• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೋದ್ರೇಜ್ ಪಾಲಾದ ರಾಜ್ ಕಪೂರ್ ಕುಟುಂಬದ ನೆನಪಿನ ಸ್ಟುಡಿಯೋ

|

ಮುಂಬೈ, ಮೇ 03: ಮುಂಬೈನ ಚೆಂಬೂರ್ ನಲ್ಲಿ ರಾಜ್ ಕಪೂರ್ ನಿರ್ಮಿಸಿದ್ದ ಪ್ರತಿಷ್ಟಿತ 'ಆರ್.ಕೆ.ಸ್ಟುಡಿಯೋಸ್' ಈಗ ಗೋದ್ರೇಜ್ ಸಂಸ್ಥೆ ಪಾಲಾಗಿದೆ.

ಆರ್ ಕೆ ಸ್ಟುಡಿಯೋ ಮಾರಾಟದ ಬಗ್ಗೆ ಕಳೆದ ವರ್ಷ ಆಗಸ್ಟ್ ನಲ್ಲಿ ಸುಳಿವು ನೀಡಿದ್ದ ನಟ ರಿಷಿ ಕಪೂರ್ ಅವರು ನಂತರ ತಮ್ಮ ಕುಟುಂಬದ ಹೆಮ್ಮೆಯ ಸ್ಟುಡಿಯೋವನ್ನು ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ ಸಂಸ್ಥೆಗೆ ಮಾರಲು ನಿರ್ಧರಿಸಿದರು. ರಣಧೀರ್, ರಿಷಿ ಮತ್ತು ರಾಜೀವ್, ಸೋದರಿಯರಾದ ರಿತು ಮತ್ತು ರಿಮಾ ಒಮ್ಮತದ ನಿರ್ಣಯ ಕೈಗೊಂಡು 'ಆರ್.ಕೆ.ಸ್ಟುಡಿಯೋಸ್'ನ ಮಾರಾಟ ಮಾಡಿದ್ದಾರೆ.

ಮಾರಾಟಕ್ಕಿರುವ ಪ್ರತಿಷ್ಟಿತ 'ಆರ್.ಕೆ.ಸ್ಟುಡಿಯೋಸ್' ಎಷ್ಟು ಬೆಲೆ ಬಾಳುತ್ತೆ ಗೊತ್ತೇ.?

ಬರ್ಸಾತ್, ಜಾಗ್ತೇ ರಹೋ, ಆವಾರ. ಶ್ರೀ420, ಸಂಗಮ್, ಮೇರಾನಾಮ್ ಜೋಕರ್ ಮುಂತಾದ ಮಹೋನ್ನತ ಚಿತ್ರಗಳು ಇದೇ ಆರ್.ಕೆ. ಸ್ಟುಡಿಯೋದಲ್ಲಿ ಚಿತ್ರೀಕರಣ ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆರ್.ಕೆ.ಸ್ಟುಡಿಯೋಸ್'ನಲ್ಲಿ ನರ್ಗಿಸ್ ರಿಂದ ಹಿಡಿದು ವೈಜಯಂತಿಮಾಲಾ ವರೆಗೂ ಎಲ್ಲಾ ರಾಜ್ ಕಪೂರ್ ನಾಯಕಿಯರ ಕಾಸ್ಟ್ಯೂಮ್ಸ್, 'ಮೇರಾ ನಾಮ್ ಜೋಕರ್' ಮಾಸ್ಕ್, 'ಅವಾರಾ' ಸಿನಿಮಾದಲ್ಲಿ ಬಳಸಿದ ಪಿಯಾನೋ ಸೇರಿದಂತೆ ಎಷ್ಟೋ ಸ್ಮರಣೀಯ ವಸ್ತುಗಳು ಕೆಲ ವರ್ಷಗಳ ಹಿಂದೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಬೂದಿಯಾಗಿತ್ತು. ಇದಾದ ಬಳಿಕ ಸ್ಟುಡಿಯೋ ನಿರ್ವಹಣೆ ಕಷ್ಟಕರವಾಗಿತ್ತು.

2.2 ಎಕರೆ ಪ್ರದೇಶದ ಸ್ಟುಡಿಯೋ

2.2 ಎಕರೆ ಪ್ರದೇಶದ ಸ್ಟುಡಿಯೋ

ಗೋದ್ರೇಜ್ ಗ್ರೂಪ್ ನ ರಿಯಲ್ ಎಸ್ಟೇಟ್ ವಿಭಾಗವು ಚೆಂಬೂರಿನಲ್ಲಿರುವ ಸ್ಟುಡಿಯೋಗೆ ಸೇರಿದ 2.2 ಎಕರೆ ಜಾಗವನ್ನು ಖರೀದಿಸುತ್ತಿದೆ. ಈಗಾಗಲೇ ಮುಂಗಡ ಪಾವತಿ ರೂಪದಲ್ಲಿ 150 ಕೋಟಿ ರು ನೀಡಲಾಗಿದೆ. ಕಪೂರ್ ಕುಟುಂಬದವರು 250 ಕೋಟಿ ರು ಮೌಲ್ಯ ಕೇಳಿದ್ದರು ಎಂಬ ಸುದ್ದಿಯಿದೆ. ಕನಿಷ್ಠ 200 ಕೋಟಿ ರು ಗೆ ಮಾರಾಟವಾಗಿರುವ ಸಾಧ್ಯತೆಯಿದೆ. ಆದರೆ, ಅಂತಿಮ ಮಾರಾಟ ಮೌಲ್ಯ ಇನ್ನು ಬಹಿರಂಗವಾಗಿಲ್ಲ.

ಚೆಂಬೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ

ಚೆಂಬೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ

ಚೆಂಬೂರ್ ಪ್ರದೇಶದಲ್ಲಿ ಈಗ ರಿಯಲ್ ಎಸ್ಟೇಟ್ ವ್ಯವಹಾರ ಜೋರಾಗಿದೆ. ಇತ್ತೀಚೆಗೆ ಚೆಂಬೂರ್ ಏರಿಯಾದ 2 ಎಕರೆ ನಿವೇಶನವನ್ನು ಬೆಂಗಳೂರು ಮೂಲದ ಪುರುವಂಕರ ಲಿಮಿಟೆಡ್ ಅವರು 147ಕೋಟಿ ರು ನೀಡಿ ಖರೀದಿಸಿತ್ತು. ಕಳೆದ ವರ್ಷ ಪೆಪ್ಸಿಕೋ 2.3 ಎಕರೆ, ಡ್ಯೂಕ್ ಘಟಕವನ್ನು ವಾಧ್ವಾ ಸಮೂಹ 167 ಕೋಟಿ ರು ಗೆ ಖರೀದಿ ಮಾಡಿತ್ತು.

ಪಾಕಿಸ್ತಾನದಲ್ಲಿರುವ ರಿಷಿ ಕಪೂರ್ ಪೂರ್ವಜರ ಮನೆ ಆಗಲಿದೆ ಮ್ಯೂಸಿಯಂ

ವಸತಿ ಸಮುಚ್ಚಯ ನಿರ್ಮಿಸಲಿರುವ ಗೋದ್ರೇಜ್

ವಸತಿ ಸಮುಚ್ಚಯ ನಿರ್ಮಿಸಲಿರುವ ಗೋದ್ರೇಜ್

2.2 ಎಕರೆ ವಿಸ್ತೀರ್ಣದ ಜಾಗದಲ್ಲಿ 33,000 ಬಿಲ್ಡಪ್ ಪ್ರದೇಶ ಸಿಗಲಿದ್ದು, ವಸತಿ ಸಮುಚ್ಚಯ ನಿರ್ಮಿಸುವ ಯೋಜನೆಯನ್ನು ಗೋದ್ರೇಜ್ ಸಂಸ್ಥೆ ಹಾಕಿಕೊಂಡಿದೆ. ಸಿಯೊನ್ ಪನ್ವೆಲ್ ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಕಟ್ಟಡ ಪ್ರದೇಶವು ಶಾಲೆ, ಆಸ್ಪತ್ರೆ, ರೀಟೈಲ್ ಮಳಿಗೆ, ವಾಣಿಜ್ಯ ಸಂಕೀರ್ಣಗಳಿಂದ ಆವರಿಸಿದೆ ಎಂದು ಕಾರ್ಯಕಾರಿ ಚೇರ್ಮನ್ ಪಿರೋಶ್ನಾ ಗೋದ್ರೇಜ್ ಹೇಳಿದ್ದಾರೆ.

ರಿಷಿ ಕಪೂರ್ ಪ್ರತಿಕ್ರಿಯೆ

ರಿಷಿ ಕಪೂರ್ ಪ್ರತಿಕ್ರಿಯೆ

''ಅಗ್ನಿ ಅವಘಡ ಸಂಭವಿಸಿದ್ಮೇಲೆ, ನವೀಕರಣ ಮಾಡಬೇಕು ಅಂತ ಎಷ್ಟೋ ಪ್ರಯತ್ನ ಪಟ್ವಿ. ಆದ್ರೆ, ಆಗಲಿಲ್ಲ. ಸ್ಟುಡಿಯೋ ಬಗ್ಗೆ ನಮ್ಮೆಲ್ಲರಿಗೂ ಭಾವನಾತ್ಮಕ ನಂಟು ಇದೆ. ಇದೊಂದು ನೋವಿನ ವಿಚಾರ, ಆದರೆ, ಗೋದ್ರೇಜ್ ಪ್ರಾಪರ್ಟೀಸ್ ಗತ ಇತಿಹಾಸದ ಮೇಲೆ ಹೊಸ ಅದ್ಯಾಯವನ್ನು ಬರೆಯಲಿದೆ ಎಂದು ರಿಷಿ ಕಪೂರ್ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Godrej Properties acquired iconic R.K. Studios' land in Mumbai. The sprawling two-acre studio is the place where many hit films like Barsaat, Jagte Raho, Awaara, Bobby, Shree 420, Sangam and others had been shot.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more