ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಭಾರಿ ಮಳೆ, ರೈಲು ಸಂಚಾರ ಸ್ಥಗಿತ, ಟ್ರಾಫಿಕ್ ಜಾಮ್

|
Google Oneindia Kannada News

ಮುಂಬೈ, ಜುಲೈ 1:ಮುಂಬೈನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮುಂಗಾರು ಚುರುಕುಗೊಂಡಿದೆ. ಭಾನುವಾರದಿಂದ ಆರಂಭವಾಗಿರುವ ಭಾರಿ ಮಳೆಗೆ ಮುಂಬೈ ನಲುಗಿ ಹೋಗಿದೆ. ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ರೈಲುಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ವಿಪರೀತ ಟ್ರಾಫಿಕ್ ಜಾಮ್ ಉಂಟಾಗಿದ್ದು, ಶಾಲಾ, ಕಾಲೇಜು, ಕಚೇರಿಗೆ ಹೋಗುವವರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮಹಾನಗರಿ ಮುಂಬೈನಲ್ಲಿ ಭಾರಿ ಮಳೆ: ರಸ್ತೆಗಳು ಜಲಾವೃತಮಹಾನಗರಿ ಮುಂಬೈನಲ್ಲಿ ಭಾರಿ ಮಳೆ: ರಸ್ತೆಗಳು ಜಲಾವೃತ

ಮುಂಬೈನಲ್ಲಿ 360 ಮಿ.ಮೀ ಮಳೆಯಾಗಿದೆ. ಬೆಳಗ್ಗೆ 4-5 ಗಂಟೆ ಸಮಯದಲ್ಲಿ 100 ಮಿ.ಮೀ ಮಳೆ ದಾಖಲಾಗಿದೆ.

Heavy rainfall in Mumbai

ಸಿಯೋನ್, ದಾದರ್, ಕಿಂಗ್ ವೃತ್ತ ಹಾಗೂ ಬಾಂದ್ರಾ ಸಮೀಪ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಸಾಕಷ್ಟು ಕಡೆಗಳಲ್ಲಿ ನೀರು ನಿಂತಿದ್ದು ನಗರದೊಳಗೆ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ಥವಾಗಿದೆ. ಡಾ. ಬಿ.ಆರ್ ಅಂಬೇಡ್ಕರ್ ರಸ್ತೆ ಸುತ್ತಮುತ್ತಲ ನಿದಾನಗತಿಯಲ್ಲಿ ವಾಹನ ಸಾಗುತ್ತಿದೆ.

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಳ್ಳುವ ನಿರೀಕ್ಷೆಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಳ್ಳುವ ನಿರೀಕ್ಷೆ

ಜಬ್ರುಂಗ್, ಠಾಕೂರ್‌ವಾಡಿಗೆ ತೆರಳುವ ಗೋಡ್ಸ್ ರೈಲು, ಮುಂಬೈ, ಪುಣೆ ಇಂಟರ್‌ ಸಿಟಿ ರೈಲು ಸಂಚಾರ ಸ್ಥಗಿತಗೊಂಡಿದೆ. ಶನಿವಾರ ಹೌಸಿಂಗ್ ಸೊಸೈಟಿ ಗೋಡೆ ಕುಸಿದು 15 ಮಂದಿ ಮೃತಪಟ್ಟಿದ್ದರು. ಇನ್ನೂ ಕೆಲವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ.

English summary
Streets in Chembur flooded following heavy rainfall in Mumbai, Children wade through water to go to school as streets in Dadar East have been flooded due to heavy rainfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X