ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿ ಬಳಿ ಕೊರೊನಾ ಎಂದು ಹೇಳಿ ಕಾಣೆಯಾಗಿದ್ದ, ಗರ್ಲ್ ಫ್ರೆಂಡ್ ಜತೆ ಸಿಕ್ಕಿಬಿದ್ದ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 18: ಮುಂಬೈನ 28 ವರ್ಷದ ವ್ಯಕ್ತಿ ಪತ್ನಿ ಬಳಿ ತನಗೆ ಕೊರೊನಾ ಎಂದು ಹೇಳಿ ನಾಪತ್ತೆಯಾಗಿದ್ದ, ಬಳಿಕ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದಿದ್ದಾನೆ.

ಜುಲೈ ತಿಂಗಳಲ್ಲಿ ಪತ್ನಿ ಹತ್ತಿರ ತನಗೆ ಕೊರೊನಾ ಇದೆ ಎಂದು ಹೇಳಿ ಹೋದವನು ಗರ್ಲ್ ಫ್ರೆಂಡ್ ಜತೆ ಸಿಕ್ಕಿಬಿದ್ದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊರೊನಾ ಕವಚ: 65 ವರ್ಷ ಮೇಲ್ಪಟ್ಟವರಿಗೂ ವಿಮೆ ಸೌಲಭ್ಯಕೊರೊನಾ ಕವಚ: 65 ವರ್ಷ ಮೇಲ್ಪಟ್ಟವರಿಗೂ ವಿಮೆ ಸೌಲಭ್ಯ

ಜುಲೈ 24 ರಂದು ಪತ್ನಿಗೆ ಕರೆ ಮಾಡಿ, ನನಗೆ ಕೊರೊನಾ ಇದೆ ಎಂದು ವರದಿ ಬಂದಿದೆ.ನಾನಿನ್ನು ಬದುಕಿರುವುದಿಲ್ಲ ಎಂದು ಹೇಳಿದ್ದ, ಪತ್ನಿ ಮತ್ತೊಂದು ಪ್ರಶ್ನೆ ಕೇಳುವ ಮೊದಲೇ ಕಾಲ್ ಕಟ್ ಮಾಡಿದ್ದ. ಆಕೆ ತನ್ನ ಅಣ್ಣನ ಬಳಿ ಸಹಾಯ ಕೇಳಿದ್ದಳು.

Have Tested Corona Positive Man Tells Wife, Disappears, Found With Girlfriend

ಬಳಿಕ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ಆತನ ಬೈಕ್, ಹೆಲ್ಮೆಟ್, ಬ್ಯಾಗ್, ಕೀ ರಸ್ತೆಯೊಂದರಲ್ಲಿ ಪತ್ತೆಯಾಗಿತ್ತು. ಆದರೆ ಪೊಲೀಸರಿಗೆ ಈ ಕುರಿತು ಯಾವುದೇ ಮಾಹಿತಿ ಇರಲಿಲ್ಲ.

ಎಸಿಪಿ ವಿನಾಯಕ್ ಪ್ರಕರಣದ ತನಿಖೆ ಆರಂಭಿಸಿದ್ದರು. ಸೆಕ್ಯುರಿಟಿ ಕ್ಯಾಮರಾ ಫೂಟೇಜ್‌ಗಳನ್ನು ನೋಡಿದ್ದರು, ಮೊಬೈಲ್ ಲೊಕೇಷನ್ ಟ್ರೇಸ್ ಮಾಡಲು ಪ್ರಯತ್ನ ಪಟ್ಟಿದ್ದರು.
ಆತ ನಾಪತ್ತೆಯಾದ ದಿನ ವ್ಯಕ್ತಿಯೊಬ್ಬ 100 ನಂಬರ್‌ಗೆ ಎರಡು ಬಾರಿ ಕರೆ ಮಾಡಿದ್ದ ಎಂಬುದು ತಿಳಿದುಬಂದಿತ್ತು. ಬಳಿಕ ಆತನಿಗೆ ಬೇರೆ ಹುಡುಗಿಯ ಜೊತೆ ಅಕ್ರಮ ಸಂಬಂಧ ಇದೆ ಎಂಬುದು ಗೊತ್ತಾಗಿದೆ.

Recommended Video

Sandalwood Drug mafia ವಿಚಾರವಾಗಿ Akul , santosh ,yuvarajಗೆ CCB ಬುಲಾವ್ | Oneindia Kannada

ಬಳಿಕ ಆತ ಪ್ರೇಯಸಿ ಜತೆ ಪತ್ತೆಯಾಗಿದ್ದಾನೆ. ಆತನನ್ನು ಇಂದೋರ್‌ನಿಂದ ಮುಂಬೈಗೆ ಕರೆತರಲಾಗಿದೆ.

English summary
A 28-year-old man from Navi Mumbai, who went missing in July after telling his wife that he had tested positive for coronavirus, was found on Tuesday with his girlfriend, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X