ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಟಿ ವಂಚನೆ: 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಸಿನಿಮಾ ನಿರ್ದೇಶಕನ ಬಂಧನ

|
Google Oneindia Kannada News

ಮುಂಬೈ, ಆಗಸ್ಟ್ 3: ಹಿಂದಿ ಚಿತ್ರ ನಟ ಅನುಪಮ್ ಖೇರ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಸಿನಿಮಾದ ನಿರ್ದೇಶಕ ವಿಜಯ್ ರತ್ನಾಕರ್ ಗುಟ್ಟೆ ಅವರನ್ನು 34 ಕೋಟಿ ರೂ. ಜಿಎಸ್‌ಟಿ ವಂಚನೆ ಆರೋಪದಡಿ ಬಂಧಿಸಲಾಗಿದೆ.

ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯವು ಗುಟ್ಟೆ ಅವರನ್ನು ಗುರುವಾರ ಬಂಧಿಸಿ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅವರನ್ನು ಆಗಸ್ಟ್ 14ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

GST fraud the accidental prime minister film director arrested

ಮನಮೋಹನ್ ಸಿಂಗ್ ಕುರಿತು ಸಿನಿಮಾ, ಸೋನಿಯಾ ಪಾತ್ರದಲ್ಲಿ ಯಾರು?

ಯಾವುದೇ ಸರಕು ಮತ್ತು ಸೇವೆಗಳನ್ನು ಒದಗಿಸದೆ ಇದ್ದರೂ ಬಿಲ್‌ಗಳು ಮತ್ತು ಇನ್‌ವಾಯ್ಸ್‌ಗಳನ್ನು ಬಳಸಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ಗಳನ್ನು ಪಡೆದುಕೊಂಡ ಆರೋಪದಲ್ಲಿ ಗುಟ್ಟೆ ವಿರುದ್ಧ ಸಿಜಿಎಸ್‌ಟಿ ಕಾಯ್ದೆಯ ಸೆಕ್ಷನ್ 132 (1) ಸಿ ಅಡಿ ಪ್ರಕರಣ ದಾಖಲಿಸಲಾಗಿದೆ.

ಗುಟ್ಟೆ ಅವರ ಕಂಪೆನಿ ವಿಆರ್‌ಜಿ ಡಿಜಿಟಲ್ ಕಾರ್ಪ್ ಪ್ರೈವೇಟ್ ಲಿ. ಹಾರಿಜಾನ್ ಔಟ್‌ಸೋರ್ಸ್ ಸಲ್ಯೂಷನ್ಸ್ ಕಂಪೆನಿಯಿಂದ ಅನಿಮಷೇನ್ ಮತ್ತು ಮಾನವ ಸೇವೆಗಳನ್ನು ಪಡೆದುಕೊಂಡಿದ್ದಕ್ಕಾಗಿ 34.37 ಕೋಟಿ ರೂ. ವೆಚ್ಚದ 149 ನಕಲಿ ಜಿಎಸ್‌ಟಿ ಇನ್‌ವಾಯ್ಸ್‌ಗಳನ್ನು ಪಡೆದುಕೊಂಡಿತ್ತು ಎಂದು ಆರೋಪಿಸಲಾಗಿದೆ.

ಮನಮೋಹನ್ ಸಿಂಗ್ ಚಿತ್ರದಲ್ಲಿ ಯಾರು ಯಾವ ಪಾತ್ರ ಮಾಡ್ತಿದ್ದಾರೆ.?

ಗುಟ್ಟೆ ಅವರು ಇದುವರೆಗೂ ಮೂರು ಸಿನಿಮಾಗಳನ್ನು ನಿರ್ಮಿಸಿದ್ದಾರೆ. 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಸಿನಿಮಾದ ಮೂಲಕ ಅವರು ನಿರ್ದೇಶಕರಾಗಿದ್ದರು. ಈ ಸಿನಿಮಾ ಡಿಸೆಂಬರ್ 21ರಂದು ಬಿಡುಗಡೆಯಾಗಲಿದೆ.

English summary
DGGSTI on Thursday arrested the filmmaker Vijay Ratnakar Gutte for allegedly GST fraud over 34 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X