ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾನಗರಿ ಮುಂಬೈನಲ್ಲಿ ಭಾರಿ ಮಳೆ: ರಸ್ತೆಗಳು ಜಲಾವೃತ

|
Google Oneindia Kannada News

ಮುಂಬೈ, ಜೂನ್ 28: ತಡವಾಗಿ ಕಾಲಿಟ್ಟಿರುವ ಮುಂಗಾರು, ಮುಂಬೈನಲ್ಲಿ ಶುಕ್ರವಾರ ಭಾರಿ ಮಳೆ ಸುರಿಸಿದೆ. ಇಷ್ಟು ದಿನ ಸಣ್ಣನೆ ಹನಿ ಮಳೆಯಾಗುತ್ತಿದ್ದ ಮುಂಬೈನಲ್ಲಿ ಶುಕ್ರವಾರ ಮೊದಲ ಬಾರಿಗೆ ವಿಪರೀತ ಮಳೆ ಸುರಿಯಿತು. ಬಳಿಕ ಅದರ ಅಬ್ಬರ ಕಡಿಮೆಯಾದರೂ ಹದವಾದ ಮಳೆ ಮುಂದುವರಿದಿದೆ.

ಮುಂಬೈ ನಗರದಲ್ಲಿ ಮುಂದಿನ 24 ಗಂಟೆಗಳಲ್ಲಿ ಹಲವು ಹಂತಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಚೆನ್ನೈನ ಜಲ ಗಂಡಾಂತರ ಬೆಂಗಳೂರಿಗೂ ಕಾದಿದೆಯಾ? ಸಮಗ್ರ ವರದಿ ಚೆನ್ನೈನ ಜಲ ಗಂಡಾಂತರ ಬೆಂಗಳೂರಿಗೂ ಕಾದಿದೆಯಾ? ಸಮಗ್ರ ವರದಿ

ಕಳೆದ ಐದು ಗಂಟೆಗಳಲ್ಲಿ ನಗರದಲ್ಲಿ ಸರಾಸರಿ 43.23 ಮಿ.ಮೀ. ಮಳೆಯಾಗಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ. ಪೂರ್ವ ಉಪನಗರದಲ್ಲಿ 64.14 ಮಿ.ಮೀ. ಮತ್ತು ಪಶ್ಚಿಮ ಉಪನಗರದಲ್ಲಿ 78.21 ಮಿ.ಮೀ. ಮಳೆ ದಾಖಲಾಗಿದೆ.

heavy and moderate rain in mumbai city

ನಗರದ ಅನೇಕ ಕಡೆ ರಸ್ತೆಗಳು ಜಲಾವೃತವಾಗಿದ್ದರಿಂದ ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರ ಓಡಾಟಕ್ಕೆ ತೀವ್ರ ಅಡಚಣೆಯುಂಟಾಗಿತ್ತು. ಕೆಲವು ಬಸ್‌ಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿತ್ತು. ಚರಂಡಿನೀರುಗಳು ಕೆಲವೆಡೆ ಅಂಗಡಿ, ಮನೆಗಳಿಗೆ ನುಗ್ಗಿದ ಘಟನೆ ನಡೆದಿದೆ. ಸ್ಥಳೀಯ ರೈಲು ಮತ್ತು ವಿಮಾನಗಳ ಓಡಾಟದಲ್ಲಿ ವ್ಯತ್ಯಯವಾಗಿಲ್ಲ.

ಮುಂದಿನ 48 ಗಂಟೆಯಲ್ಲಿ ಅಸ್ಸಾಂ, ಮೇಘಾಲಯದಲ್ಲಿ ಭಾರಿ ಮಳೆಯ ಮುನ್ಸೂಚನೆಮುಂದಿನ 48 ಗಂಟೆಯಲ್ಲಿ ಅಸ್ಸಾಂ, ಮೇಘಾಲಯದಲ್ಲಿ ಭಾರಿ ಮಳೆಯ ಮುನ್ಸೂಚನೆ

ಮುಂಬೈನ ನಿವಾಸಿಗಳು ಮಳೆಯ ಆರ್ಭಟದ ಚಿತ್ರ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಮುಂಬೈ ಅಲ್ಲದೆ, ಥಾಣೆ, ರತ್ನಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಒಂದೆರಡು ದಿನ ಮಳೆ ಅಬ್ಬರಿಸಲಿದೆ ಎಂದು ಸ್ಕೈಮೆಟ್ ತಿಳಿಸಿದೆ.

English summary
Mumbai city has witnessed a heavy rain in Friday morning. Road transport was suspended in some areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X