ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

94ರ ವೃದ್ಧೆ 40 ವರ್ಷದ ನಂತರ ಗೂಡು ಸೇರಲು ಕಾರಣ ಗೂಗಲ್, ವಾಟ್ಸಾಪ್!

|
Google Oneindia Kannada News

ಮುಂಬೈ, ಜೂನ್.22: ನಾಲ್ಕು ದಶಕಗಳ ಹಿಂದೆ ಮನೆಯಿಂದ ಹೊರಟು ನಾಪತ್ತೆಯಾಗಿದ್ದ ಮಹಿಳೆಯರು 94ನೇ ವಯಸ್ಸಿನಲ್ಲಿ ಮರಳಿ ಮನೆಗೆ ಸೇರಿದ್ದಾರೆ. ಇಳಿವಯಸ್ಸಿನಯಲ್ಲಿ ವೃದ್ಧೆಯನ್ನು ಮೊಮ್ಮಕ್ಕಳ ನೆರಳಿಗೆ ತಲುಪಿಸಿದ್ದೇ ಗೂಗಲ್ ಮತ್ತು ವಾಟ್ಸಾಪ್. ಅಚ್ಚರಿ ಎನಿಸಿದರೂ ಇದೊಂದು ಸತ್ಯ ಘಟನೆ.
ಮಹಾರಾಷ್ಟ್ರದ ನಾಗ್ಪುರ್ ನಲ್ಲಿರುವ ಮೊಮ್ಮಗನ ಮನೆಗೆ 40 ವರ್ಷಗಳ ನಂತರ 94 ವರ್ಷದ ಅಜ್ಜಿ ಸೇರಿದ್ದಾರೆ. 1979-80ರ ಆಸುಪಾಸಿನಲ್ಲಿ ತಮ್ಮ ತಂದೆ ಮನೆಗೆ ತೆರಳುವುದಕ್ಕಾಗಿ ಮನೆಯಿಂದ ಹೊರಟ ಪಂಚುಬಾಯಿ ಅಂದಿನಿಂದಲೇ ನಾಪತ್ತೆಯಾಗಿದ್ದರು.

ಮುಂಬೈ ವಲಸೆ ಕಾರ್ಮಿಕರಿಗೆ ಆಹಾರ ತಯಾರು ಮಾಡಿದ 99ರ ಅಜ್ಜಿ
ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ನಡುರಸ್ತೆಯಲ್ಲಿ ಮಾನಸಿಕ ಅಸ್ವಸ್ಥರಂತೆ ಕರುಣಾಜನಕ ಸ್ಥಿತಿಯಲ್ಲಿ ಒಬ್ಬಂಟಿನಾಗಿ ಮಹಿಳೆಯು ನಡೆದುಕೊಂಡು ಹೋಗುತ್ತಿದ್ದರು. ಜೇನುನೊಣಗಳಿಂದ ಕಚ್ಚಿಸಿಕೊಂಡ ಮಹಿಳೆ ಮಾತನಾಡಲು ಆಗದ ಸ್ಥಿತಿಯಲ್ಲಿದ್ದರು ಎಂದು ಮಹಿಳೆಗೆ ಆಶ್ರಯ ನೀಡಿದ ಟ್ರಕ್ ಚಾಲಕ ಇಸ್ರಾರ್ ಖಾನ್ ಹೇಳಿದರು.

Google and WhatsApp that helped a 94-year-old woman to return home after forty years

ಮಹಿಳೆಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ ಚಾಲಕ

ಮಹಿಳೆಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ ಚಾಲಕ

40 ವರ್ಷಗಳ ಹಿಂದೆ ರಸ್ತೆಯಲ್ಲಿ ಅಸ್ವಸ್ಥಳಾಗಿ ನಿಂತಿದ್ದ ಮಹಿಳೆಯರನ್ನು ಇದೇ ಇಸ್ರಾರ್ ಖಾನ್ ತಂದೆಯು ರಕ್ಷಿಸಿ ಮನೆಗೆ ಕರೆದುಕೊಂಡು ಹೋಗಿದ್ದರು. ತಮ್ಮ ಕುಟುಂಬದವರ ಜೊತೆಗೆ ಆ ಮಹಿಳೆಗೂ ಆಶ್ರಯ ನೀಡಿದರು. ನಾವೆಲ್ಲ ಅಚ್ಚಚ್ಚನ್ ಮೌಸಿ ಎಂದು ಕರೆಯುತ್ತಿದ್ದೆವು. ಸಾಕಷ್ಟು ಬಾರಿ ಪಂಚುಬಾಯಿ ಅವರ ವಿಳಾಸದ ಬಗ್ಗೆ ವಿಚಾರಿಸಿದೆವು. ಆದರೆ ಮಾನಸಿಕವಾಗಿ ಅಸ್ಥಿರತೆಯಿಂದ ಬಳಲುತ್ತಿದ್ದ ಅವರಿಗೆ ಸರಿಯಾಗಿ ವಿಳಾಸ ಹೇಳುವ ಸಾಮರ್ಥ್ಯವು ಇರಲಿಲ್ಲ ಎಂದು ಖಾನ್ ಹೇಳುತ್ತಾರೆ.

ಮೇ.4ರಂದು ಖಂಜ್ಮಾ ನಗರ್ ಬಗ್ಗೆ ಅಜ್ಜಿಯ ಮಾತು

ಮೇ.4ರಂದು ಖಂಜ್ಮಾ ನಗರ್ ಬಗ್ಗೆ ಅಜ್ಜಿಯ ಮಾತು

ಪಂಚುಬಾಯಿ ಅವರ ಬಗ್ಗೆ ಅಸ್ರರ್ ಖಾನ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರೂ ಅಜ್ಜಿಯನ್ನು ಸಂಬಂಧಿಕರನ್ನು ಪತ್ತೆ ಮಾಡುವುದಕ್ಕೆ ಆಗಲಿಲ್ಲ. ಪಂಚುಬಾಯಿ ಅಜ್ಜಿಯು ಪ್ರತಿಬಾರಿ ಖಂಜ್ಮಾ ನಗರ್ ಬಗ್ಗೆ ಹೇಳುತ್ತಿದ್ದರು. ಗೂಗಲ್ ನಲ್ಲಿ ಹುಡುಕಾಡಿದರೂ ಅಂಥದೊಂದು ಪ್ರದೇಶ ಇರುವ ಬಗ್ಗೆ ಪತ್ತೆಯಾಗಲಿಲ್ಲ. ಕಳೆದ ಮೇ.4ರಂದು ಲಾಕ್ ಡೌನ್ ಸಂದರ್ಭದಲ್ಲಿ ಅಜ್ಜಿಯನ್ನು ಮತ್ತೊಮ್ಮೆ ಅವರ ವಿಳಾಸದ ಬಗ್ಗೆ ವಿಚಾರಿಸಿದೆ. ಈ ವೇಳೆ ಪರಸ್ಪುರ್ ಕುರಿತು ಹೇಳಿದರು. ಪರಸ್ಪುರ್ ಕುರಿತು ಗೂಗಲ್ ನಲ್ಲಿ ಹುಡುಕಾಟ ನಡೆಸಿದಾಗ ಅದು ಮಹಾರಾಷ್ಟ್ರದ ಒಂದು ಗ್ರಾಮ ಎಂದು ತಿಳಿದು ಬಂದಿತು ಅಂತಾ ಖಾನ್ ಹೇಳುತ್ತಾರೆ.

ಪಂಚುಬಾಯಿ ಬಗ್ಗೆ ವಿಡಿಯೋ ಸಂದೇಶ ಶೇರ್

ಪಂಚುಬಾಯಿ ಬಗ್ಗೆ ವಿಡಿಯೋ ಸಂದೇಶ ಶೇರ್

ಮಹಾರಾಷ್ಟ್ರದ ಪರಸ್ಪುರ್ ನಲ್ಲಿ ಅಂಗಡಿ ಇಟ್ಟುಕೊಂಡಿದ್ದ ಅಭಿಷೇಕ್ ಎಂಬುವವರಿಗೆ ಅಜ್ಜಿಯ ಕುರಿತು ಖಾನ್ ಹೇಳಿದರು. ಕಿರಾರ್ ಸಮುದಾಯಕ್ಕೆ ಸೇರಿದ ವ್ಯಕ್ತಿಯಿಂದ ಖಂಜ್ಮಾ ನಗರ್ ಇರುವುದು ಸ್ಪಷ್ಟವಾಯಿತು. ಪಂಚುಬಾಯಿ ಅವರ ಪುಟ್ಟ ವಿಡಿಯೋವೊಂದನ್ನು ಮಾಡಿ ವಾಟ್ಸಾಪ್ ನಲ್ಲಿ ಶೇರ್ ಮಾಡಿದರು. ಈ ವಿಡಿಯೋವನ್ನು ವಾಟ್ಸಾಪ್ ನಲ್ಲಿ ಶೇರ್ ಮಾಡಲಾಗಿತ್ತು. ಅದೇ ಪಂಚುಬಾಯಿ ಅವರ ವಿಡಿಯೋ ಮೊಮ್ಮಗ ಪೃಥ್ವಿ ಭೈಯಾಲಲ್ ಶಿಂಗಾನೆ ಅವರಿಗೂ ತಲುಪಿತು. ಮೇ.7ರ ರಾತ್ರಿ 8.30ರ ವೇಳೆಗೆ ಪಂಚುಬಾಯಿ ಅವರನ್ನು ಗುರುತಿಸಿದ ಮೊಮ್ಮಗನು ತಮಗೆ ಕರೆ ಮಾಡಿದ್ದರು ಎಂದು ಖಾನ್ ತಿಳಿಸಿದರು.

ಅಜ್ಜಿಯನ್ನು ಜೂ.17ರಂದು ಮನೆಗೆ ಕರೆದೊಯ್ದ ಮೊಮ್ಮಗ

ಅಜ್ಜಿಯನ್ನು ಜೂ.17ರಂದು ಮನೆಗೆ ಕರೆದೊಯ್ದ ಮೊಮ್ಮಗ

40 ವರ್ಷಗಳಿಂದ ನಾಪತ್ತೆಯಾಗಿದ್ದ ಪಂಜುಬಾಯಿ ಅವರನ್ನು ಜೂನ್.17ರಂದು ಮೊಮ್ಮಗ ಪೃಥ್ವಿ ಭೈಯಾಲಲ್ ಶಿಂಗಾನೆ ವಾಪಸ್ ಮನೆಗೆ ಕರೆದುಕೊಂಡು ಹೋದರು. ನಾವು ಮಹಾರಾಷ್ಟ್ರ ಅಮರಾವತಿ ಜಿಲ್ಲೆ ಅಚಲ್ಪುರ್ ತೆಹಸಿಲ್ ನ ಖಂಜ್ಮಾ ನಗರ್ ಪ್ರದೇಶದ ಮೂಲ ನಿವಾಸಿಗಳಾಗಿದ್ದು, 50 ವರ್ಷಗಳ ಹಿಂದೆಯಷ್ಟೇ ನಾಗ್ಪುರಕ್ಕೆ ಸ್ಥಳಾಂತರಗೊಂಡೆವು. ಮಾನಸಿಕ ಅಸ್ವಸ್ಥಗೊಂಡಿದ್ದ ಪಂಚುಬಾಯಿ ಅವರ ಚಿಕಿತ್ಸೆಗಾಗಿ 1979ರಲ್ಲಿ ಖಂಜ್ಮಾ ನಗರ್ ಪ್ರದೇಶದಿಂದ ನಾಗ್ಪುರ್ ಗೆ ಕರೆದುಕೊಂಡು ಹೋಗಲಾಯಿತು. ಒಂದು ದಿನ ತಂದೆಯ ಮನೆಗೆ ತೆರಳುತ್ತೇನೆ ಎಂದು ಹೊರಟ ತಮ್ಮ ಅಜ್ಜಿ ಹಿಂತಿರುಗಿ ಮನೆಗೆ ಬರಲೇ ಇಲ್ಲ. ಪಂಚುಬಾಯಿ ಅವರಿಗಾಗಿ ಹುಡುಗಾಟ ನಡೆಸಿದ ತಮ್ಮ ತಂದೆ ಅವರ ನೆನಪಿನಲ್ಲೇ ಕಳೆದ 2017ರಲ್ಲಿ ಮೃತಪಟ್ಟದರು ಎಂದು ಶಿಂಗಾನೆ ತಿಳಿಸಿದ್ದಾರೆ. ನಾಲ್ಕು ದಶಕಗಳ ಕಾಲ ತಮ್ಮ ಅಜ್ಜಿಗೆ ಆಶ್ರಯ ನೀಡಿದ ಖಾನ್ ಕುಟುಂಬಕ್ಕೆ ಶಿಂಗಾನೆ ಧನ್ಯವಾದ ತಿಳಿಸಿದ್ದಾರೆ.

English summary
Google and WhatsApp that helped a 94-year-old woman to return home after forty years. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X