ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿಗೆ ಬಂಗಾರ ನಿಂಗೆ ಚಿನ್ನ ಕೊಡಿಸ್ತೀನಿ ಅನ್ನೋ ಹಾಗಿಲ್ಲ!

|
Google Oneindia Kannada News

ಮುಂಬೈ, ಅಕ್ಟೋಬರ್ 26: ಒಂದೆಡೆ ಅಮೆರಿಕಾದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದ್ದಂತೆ ದೇಶದಲ್ಲಿ ಅನೇಕ ಅತ್ಯಾವಶ್ಯಕ ಉತ್ಪನ್ನಗಳ ಬೆಲೆಯೂ ಗಗನಕ್ಕೇರುತ್ತಿದೆ.

ಈಗಾಘಲೇ ಪೆಟ್ರೋಲ್ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಅದನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಹಾಗೂ ರಾಜ್ಯಗಳು ಹರಸಾಹಸ ಪಡುತ್ತಿವೆ. ಆದರೆ ಇದೆಲ್ಲದರ ಪರಿಣಾಮ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಹಬ್ಬಗಳೆಂದರೆ ಸಾಮಾನ್ಯವಾಗಿ ಮಹಿಳೆಯರು ಚಿನ್ನ ಖರೀದಿಸುವುದು ವಾಡಿಕೆ. ಆದರೆ ಈ ದೀಪಾವಳಿ ದುಬಾರಿಯಾಗುವ ಎಲ್ಲಾ ಸಾಧ್ಯತೆಗಳಿವೆ.

ಆಭರಣ ಚಿನ್ನ ಗ್ರಾಮ್ ಗೆ 3 ಸಾವಿರ ರುಪಾಯಿ, ದೀಪಾವಳಿಗೆ ಏನು ಕಥೆ? ಆಭರಣ ಚಿನ್ನ ಗ್ರಾಮ್ ಗೆ 3 ಸಾವಿರ ರುಪಾಯಿ, ದೀಪಾವಳಿಗೆ ಏನು ಕಥೆ?

ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ ಈಗಾಗಲೇ ಚಿನ್ನ ದಾಖಲೆಯ ಏರಿಕೆಯನ್ನು ಕಂಡಿದೆ. ಬುಧವಾರ ಪ್ರತಿ 10 ಗ್ರಾಂ ಚಿನ್ನಕ್ಕೆ 125ರೂ ಏರಿಕೆ ಕಂಡಿದೆ. 32,625 ರೂ ತಲುಪಿದೆ. ಕಳೆದ ಆರು ವರ್ಷಗಳಲ್ಲೇ ಇದು ಗರಿಷ್ಠ ದರವಾಗಿದೆ ಎಂದು ಹೇಳಲಾಗಿದೆ.

Gold will be costlier than eve before on this Deepawali

ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಆಭರಣ ವ್ಯಾಪಾರಿಗಳು ದಾಸ್ತಾನು ಹೆಚ್ಚಿಸುತ್ತಿರುವ ಕಾರಣ ಬಂಗಾರದ ಬೆಲೆ ಏರಿಕೆಯಾಗುತ್ತಿದೆ. ಜತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೆಲೆ ಏರಿಕೆ ಹಾದಿಯಲ್ಲಿದೆ.

ಇಳಿಕೆಯಾಗಿದ್ದ ಹಳದಿ ಲೋಹದ ಬೆಲೆ ದಿಢೀರ್ ಏರಿಕೆ! ಇಳಿಕೆಯಾಗಿದ್ದ ಹಳದಿ ಲೋಹದ ಬೆಲೆ ದಿಢೀರ್ ಏರಿಕೆ!

ಆದರೆ ಬೆಳ್ಳಿ ತುಸು ಇಳಿಕೆಯಾಗಿದೆ. ಪ್ರತಿ ಕೆ.ಜಿ.ಗೆ 130 ರೂ.ಇಳಿಕೆಯಾಗಿ ಬೆಳ್ಳಿ ದರ 39,600 ರೂ.ಕ್ಕೆ ತಲುಪಿದೆ. ದೀಪಾವಳಿಗೆ ಚಿನ್ನ ಮಹಿಳೆಯರ ಕೊರಳನ್ನು ಬಿಸಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ದೀಪಾವಳಿಗೆ ಚಿನ್ನಾಭರಣ ಖರೀದಿಸಲು ಯೋಜನೆ ಹಾಕಿಕೊಂಡಿರುವವರಿಗೆ ಇದು ನಿರಾಸೆ ಮೂಡಿಸಿದೆ.

English summary
As Diwali festival nearing, gold price in the market is reaching ever highest as Rs 32,625 for 10 grams
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X