ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಭರ್ಜರಿ ಮಳೆ:17 ವಿಮಾನಗಳ ದಿಕ್ಕು ಬದಲು

|
Google Oneindia Kannada News

ಮುಂಬೈ, ಜುಲೈ 27: ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮುಂಬೈಗೆ ಬರಬೇಕಾಗಿದ್ದ 17 ವಿಮಾನಗಳ ತನ್ನ ದಿಕ್ಕು ಬದಲಿಸಿದೆ.

ಕಳೆದ ಒಂದು ವಾರದಿಂದ ಮಹಾರಾಷ್ಟ್ರ, ಮುಂಬೈ ಸುತ್ತಮುತ್ತಲು ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಬೆಂಗಳೂರಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ: ಇಂದೂ ಬರುತ್ತಾ?ಬೆಂಗಳೂರಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ: ಇಂದೂ ಬರುತ್ತಾ?

ಹಲವು ಮನೆಗಳಿಗೆ ನೀರು ನುಗ್ಗಿದೆ, ರಸ್ತೆಯೆಲ್ಲೆಲ್ಲಾ ನೀರು ತುಂಬಿಕೊಂಡು ನದಿಯಂತಾಗಿದೆ. ಇನ್ನೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಹಾಗೆಯೇ ವಿಮಾನಗಳು ಕೂಡ ತಮ್ಮ ಮಾರ್ಗವನ್ನು ಬದಲಿಸುವಂತಾಗಿದೆ.

Heavy Rain in Mumbai Flights Diverted

ಶುಕ್ರವಾರ ಮುಂಬೈನಲ್ಲಿ ಭರ್ಜರಿ ಮಳೆಯಾಗಿದ್ದು, ಮುಂಬೈಗೆ ಬರಬೇಕಿದ್ದ ವಿಮಾನವನ್ನು ಅಲ್ಲೇ ಆಸುಪಾಸಿನ ವಿಮಾನ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿತ್ತು.

2005ರ ಜುಲೈ 26ರಂದು ಕೂಡ ಇಂಥಹುದೇ ಮಳೆ ದಾಖಲಾಗಿತ್ತು. ಥಾನೆ, ರಾಯ್‌ಗಢ, ಮುಂಬೈ ನಗರದಲ್ಲಿ ಮಳೆ ಇನ್ನೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಬಿಹಾರದಲ್ಲಿ ಪ್ರವಾಹ ಮುಂದುವರೆದಿದೆ.ಇದುವರೆಗೆ 198 ಕ್ಕೂ ಹೆಚ್ಚು ಮಂದಿ ಮಳೆಯಿಂದಾಗಿ ಮೃತಪಟ್ಟಿದ್ದಾರೆ. 1.17 ಕೋಟಿಯಷ್ಟು ಮಂದಿ ಆಪತ್ತಿನಲ್ಲಿದ್ದಾರೆ.

ಅಸ್ಸಾಂನಲ್ಲಿ 75 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಭೂತಾನ್, ಬರ್ಪೇಟಾ, ಬಕ್ಸಾ, ಚಿರಾಗ್, ಧುಬ್ರಿಯಲ್ಲಿ ಭಾರಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನದ ವರೆಗೆ ಮಳೆ ಧಾರಾಕಾರವಾಗಿ ಸುರಿದಿದೆ. ಕೇಂದ್ರ ರೈಲು ನಿಲ್ದಾಣದ ಪಾರ್ಕಿಂಗ್ ಸ್ಥಳ ಸಂಪೂರ್ಣವಾಗಿ ಜಲಾವೃತವಾಗಿತ್ತು.

ಪ್ರಯಾಣಿಕರು ರೈಲಿನಿಂದ ಇಳಿದು ಹೊರಗೆ ಹೋಗುವುದಕ್ಕೂ ಕೂಡ ಕಷ್ಟ ಪಟ್ಟರು.ಪಡೀಲ್ ರೈಲ್ವೆ ಕೆಳ ಸೇತುವೆಯಲ್ಲಿ ನೀರು ಸಂಗ್ರಹಗೊಂಡು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಹೆಚ್ಚು ಮಳೆಯಾಗಿದೆ.

English summary
Due to heavy rain 17 flights diverted to near by Airports. In Bihar floods death toll rises to 198.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X