ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಭಾರೀ ಮಳೆ: 17 ಎನ್‌ಡಿಆರ್‌ಎಫ್‌ ತಂಡ ನಿಯೋಜನೆ

|
Google Oneindia Kannada News

ಮುಂಬೈ,ಜು.7: ಮುಂಬೈ ಮತ್ತು ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಭಾರೀ ಮಳೆ ಮುಂದುವರೆದಿದೆ. ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಹಳದಿ ಅಲರ್ಟ್ ಘೋಷಿಸಿ ಮಹಾರಾಷ್ಟ್ರದಲ್ಲಿ ಎನ್‌ಡಿಆರ್‌ಎಫ್‌ನ 17 ತಂಡಗಳನ್ನು ನಿಯೋಜಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಅತಿ ಹೆಚ್ಚು ಮಳೆಯಾಗುತ್ತಿದ್ದು, ಸರ್ಕಾರವು 17 ತಂಡಗಳನ್ನು ಸಹಾಯಕ್ಕೆ ಕೋರಿತ್ತು . ಈಗ 17 ತಂಡಗಳನ್ನು ಪರಿಹಾರ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇವನ್ನು ಮುಂಬೈ, ಥಾಣೆ ಇತರೆಡೆಗಳಲ್ಲಿ ನಿಯೋಜಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ಡಿಜಿ ಕರ್ವಾಲ್ ಎಎನ್‌ಐಗೆ ತಿಳಿಸಿದ್ದಾರೆ.

Breaking; ವಿಡಿಯೋ, ಮುಂಬೈನಲ್ಲಿ ಮಳೆಯ ಅಬ್ಬರBreaking; ವಿಡಿಯೋ, ಮುಂಬೈನಲ್ಲಿ ಮಳೆಯ ಅಬ್ಬರ

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರತಾಪಗಢ ಕೋಟೆ ಬಳಿ ಬುಧವಾರ ರಾತ್ರಿಯ ಭಾರೀ ಮಳೆಯ ನಂತರ ಭೂಕುಸಿತ ಕಂಡು ಬಂದಿದೆ. ದಾದರ್ ಮತ್ತು ಸಿಯೋನ್ ಪ್ರದೇಶಗಳು ಜಲಾವೃತಗೊಂಡಿದ್ದು, ಪೊವಾಯಿ ಸರೋವರವು ಮಳೆಯ ಕಾರಣದಿಂದ ತುಂಬಿ ಹರಿಯಲಾರಂಭಿಸಿದೆ.

ಮಂಗಳವಾರ ಮುಂಬೈನ ಘಾಟ್‌ಕೋಪರ್‌ನ ಪಂಚಶೀಲ ನಗರದಲ್ಲಿ ಭಾರೀ ಮಳೆಯ ನಡುವೆ ಭೂಕುಸಿತ ಸಂಭವಿಸಿ, ಮನೆ ನೆಲಸಮವಾಗಿದೆ. ಎಲ್ಲಾ ಕಾರಿಡಾರ್‌ಗಳಲ್ಲಿ ರೈಲುಗಳು ಓಡುತ್ತಿವೆ ಎಂದು ಕೇಂದ್ರ ರೈಲ್ವೆ ಮಾಹಿತಿ ನೀಡಿದೆ. ಆದರೆ, ಕೆಲವು ಮುಖ್ಯ ಮತ್ತು ಬಂದರು ಮಾರ್ಗದ ರೈಲುಗಳು ತಡವಾಗಿ ಸಂಚಾರ ನಡೆಸುತ್ತಿವೆ.

ರಾಜ್ಯದ ಹಲವು ನದಿಗಳು ಎಚ್ಚರಿಕೆಯ ಮಟ್ಟ ತಲುಪಿವೆ. ಕುಂಡಲಿಕಾ ನದಿಯು ಎಚ್ಚರಿಕೆಯ ಮಟ್ಟವನ್ನು ದಾಟಿದ್ದು, ಅಂಬಾ, ಸಾವಿತ್ರಿ, ಪಾತಾಳಗಂಗಾ, ಉಲ್ಲಾಸ್ ಮತ್ತು ಗರ್ಹಿ ನದಿಗಳ ನೀರಿನ ಮಟ್ಟವು ಎಚ್ಚರಿಕೆಯ ಮಟ್ಟಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಮುಂದಿನ ಐದು ದಿನಗಳವರೆಗೆ ಥಾಣೆ, ಪಾಲ್ಘರ್, ಪುಣೆ, ಬೀಡ್, ಲಾತೂರ್, ಜಲ್ನಾ, ಪರ್ಭಾನಿ ಮತ್ತು ಮಹಾರಾಷ್ಟ್ರದ ಹಲವಾರು ಪ್ರದೇಶಗಳಿಗೆ ಐಎಂಡಿ ಆರೆಂಜ್ ಅಲರ್ಟ್ ನೀಡಿದೆ. ರತ್ನಗಿರಿ ಮತ್ತು ರಾಯಗಢದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವುದು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಸ್ಸಾಂನಲ್ಲಿ ಪ್ರವಾಹದ ನೀರು ಈಗ ಕಡಿಮೆಯಾಗುತ್ತಿರುವುದರಿಂದ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಎನ್‌ಡಿಆರ್‌ಎಫ್ ಡಿಜಿ ಹೇಳಿದ್ದಾರೆ.

 ಮನಾಲಿಯಿಂದ ಸಹಾಯಕ್ಕಾಗಿ ಎನ್‌ಡಿಆರ್‌ಎಫ್ ತಂಡ

ಮನಾಲಿಯಿಂದ ಸಹಾಯಕ್ಕಾಗಿ ಎನ್‌ಡಿಆರ್‌ಎಫ್ ತಂಡ

ಮುಂಜಾನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ ಸಂಭವಿಸಿದ ಮೇಘಸ್ಫೋಟವನ್ನು ಉಲ್ಲೇಖಿಸಿದ ಎನ್‌ಡಿಆರ್‌ಎಫ್ ಡಿಜಿ, ಮನಾಲಿಯಿಂದ ಸಹಾಯಕ್ಕಾಗಿ ತಂಡಗಳನ್ನು ಕಳುಹಿಸಲಾಗಿದೆ ಎಂದು ಹೇಳಿದರು. ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘಸ್ಫೋಟ ಸಂಭವಿಸಿದ್ದು, ನಾಲ್ಕೈದು ಮಂದಿ ನಾಪತ್ತೆಯಾಗಿದ್ದಾರೆ. ಕೊಚ್ಚಿಕೊಂಡು ಹೋಗಿರುವ ಕೆಲವು ಮನೆಯಲ್ಲಿ ಸುಮಾರು 2- 3 ಜನರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಆದ್ಯಾಗೂ ನಮ್ಮ ತಂಡವನ್ನು ಮನಾಲಿಯಿಂದ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಮಹಾರಾಷ್ಟ್ರದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆಮಹಾರಾಷ್ಟ್ರದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

 ಸಾಮಾನ್ಯ ಮಳೆಗಿಂತ ಎರಡು ಪಟ್ಟು ಹೆಚ್ಚು

ಸಾಮಾನ್ಯ ಮಳೆಗಿಂತ ಎರಡು ಪಟ್ಟು ಹೆಚ್ಚು

ಈ ಜುಲೈ 1 ರಿಂದ ಜುಲೈ 6 ರ ನಡುವೆ ಮುಂಬೈ ನಗರದಲ್ಲಿ 634.3 ಮಿಮೀ ಮಳೆಯಾಗಿದೆ. ಅಧಿಕ ಮಳೆಯು ಎರಡು ಕಾರಣಗಳಿಗಾಗಿ ಹೆಚ್ಚಾಗಿದೆ ಎಂದು ಕಂಡಿಬಂದಿದೆ. ಮೊದಲನೆಯದಾಗಿ ಭಾರತೀಯ ಹವಾಮಾನ ಇಲಾಖೆ ದತ್ತಾಂಶದ ಪ್ರಕಾರ, ಆ ಆರು ದಿನಗಳಲ್ಲಿ ಇದು ಸಾಮಾನ್ಯ ಮಳೆಯ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚು ಮಳೆಯಾಗಿದೆ. ಇದು 203.6 ಮಿಮೀ ಆಗಿದ್ದು, ಈ ವಾರ ಮುಂಬೈನಲ್ಲಿ ವಾಡಿಕೆಗಿಂತ 212% ಹೆಚ್ಚು ಮಳೆಯಾಗಿದೆ.

 ಜೂನ್‌ 1ರಿಂದ ಒಟ್ಟು ಒಟ್ಟು 926.1 ಮಿ. ಮೀ. ಮಳೆ

ಜೂನ್‌ 1ರಿಂದ ಒಟ್ಟು ಒಟ್ಟು 926.1 ಮಿ. ಮೀ. ಮಳೆ

ಈ ಮಾನ್ಸೂನ್‌ನಲ್ಲಿ ನಗರವು ಪಡೆದ ಒಟ್ಟು ಋತುಮಾನದ ಮಳೆಯ 634.3 ಮಿ. ಮೀ. ಮಳೆಯಾಗಿದೆ. ಇದು ಜೂನ್ 1 ರಿಂದ ದಾಖಲಾದ ಒಟ್ಟು 926.1 ಮಿ. ಮೀ. ಮಳೆಯ ಶೇ 68.5 ಆಗಿದೆ. ಇದು ಸಾಂತಾಕ್ರೂಜ್‌ನಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಮೂಲ ಹವಾಮಾನ ಕೇಂದ್ರದಲ್ಲಿ ಮುಂಬೈ ದಾಖಲಿಸಬೇಕಾದ ಸಾಮಾನ್ಯ ಮಳೆಯ 740.7 ಮಿ. ಮೀ. ಗಿಂತ ಶೇ 25 ಹೆಚ್ಚಾಗಿರುವುದು.

 ಮಾನ್ಸೂನ್ ಅಧಿಕೃತವಾಗಿ ಮುಗಿದ ಘೋಷಣೆ

ಮಾನ್ಸೂನ್ ಅಧಿಕೃತವಾಗಿ ಮುಗಿದ ಘೋಷಣೆ

ಆದರೆ ಕೆಲವು ವಾರಗಳ ಹಿಂದೆ ಜೂನ್ 23 ರಂದು, ಮುಂಬೈನಲ್ಲಿ ಮಳೆಯ ಕೊರತೆ ಶೇ. 47 ರಷ್ಟು ಇತ್ತು. ಇದಕ್ಕೆ ಹಲವಾರು ನಾಗರಿಕರು ಮತ್ತು ಮುನ್ಸೂಚಕರು ಆಶ್ಚರ್ಯಪಡುತ್ತಿದ್ದರು. ರಾಜ್ಯದಲ್ಲಿ ಮಳೆಯ ಕೊರತೆಯನ್ನು ವಿವರಿಸಲು ಪ್ರಯತ್ನಿಸಿದ್ದರು. ಬಳಿಕ ಜೂನ್ 11 ರಂದು ಮುಂಬೈನಲ್ಲಿ ಮಾನ್ಸೂನ್ ಅಧಿಕೃತವಾಗಿ ಮುಗಿದಿದೆ ಎಂದು ಘೋಷಿಸಲಾಯಿತು.

Recommended Video

PT Usha ಓಡುವ ಟ್ರ್ಯಾಕ್ ‌ನಿಂದ ಈಗ ರಾಜ್ಯಸಭೆ ಕಡೆಗೆ | *Sports | OneIndia Kannada

English summary
Heavy rains continue in many parts of Mumbai and Maharashtra. 17 teams of NDRF have been deployed in Maharashtra in view of heavy rains in Ghat areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X