• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊವಿಡ್ 19 ಔಷಧಿ ಬೆಲೆ ಮಾತ್ರೆಯೊಂದಕ್ಕೆ 75 ರು ಮಾತ್ರ!

|

ಮುಂಬೈ, ಜುಲೈ 13: ಲಘು ಹಾಗೂ ಮಧ್ಯಮ ಪ್ರಮಾಣದ ಕೊವಿಡ್ 19 ಸೋಂಕಿತರಿಗೆ antiviral ಡ್ರಗ್ ಬಳಸಲು ಮುಂಬೈ ಮೂಲದ ಗ್ಲೆನ್ ಮಾರ್ಕ್ ಫಾರ್ಮಾಗೆ ಅನುಮತಿ ಸಿಕ್ಕಿದ್ದು ಗೊತ್ತಿರಬಹುದು. ಕೊವಿಡ್ 19 ವಿರುದ್ಧ ಈ ಸಂಸ್ಥೆ ಹೊರ ತಂದಿದ ಮಾತ್ರೆಯ ಬೆಲೆಯನ್ನು ಈಗ 73ರು ಪ್ರತಿ ಮಾತ್ರೆಯಂತೆ ತಗ್ಗಿಸಲಾಗಿದೆ.

   CPL starts midst Corona | ಕೊರೊನ ನಡುವೆಯೇ ಶುರುವಾಗಲಿದೆ CPL | Oneindia Kannada

   ಕೊವಿಡ್ 19 ಸೋಂಕಿತರು ಬಾಯಿ ಮೂಲಕ ಸೇವಿಸಬಹುದಾದ ಈ antiviral ಡ್ರಗ್ ವಿಶೇಷತೆಯಂದರೆ ಇಲ್ಲಿ ತನಕ ಈ ಡ್ರಗ್ ಬಳಸಿದವರಲ್ಲಿ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ. ಕಳೆದ ತಿಂಗಳ ಅಂತ್ಯಕ್ಕೆ ಮಾರುಕಟ್ಟೆಗೆ ಈ ಮಾತ್ರೆ ಬಂದಾಗ ಪ್ರತಿ ಮಾತ್ರೆಯ ಬೆಲೆ 103 ಎಂದು ನಿಗದಿ ಪಡಿಸಲಾಗಿತ್ತು.

   ಭಾರತದಲ್ಲಿ ಕೊವಿಡ್19 ಕೊಲ್ಲಲು ಈ ಲಸಿಕೆಯೇ ರಾಮಬಾಣ?

   ಜಪಾನ್ ಮೂಲದ ಈ ಮಾತ್ರೆಯನ್ನು ಕೋವಿಡ್ 19 ರೋಗಿಗಳಿಗೆ ನೀಡಿ ಕ್ಲಿನಕಲ್ ಟ್ರಯಲ್ ನಡೆಸಿ ಕಾರ್ಯ ಕ್ಷಮತೆ ಪರೀಕ್ಷಿಸಲಾಗುತ್ತಿದೆ. ಜಪಾನ್ ನ ಫ್ಯೂಜಿಫಿಲಂ ಹೋಲ್ಡಿಂಗ್ಸ್ ಕಾರ್ಪ್ ಸಂಸ್ಥೆ ಅವಿಗಾನ್(avigan) ಹೆಸರಿನಲ್ಲಿ favipiravir ಹೊರ ತಂದಿದ್ದು, ಜುಲೈ ವೇಳೆಗೆ ಸಂಪೂರ್ಣವಾಗಿ ಕೊವಿಡ್ 19 ತೊಲಗಿಸುವ ಡ್ರಗ್ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

   ಭಾರತದಲ್ಲಿ favipiravir ಡ್ರಗ್ ಗ್ಲೆನ್ ಮಾರ್ಕ್ ಸಂಸ್ಥೆಯಿಂದ FabiFlu ಹೆಸರಿನಲ್ಲಿ ದೊರೆಯಲಿದೆ. favipiravir ಹಾಗೂ umifenovir ಸಂಯೋಜಿಸಿ ಹೊಸ ಡ್ರಗ್ ತಯಾರಿಸಿ ಕೂಡಾ ಮಾರುಕಟ್ಟೆಗೆ ತರುವ ಯೋಜನೆಯನ್ನು ಸಂಸ್ಥೆ ಹಾಕಿಕೊಂಡಿದೆ.

   ಜಪಾನಿಯರು ಮೊದಲಿಗೆ ಹೊರ ತಂದ ಮಾತ್ರೆ

   ಜಪಾನಿಯರು ಮೊದಲಿಗೆ ಹೊರ ತಂದ ಮಾತ್ರೆ

   2014ರಲ್ಲಿ ಜಪಾನಿಯರು ಮೊದಲಿಗೆ ಅವಿಫಾವಿರ್ ಮಾತ್ರೆಯನ್ನು ಕಂಡು ಹಿಡಿದು ಜ್ವರ ನಿವಾರಣೆಗಾಗಿ ಬಳಸತೊಡಗಿದರು. ಅಂದಿನಿಂದ ಇಲ್ಲಿ ತನಕ ಯಾವುದೇ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ ಹೀಗಾಗಿ, ಕೊವಿಡ್ 19 ರೋಗಿಗಳ ಕ್ಲಿನಿಕಲ್ ಟ್ರಯಲ್ ಬಳಕೆಗೂ ಸುರಕ್ಷಿತ ಹಾಗೂ ತ್ವರಿತಗತಿಯಲ್ಲಿ ಟ್ರಯಲ್ ಮುಗಿಸಬಹುದು ಎಂದು ಜಪಾನಿ ತಜ್ಞರು ಸೂಚನೆ ನೀಡಿದ ಬಳಿಕ ರಷ್ಯನ್ನರು ಟ್ರಯಲ್ ಆರಂಭಿಸಿದರು. ರಷ್ಯಾ ಹಾಗೂ ಜಪಾನ್ ಜಂಟಿ ಸಹಯೋಗದಲ್ಲಿ ಕೊವಿಡ್ 19ಗೆ ಈ ಡ್ರಗ್ ಹೇಗೆ ಉಪಯುಕ್ತ ಎಂಬುದರ ಬಗ್ಗೆ ಸಂಶೋಧನೆ, ಟ್ರಯಲ್ ನಡೆಸಲಾಗಿದೆ.

   ಗ್ಲೆನ್ ಮಾರ್ಕ್ ಸಂಸ್ಥೆ ಲಸಿಕೆ ಬಳಸಲು ನಿಯಮಗಳಿವೆ

   ಗ್ಲೆನ್ ಮಾರ್ಕ್ ಸಂಸ್ಥೆ ಲಸಿಕೆ ಬಳಸಲು ನಿಯಮಗಳಿವೆ

   ಗ್ಲೆನ್ ಮಾರ್ಕ್ ಸಂಸ್ಥೆ ಲಸಿಕೆ/ಮಾತ್ರೆ ಬಳಕೆ ಮಾಡುವ ಮೊದಲು ಸೋಂಕಿತ ವ್ಯಕ್ತಿಯಿಂದ ಲಿಖಿತ ಒಪ್ಪಿಗೆ ಪಡೆದುಕೊಂಡಿರಬೇಕು. ಸೋಂಕಿತ ವ್ಯಕ್ತಿಗೆ 14ದಿನಗಳವರೆಗೆ ಮಾತ್ರ ಡ್ರಗ್ ನೀಡಬಹುದು. ಮೊದಲ ದಿನ 3600 mg, ಎರಡನೇ ದಿನ 1600 mg ಈ ರೀತಿ ಇಳಿಕೆ ಕ್ರಮದಲ್ಲೇ ನೀಡಬೇಕು. ಗರ್ಭಿಣಿ, ಬಾಣಂತಿ, ಕರುಳುಬೇನೆಯುಳ್ಳವರು, ಯೂರಿಕ್ ಆಮ್ಲ ಅಸಮತೋಲನವುಳ್ಳವರು.. ಹೀಗೆ ಮುಂತಾದ ದೇಹ ಪರಿಸ್ಥಿತಿಯುಳ್ಳವರಿಗೆ ನೀಡುವಂತಿಲ್ಲ.

   favipiravir ಮೂಲ Anti viral ಡ್ರಗ್

   favipiravir ಮೂಲ Anti viral ಡ್ರಗ್

   favipiravir ಮೂಲ Anti viral ಡ್ರಗ್ ಆಧಾರ ಮೇಲೆ ಅವಿಫಾವಿರ್ ತಯಾರಾಗುತ್ತಿದ್ದು, 2014ರಿಂದ ಮುಖ್ಯವಾಗಿ ವಿಷಯ ಶೀತ ಜ್ವರಕ್ಕೆ ಬಳಸಲಾಗುತ್ತಿದೆ. ಸದ್ಯ ರಷ್ಯಾದಲ್ಲಿ ಕೊವಿಡ್ 19ಗೆ ಬಳಸಲು ಆರಂಭಿಸಿ ತಿಂಗಳು ಕೂಡಾ ಕಳೆದಿಲ್ಲ. ಸೈಡ್ ಎಫೆಕ್ಟ್ ಇಲ್ಲದಿರುವುದರಿಂದ 10 ದಿನಗಳ ಕ್ಲಿನಿಕಲ್ ಟ್ರಯಲ್ ಮಾತ್ರ ಮಾಡಲಾಗಿದೆ. ಈ ಡ್ರಗ್ ಪಡೆದ ರೋಗಿಗೆ 4 ದಿನಗಳಲ್ಲೇ ಸೋಂಕು ತೊಲಗಿದೆ. ಶೇ 80ರಷ್ಟು ಕಾರ್ಯಕ್ಷಮತೆಯನ್ನು ಇದು ಹೊಂದಿದೆ ಎಂದು ಮಾಸ್ಕೋ ವಿವಿಯಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಿದ ಐಎಂ ಶೆಕೆನೊವ್ ಮೆಡಿಕಲ್ ವಿವಿ, ಲೊಮೊನೊಸೊವ್ ಮಾಸ್ಕೋ ವಿವಿ ವಿಜ್ಞಾನಿಗಳ ತಂಡ ಹೇಳಿದೆ. 10 ದಿನಗಳ ತನಕದ ಡೋಸೆಜ್ ಪೂರ್ಣಗೊಳಿಸಿದ ರೋಗಿಗಳಿಗೆ ಯಾವುದೇ ಸೋಂಕು, ಯಾವುದೇ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ.

   ಕ್ಲಿನಿಕಲ್ ಟ್ರಯಲ್ ಮುಗಿಸಿರುವ ಗ್ಲೆನ್ ಮಾರ್ಕ್

   ಕ್ಲಿನಿಕಲ್ ಟ್ರಯಲ್ ಮುಗಿಸಿರುವ ಗ್ಲೆನ್ ಮಾರ್ಕ್

   ಗ್ಲೆನ್ ಮಾರ್ಕ್ ಸಂಸ್ಥೆಯು ಫಾವಿಪಿರಾವಿರ್ ಆಧಾರಿತ ಫಾಬಿಫ್ಲೂ ಔಷಧಿಯ 3 ಹಂತದ ಕ್ಲಿನಿಕಲ್ ಟ್ರಯಲ್ ಮುಗಿಸಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಫಾವಿಪಿರಾವಿರ್ ಹಾಗೂ ಯುಮಿಫೆನೊವಿರ್(Umifenovir) ಸಂಯೋಜನೆಯ ಹೊಸ ಡ್ರಗ್ ಬಳಸಿ ಕ್ಲಿನಿಕಲ್ ಟ್ರಯಲ್ ಕೂಡಾ 3 ಹಂತದಲ್ಲಿ ನಡೆಸಲಿದೆ. ಇದನ್ನು ಎಲ್ಲಾ ಬಗೆಯ ಕೊವಿಡ್ 19 ಸೋಂಕಿತರಿಗೆ ನೀಡಲು ಸಂಸ್ಥೆ ಬಯಸಿದೆ.

   English summary
   Drug firm Glenmark Pharmaceuticals on Monday said it has cut price of its antiviral drug Favipiravir, under the brand name FabiFlu, for the treatment of patients with mild to moderate COVID-19, by 27 per cent to ₹75 per tablet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more