ನೇತಾರನಾದ ಗ್ರಾಮ ಸೇವಕ ಮುಂಡೆಗೆ ಟ್ವೀಟ್ ಕಂಬನಿ
ಮುಂಬೈ, ಜೂ.3: ಗ್ರಾಮ ಸೇವಕನಾಗಿ ವೃತ್ತಿ ಆರಂಭಿಸಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಮಹಾರಾಷ್ಟ್ರದ ಪ್ರಭಾವಿ ಬಿಜೆಪಿ ಮುಖಂಡನಾಗಿ ಬೆಳೆದಿದ್ದ ಗೋಪಿನಾಥ್ ಮುಂಡೆ ಅವರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ದೆಹಲಿಯಲ್ಲಿ ಪೃಥ್ವಿರಾಜ್ ಮತ್ತು ತುಘಲಕ್ ರಸ್ತೆ ನಡುವೆ ಮಂಗಳವಾರ ಮುಂಜಾನೆ ನಡೆದ ಅಪಘಾತದ ಆಘಾತಕ್ಕೆ ಒಳಗಾದ ಮುಂಡೆ ಅವರು ಹೃದಯಾಘಾತದಿಂದ ಅಕಾಲಿಕ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ ವಂಜಾರಿ ಎಂಬ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಗೋಪಿನಾಥ್ ಮುಂಡೆ ಅವರು ಪತ್ನಿ, ಮೂವರು ಸಹೋದರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರನ್ನು ಬಿಟ್ಟು ಅಗಲಿದ್ದಾರೆ.
ಮುಂಡೆ ಅವರ ನಿಧನಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಕೇಂದ್ರ ಸಚಿವರಾದ ರಾಜನಾಥ್ಸಿಂಗ್, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಅನಂತ್ಕುಮಾರ್, ಡಿ.ವಿ.ಸದಾನಂದಗೌಡ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.[ಮುಂಡೆ ವಿಧಿವಶ: ಬುಧವಾರ ಅಂತಿಮ ಸಂಸ್ಕಾರ]
ಗೋಪಿನಾಥ್ ಮುಂಡೆ ಬಿಜೆಪಿ ಮತ್ತೋರ್ವ ಪ್ರಭಾವಿ ನಾಯಕ ದಿ.ಪ್ರಮೋದ್ ಮಹಾಜನ್ ಅವರ ಭಾವ. ಪ್ರಮೋದ್ ಮಹಾಜನ್ ಪತ್ನಿ ಸರಸ್ವತಿ ಕರದ್, ಗೋಪಿನಾಥ್ ಮುಂಡೆ ಅವರ ಸಹೋದರಿ. ಪಂಡಿತ್ ಅಣ್ಣ, ಮಾಣಿಕ್ರಾವ್, ವೆಂಕಟರಾವ್ ಸಹೋದರರಿದ್ದರೆ, ಪಂಕಜ, ಪ್ರೀತಮ್, ಯಶಹಾರಿ ಪುತ್ರಿಯರಿದ್ದಾರೆ. [ಇದೇನಿದು ಶೋಭಾಡೆ ಸಂಸ್ಕಾರ?]
ಪ್ರಮೋದ್ ಹಾಗೂ ಮುಂಡೆ ಇಬ್ಬರು ಒಂದೇ ದಿನಾಂಕದಂದು ಮೃತಪಟ್ಟಿರುವುದು ಕಾಕತಾಳೀಯ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಟ್ವೀಟ್ ಗಳು ಹರಿದಾಡುತ್ತಿವೆ. ದೇಶದ ಜನತೆ, ಗಣ್ಯರು ಮುಂಡೆ ಅವರ ಸಾವಿಗೆ ಸಲ್ಲಿಸಿರುವ ಸಂತಾಪ ಸಂದೇಶಗಳನ್ನು ಮುಂದೆ ಓದಿ...

ಶೋಕ ಸಾಗರದಲ್ಲಿ ಗೋಪಿನಾಥ್ ಮುಂಡೆ ಸಂಸಾರ
ಮುಂಡೆ ಅವರ ಪುತ್ರಿ ಪಂಕಜ ಶಾಸಕಿಯಾಗಿದ್ದರೆ, ಪ್ರೀತಮ್ ವೈದ್ಯರಾಗಿದ್ದು, ಯಶಹಾರಿ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ.
ಮಹಾರಾಷ್ಟ್ರದ ಬೀದ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಗೋಪಿನಾಥ್ ಮುಂಡೆ ಬಿಜೆಪಿಯ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಇಂದು ಅವರ ಸ್ವ ಕ್ಷೇತ್ರದಲ್ಲಿ ಸಚಿವರಾದ ಕಾರಣ ಅವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
|
ನರೇಂದ್ರ ಮೋದಿ ಸೇರಿದಂತೆ ಗಣ್ಯರ ಕಂಬನಿ
ಇಂದು ಮುಂಜಾನೆ ರಸ್ತೆ ಅಪಘಾತದಲ್ಲಿ ನಿಧನರಾದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ ಅವರ ಸಾವಿಗೆ ಅನೇಕ ಹಿರಿಯ ನಾಯಕರು ಕಂಬನಿ ಮಿಡಿದಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ಸಚಿವರು ಕಂಬನಿ ಮಿಡಿದು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
|
ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದು
ಗೋಪಿನಾಥ್ ಮುಂಡೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದು, ಇದಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.ನನಗೆ ಗೋಪಿನಾಥ್ ಮುಂಡೆ ಸಾವಿನ ಸುದ್ದಿ ಕೇಳಿ ಆಘಾತವಾಯಿತು. ನನ್ನ ಸಹೋದ್ಯೋಗಿಯೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂಬುದನ್ನು ನಂಬಲು ನನಗೆ ಸಾಧ್ಯವಾಗುತ್ತಿಲ್ಲ. ಅವರ ಹಠಾತ್ ನಿಧಾನ ಸರ್ಕಾರ ಮತ್ತು ದೇಶಕ್ಕೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದಿದ್ದಾರೆ.
|
ಸಾವಿನ ಸುದ್ದಿ ಕೇಳಿ ಆಘಾತವಾಗಿದೆ
ಗೋಪಿನಾಥ್ ಮುಂಡೆ ಒಬ್ಬ ಜನಪ್ರಿಯ ನಾಯಕರಾಗಿದ್ದರು. ಬಿಜೆಪಿಯ ಬೆಳವಣಿಗೆಯಲ್ಲಿ ಅವರ ಕೊಡುಗೆ ಸಾಕಷ್ಟಿದೆ. ಹಿಂದುಳಿದ ವರ್ಗದಿಂದ ಬಂದಿದ್ದ ಅವರು ಯಾವಾಗಲೂ ಜನಸಾಮಾನ್ಯರ ಪರವಾಗಿ ಕೆಲಸ ಮಾಡುತ್ತಿದ್ದರು. ನಿಜಕ್ಕೂ ನನಗೆ ಅವರ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ ಎಂದು ಮೋದಿ ದುಃಖ ವ್ಯಕ್ತಪಡಿಸಿದ್ದಾರೆ.
|
ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ
ನಾನು ಅವರ ಕುಟುಂಬಕ್ಕೆ ಯಾವ ರೀತಿ ಸಂತಾಪ ಹೇಳಬೇಕೆಂಬುದು ಅರ್ಥವಾಗುತ್ತಿಲ್ಲ. ಅವರ ಕುಟುಂಬದ ಸದಸ್ಯರಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನನ್ನ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವುದಾಗಿ ಹೇಳಿದ್ದಾರೆ.
|
ಜೂ 3 ಮಹಾರಾಷ್ಟ್ರದ ಕರಾಳ ದಿನ
ವಿಲಾಸ್ ರಾವ್ ದೇಶ್ ಮುಖ್, ಪ್ರಮೋದ್ ಮಹಾಜನ್ ಈಗ ಗೋಪಿನಾಥ್ ಮುಂಡೆ ಜೂ.3 ಕರಾಳ ದಿನ
|
ರಾಜದೀಪ್ ಸರ್ದೇಸಾಯಿ ದುಃಖ ಭರಿತ ಟ್ವೀಟ್
ಗ್ರಾಮ ಸೇವಕನಾಗಿ ವೃತ್ತಿ ಆರಂಭಿಸಿ ದೊಡ್ಡ ಮಟ್ಟದ ನೇತಾರನಾಗಿ ಬೆಳೆದ ಗೋಪಿನಾಥ್ ಮುಂಡೆ ಸಾವು ಆಘಾತಕಾರಿ
|
ಪ್ರಧಾನಿ ಮೋದಿ ಅವರಿಂದ ಅಂತಿಮ ನಮನ
ಗೋಪಿನಾಥ್ ಮುಂಡೆ ಪಾರ್ಥೀವ ಶರೀರಕ್ಕೆ ಪ್ರಧಾನಿ ಮೋದಿ ಅವರಿಂದ ಅಂತಿಮ ನಮನ
|
ಸಚಿವರಾದ ರಾಜನಾಥ್ಸಿಂಗ್ ಕಂಬನಿ
ಬಡವರ, ರೈತರ ಪರ ನಾಯಕರಾಗಿದ್ದ ಮುಂಡೆ ನಿಧನ ಬಿಜೆಪಿಗೆ ಹಾಗೂ ಮಹಾರಾಷ್ಟ್ರಕ್ಕೆ ದೊಡ್ಡ ನಷ್ಟ
|
ರಸಗೊಬ್ಬರ ಸಚಿವ ಅನಂತಕುಮಾರ್
ರಸಗೊಬ್ಬರ ಸಚಿವ ಅನಂತಕುಮಾರ್ ಸೇರಿದಂತೆ ಮಾಜಿ ಪ್ರಧಾನಿಗಳಾದ ಡಾ.ಮನಮೋಹನ್ಸಿಂಗ್, ಎಚ್.ಡಿ.ದೇವೇಗೌಡ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್, ಶಿವಸೇನೆ ನಾಯಕ ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.