ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಭಾರಿ ಮಳೆ ಹಿನ್ನೆಲೆ Yellow Alert ಘೋಷಣೆ

|
Google Oneindia Kannada News

ಮುಂಬೈ, ಜುಲೈ.14: ಕೊರೊನಾವೈರಸ್ ಅಟ್ಟಹಾಸಕ್ಕೆ ನಲುಗಿದ ಮಹಾರಾಷ್ಟ್ರದಲ್ಲಿ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮುಂಬೈ, ಥಾಣೆ ಮತ್ತು ಪಾಲ್ಗರ್ ಪ್ರದೇಶದಲ್ಲಿ ಈ ವಾರಪೂರ್ತಿ ಮಳೆಯಾಗಲಿದ್ದು, ಮಂಗಳವಾರ ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ. ಈ ಹಿನ್ನೆಲೆ ಮೂರು ಪ್ರದೇಶಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಭಾರತದ ದಕ್ಷಿಣ ಕರಾವಳಿಯಲ್ಲಿ ಮತ್ತೊಂದು ಚಂಡಮಾರುತದ ಭೀತಿಭಾರತದ ದಕ್ಷಿಣ ಕರಾವಳಿಯಲ್ಲಿ ಮತ್ತೊಂದು ಚಂಡಮಾರುತದ ಭೀತಿ

ಭಾರತದಲ್ಲಿ ಮಾನ್ಸೂನ್ ಮಳೆ ಆರಂಭದ ಹೊಸ್ತಿಲಲ್ಲೇ ಚಂಡಮಾರುತದ ಆತಂಕ ಎದುರಾಗಿದೆ. ಆಗ್ನೇಯ ಅರೇಬಿಯನ್ ಸಮುದ್ರದಲ್ಲಿನ ಕೇರಳ ಕರಾವಳಿಯಲ್ಲಿ ಸರಾಸರಿ ಸಮುದ್ರ ಮಟ್ಟಕ್ಕಿಂತ 5.8 ಕಿ.ಮೀ.ವರೆಗೆ ಮತ್ತೊಂದು ಚಂಡಮಾರುತದ ಪ್ರಸರಣ ಕಂಡುಬರುತ್ತದೆ.

Heavy Rain In Mumbai: Yellow Alert For Mumbai, Thane, And Palghar This Week

ಜುಲೈ.15ರಂದು ಮುಂಬೈದ ಹಲವೆಡೆ ಭಾರಿ ಮಳೆ:

ಮಂಗಳವಾರವಷ್ಟೇ ಅಲ್ಲದೇ ಜುಲೈ.15ರಂದು ಮಹಾರಾಷ್ಟ್ರ ರಾಜಧಾನಿ ಮುಂಬೈನ ಹಲವೆಡೆ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ಜುಲೈ.11ರಂದು ಮುಂಬೈನಲ್ಲಿ 0.2ಎಂಎಂ ಹಾಗೂ 4.9ಎಂಎಂನಷ್ಟು ಮಳೆಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಅತಿಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಸಿಕ್ಕಿಂ, ಅಸ್ಸಾಂ, ಮೇಘಾಲಯ, ಮತ್ತು ದಕ್ಷಿಣ ಕೊಂಕಣ ಮತ್ತು ಗೋವಾದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಿಹಾರ, ವಾಯುವ್ಯ ಉತ್ತರ ಪ್ರದೇಶ, ಉತ್ತರ ಹರಿಯಾಣ, ಉತ್ತರ ಪಂಜಾಬ್, ಕಚ್ ಹಾಗೂ ಕರ್ನಾಟಕದ ಒಳನಾಡು, ತಮಿಳುನಾಡಿನ ಕೆಲವು ಭಾಗ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಒಂದೆರೆಡು ಬಾರಿ ಸಾಧಾರಣ ಮಳೆ ಬೀಳಲಿದೆ. ಗುಜರಾತ್, ಕರಾವಳಿ ಕರ್ನಾಟಕ, ಕೇರಳ, ವೆಚ್ಚದ ಆಂಧ್ರಪ್ರದೇಶ, ಒಡಿಶಾ, ಛತ್ತೀಸ್ ಗಢ, ಮಧ್ಯಪ್ರದೇಶ, ಜಾರ್ಖಂಡ್, ಮತ್ತು ಲಕ್ಷದ್ವೀಪಗಳ ಉಳಿದ ಭಾಗಗಳಲ್ಲಿ ಮಧ್ಯಮ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

English summary
Heavy Rain In Mumbai: Yellow Alert For Mumbai, Thane, And Palghar This Week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X