೆ. ಚೌಪಟ್ಟಿ ತೀರದಿಂದ ಒಂದು ಕಿಮೀ ದೂರದಲ್ಲಿ ಅರಬ್ಬೀ ಸಮುದ್ರದಲ್ಲಿ ಈ ಬೃಹತ್ ಪ್ರತಿಮೆ ತಲೆಯೆತ್ತಲಿದೆಯಾದರೂ ಮರಾಠಾ ರಾಜ ಛತ್ರಪತಿ ಶಿವಾಜಿ ಅವರ ಪ್ರತಿಮೆಯ ಎತ್ತರ ಎಷ್ಟಿರಬೇಕು ಎಂಬುದನ್ನು ರಾಜ್ಯ ಸರಕಾರ ಇನ್ನೂ ನಿರ್ಧರಿಸಿಲ್ಲ.

ಮೂಲಗಳ ಪ್ರಕಾರ ಶಿವಾಜಿ ಪ್ರತಿಮೆಯು 300 ಅಡಿ ಎತ್ತರದಲ್ಲಿರಲಿದೆ. ಅಂದಹಾಗೆ ನರ್ಮದಾ ನದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸರ್ದಾರ್ ಪಟೇಲ್ ಪ್ರತಿಮೆಯು 2,400 ಕೋಟಿ ರೂ ವೆಚ್ಚದಲ್ಲಿ, 182 ಮೀಟರ್ ಎತ್ತರದ್ದಾಗಲಿದೆ.

ಯೋಜನೆ ಹಳೆಯದ್ದೇ ಆದರೂ ಪರಿಸರ ಇಲಾಖೆಯ ಅನುಮೋದನೆ ತಡವಾಗಿ ಬಂದ ಕಾರಣ ಪ್ರತಿಮೆ ಸ್ಥಾಪನೆ ಕಾರ್ಯ ವಿಳಂಬವಾಗಿತ್ತು. ಆದರೆ ಈಗ ಎಲ್ಲವೂ ಸುಸೂತ್ರವಾಗಿ ನಡೆದಿದ್ದು, ಸದ್ಯದಲ್ಲೇ ಬೃಹತ್ ಕಲ್ಲಿನ ಶಿಲ್ಪವು ಶಿವಾಜಿ ರೂಪದಲ್ಲಿ ತಲೆಯೆತ್ತಲಿದೆ. (ಚಿತ್ರ ಕೃಪೆ: ವಿಕಿಪೀಡಿಯಾ)

ಸಮುದ್ರದಲ್ಲಿ 16 ಹೆಕ್ಟೇರ್ ವಿಸ್ತೀರ್ಣದಲ್ಲಿ ಕಲ್ಲಿನ ಬಂಡೆಯ ಮೇಲೆ ಶಿವಾಜಿ ಶಿಲ್ಪ ಕಾಣಿಸಿಕೊಳ್ಳಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ತಿಳಿಸಿದ್ದಾರೆ. ಯೋಜನೆಯು Coastal Regulation Zone-4 ಅಪಾಯಕಾರಿ ವಲಯದಲ್ಲಿ ತಲೆಯೆತ್ತಲಿದೆಯಾದರೂ ವೀಶೇಷ ಪ್ರಕರಣವೆಂದು ಪರಿಗಣಿಸಿ, ಕೇಂದ್ರ ಸರಕಾರವೂ ಈಗಾಗಲೇ ಅನುಮತಿ ನೀಡಿದೆ.

English summary
Highest Chhatrapati Shivaji statue in Arabian Sea off Chowpatty shore Mumbai. It will be erected when Lok Sabha polls is round the corner and BJP Prime Minister candidate Narendra Modi is all set construct Sardar Vallabhbhai Patel's huge statue. The statue will be constructed on an artificial island a kilometre away in the Arabian Sea off the Marin Lines-Chowpati shore of Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X