ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಇಎಂಐ ಕಟ್ಟಲು ಹಣ ಬೇಕಿತ್ತು, ಕೊಲೆ ಮಾಡಿದೆ' : ಕ್ಯಾಬ್ ಚಾಲಕ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 11: ಎಚ್ ಡಿ ಎಫ್ ಸಿ ಬ್ಯಾಂಕ್ ಉಪಾಧ್ಯಕ್ಷ ಸಿದ್ದಾರ್ಥ್ ಸಾಂಘ್ವಿ ಕೊಲೆ ಕೇಸಿನಲ್ಲಿ ಬಂಧಿತನಾಗಿರುವ ಕ್ಯಾಬ್ ಚಾಲಕ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ವಾಹನ ಸಾಲದ ಕಂತು ಕಟ್ಟಲು ಹಣ ಸಾಲುತ್ತಿರಲಿಲ್ಲ, ಹಾಗಾಗಿ, ಅವರನ್ನು ಕೊಲೆ ಮಾಡಿದೆ ಎಂದಿದ್ದಾನೆ.

ಈ ನಡುವೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಉಪಾಧ್ಯಕ್ಷ ಸಿದ್ಧಾರ್ಥ್‌ ಸಾಂಘ್ವಿ ಅವರ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅವರ ಕುಟುಂಬಸ್ಥರು, ಆಪ್ತರು, ಪ್ರತಿಭಟನೆ ನಡೆಸಿದ್ದಾರೆ.

ಸಿದ್ದಾರ್ಥ್ ಅವರನ್ನು ಕೊಲೆಗೈದಿರುವ ವ್ಯಕ್ತಿಯನ್ನು 20 ವರ್ಷ ವಯಸ್ಸಿನ ಸರ್ಫರಾಜ್ ಶೇಖ್ ಎಂದು ಗುರುತಿಸಲಾಗಿದೆ. ಮೋಟರ್‌ ಬೈಕ್‌ ಗಾಗಿ ಸಾಲ ಮಾಡಿದ್ದ. ಸಾಲದ ಇಎಮ್‌ಐ ಪಾವತಿ ಕಟ್ಟಲು ಹಣ ಸಿಗದೆ ಪರದಾಡುತ್ತಿದ್ದ. ಹಣಕ್ಕಾಗಿ ನಡೆದ ದರೋಡೆ ಪ್ರಯತ್ನ ನಡೆಸಿದ್ದ, ಈ ಸಂದರ್ಭದಲ್ಲಿ 39 ವರ್ಷದ ಸಾಂಘ್ವಿ ಅವರನ್ನು ಕಮಲ್‌ ಮಿಲ್‌ ಕಾಂಪೌಂಡ್‌ನ ಪಾರ್ಕಿಂಗ್‌ ಸ್ಥಳದಲ್ಲಿ ಸೆಪ್ಟೆಂಬರ್‌ 5ರಂದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

HDFC Bank VP murder: I killed him, had to clear my EMIs, arrested cabbie tells court

ಆದರೆ, ಸಿದ್ದಾರ್ಥ್ ಅವರ ಘಟನೆ ನಡೆದ ಸ್ಥಳದಿಂದ 45 ಕಿ.ಮೀ . ದೂರದ ಕಲ್ಯಾಣ್‌ ಬಳಿಯಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿತ್ತು. ಸದ್ಯ ಆರೋಪಿಯನ್ನು ಸೆಪ್ಟೆಂಬರ್‌ 19ರ ವರೆಗೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ಪೊಲೀಸ್‌ ಮೂಲಗಳ ಪ್ರಕಾರ, ಸಾಂಘ್ವಿ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಆದರೆ, ಸಾಂಘ್ವಿ ಜೋರಾಗಿ ಮಾತನಾಡಿ, ಸಹಾಯಕ್ಕಾಗಿ ಕೂಗಿದ್ದಾರೆ ಗಾಬರಿಗೊಂಡ ಶೇಖ್ ತಕ್ಷಣವೇ ಸಾಂಘ್ವಿ ಅವರ ಕುತ್ತಿಗೆಯನ್ನು ಸೀಳಿದ್ದಾನೆ. ನಂತರ ಹಲವಾರು ಬಾರಿ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಕಾರಿನ ಹಿಂಬದಿ ಸೀಟಿನ ಕೆಳಗೆ ಹಾಕಿದ್ದಾನೆ. ನವಿ ಮುಂಬೈ ಬಳಿ ಬಂದಿದ್ದಾನೆ, ಕಲ್ಯಾಣ್ ಬಳಿ, ಸಾಂಘ್ವಿ ದೇಹವನ್ನು ಎಸೆದು, ಕಾರನ್ನು ಅಲ್ಲಿಯೇ ಬಿಟ್ಟು, ಸಾಂಘ್ವಿ ಫೋನ್‌ ತೆಗೆದುಕೊಂಡು ಪರಾರಿಯಾಗಿದ್ದಾನೆ.

English summary
The arrested cabbie has told the police that he killed the HDFC Bank Vice President for money. He also said that he had no money to pay the EMIs for his bike and hence killed Siddharth Sanghvi for the money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X