• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದ ಸಮಾಜಶಾಸ್ತ್ರ ಪಠ್ಯಪುಸ್ತಕದಲ್ಲಿ ವರದಕ್ಷಿಣೆ ಪಾಠ ಹೀಗೂ ಉಂಟು!

|
Google Oneindia Kannada News

ಮುಂಬೈ, ಫೆಬ್ರವರಿ 2: 'ಕುರೂಪ' ಮತ್ತು 'ಅಂಗವೈಕಲ್ಯ'ವೇ ಹೆಣ್ಣಮಕ್ಕಳ ಪೋಷಕರಿಗೆ ವರದಕ್ಷಿಣೆಗಾಗಿ ಬೇಡಿಕೆ ಇಡಲು ಕಾರಣ. -ಇದು ಮಹಾರಾಷ್ಟ್ರದಲ್ಲಿ ಹನ್ನೆರಡನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದಲ್ಲಿ ಇರುವ ಸಾಲುಗಳು. ಸಮಾಜಶಾಸ್ತ್ರದ ಪುಸ್ತಕದಲ್ಲಿ "ಭಾರತದ ಪ್ರಮುಖ ಸಾಮಾಜಿಕ ಸಮಸ್ಯೆಗಳು' ಎಂಬ ಶೀರ್ಷಿಕೆಯಲ್ಲಿ ಬರುವ ಪಾಠದಲ್ಲಿ ಈ ಸಾಲುಗಳಿವೆ.

ಅಲ್ಲಿನ ರಾಜ್ಯ ಪ್ರೌಢ ಹಾಗೂ ಉನ್ನತ ಪ್ರೌಢ ಶಿಕ್ಷಣ ಮಂಡಳಿಯಿಂದ ಈ ಪಠ್ಯಪುಸ್ತಕಕ್ಕೆ ಅನುಮತಿ ಕೂಡ ಸಿಕ್ಕಿದೆ. 'ಒಂದು ವೇಳೆ ಹುಡುಗಿ ಕುರೂಪಿ ಅಥವಾ ಅಂಗವಿಕಲೆ ಆಗಿದ್ದರೆ ಆಕೆಗೆ ಮದುವೆ ಆಗುವುದು ಕಷ್ಟ' ಎಂದು ಪಾಠ-3 ವರದಕ್ಷಿಣೆ ಎಂಬ ಭಾಗದಲ್ಲಿ ಇದೆ. "ಇಂಥ ಹೆಣ್ಣುಮಕ್ಕಳನ್ನು ಮದುವೆ ಆಗುವುದಕ್ಕೆ ಹುಡುಗ ಮತ್ತು ಆತನ ಕಡೆಯವರು ಹೆಚ್ಚು ವರದಕ್ಷಿಣೆಗೆ ಬೇಡಿಕೆ ಇಡುತ್ತಾರೆ.[ಜಗತ್ತಿನ ದುಬಾರಿ ನಗರಗಳಲ್ಲಿ ಮುಂಬೈಗೆ 2ನೇ ಸ್ಥಾನ!]

"ಅಂಥ ಹುಡುಗಿಯ ಪೋಷಕರು ಅಸಹಾಯಕರಾಗಿರುತ್ತಾರೆ. ಕೇಳಿದಷ್ಟು ವರದಕ್ಷಿಣೆಯನ್ನು ಕೊಡ್ತಾರೆ" ಎಂದು ಪಠ್ಯಪುಸ್ತಕದಲ್ಲಿದೆ. ಇನ್ನೂ ಮುಂದುವರಿದು, ಧರ್ಮ, ಜಾತಿ ಹಾಗೂ ಸಾಮಾಜಿಕ ಪ್ರತಿಷ್ಠೆ ಕೂಡ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಡಲು ಕಾರಣ ಎಂದು ಹೇಳಲಾಗಿದೆ.

ತಮ್ಮ ಮಗಳಿಗೆ ಸೂಕ್ತ ವರ ಸಿಗಬೇಕು ಅಂದರೆ ಕೂಡ ಹೆಚ್ಚಿನ ವರದಕ್ಷಿಣೆ ಕೊಡಬೇಕು ಎಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಈ ವಿಚಾರದ ಬಗ್ಗೆ ಗಮನ ಹರಿಸ್ತೀವಿ ಎಂದು ಉತ್ತರಿಸಿದ್ದಾರೆ. ಈ ಪಠ್ಯಪುಸ್ತಕವು 2013ರಲ್ಲಿ ಮುದ್ರಣವಾಗಿದ್ದು, ಈ ವರೆಗೆ ಸಾವಿರಾರು ಮಂದಿ ಓದಿದ್ದಾರೆ.[49 ಲಕ್ಷದಷ್ಟು ವಿದ್ಯುತ್ ಕಳವು, ನಟಿ ರತಿ ಅಗ್ನಿಹೋತ್ರಿ ದಂಪತಿ ವಿರುದ್ಧ ದೂರು]

ಕೆಲವು ಉಪನ್ಯಾಸಕರು ಈ ಪಠ್ಯ ಕಂಡು ದಿಗ್ಭ್ರಮೆಯಾಗಿ, ಅದೊಂದು ವಿವಾದಾತ್ಮಕ ಪಾಠದ ಭಾಗವನ್ನು ಮಾಡುವುದೇ ಬಿಟ್ಟಿದ್ದಾರೆ.

English summary
"Ugliness" and disability are listed among the reasons for dowry demands made to the parents of a bride, in a Class 12 schoolbook in Maharashtra. The outrageous statement is part of a chapter in the sociology textbook titled "Major Social Problems in India".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X