ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊವಿಡ್19 ಕೊಲ್ಲಲು ಈ ಲಸಿಕೆಯೇ ರಾಮಬಾಣ?

|
Google Oneindia Kannada News

ಮುಂಬೈ , ಜೂನ್ 20: ಜಾಗತಿಕ ಮಹಾಮಾರಿ ಕೊವಿಡ್19 ಗೆ ಲಸಿಕೆ ಕಂಡು ಹಿಡಿಯಲು ಅನೇಕ ದೇಶಗಳು ಹಗಲಿರುಳು ಶ್ರಮಿಸುತ್ತಿವೆ. ಭಾರತದಲ್ಲಿ ತಯಾರಾಗುವ ಹೈಡ್ರೋಕ್ಸಿಕ್ಲೋರಿಕ್ವಿನ್ ನಂತರ ಹೆಚ್ಚು ಕೇಳಿ ಬಂದಿರುವ ಲಸಿಕೆ ಫಾವಿವಿರವಿರ್ (favipiravir). ಇದೀಗ ಈ ಲಸಿಕೆ ಬಳಕೆಗೆ ಭಾರತೀಯ ಡ್ರಗ್ ನಿಯಂತ್ರಕ(ಡಿಜಿಸಿಐ) ಅನುಮತಿ ಸಿಕ್ಕಿದೆ. ಈ ಮೂಲಕ ಭಾರತದಲ್ಲೇ ಮಾತ್ರೆ ತಯಾರಿ, ಬಳಕೆ ಎಲ್ಲವೂ ತ್ವರಿತವಾಗಿ ಸಾಧ್ಯವಾಗಲಿದೆ ಹಾಗೂ favipiravir 200mg ಉತ್ಪಾದನೆ, ಮಾರಾಟ ಮಾಡುವ ಲೈಸನ್ಸ್ ಗ್ಲೆನ್ ಮಾರ್ಕ್ ಕಂಪನಿಗೆ ನೀಡಲಾಗಿದೆ.

Recommended Video

Solar Eclipse June 21 : ಗ್ರಹಣ ಸಮಯದಲ್ಲಿ ಇದನ್ನು ತಪ್ಪದೇ ಮಾಡಿ | Roopa Iyer | Oneindia Kannada

ಮುಂಬೈ ಮೂಲದ ಕಂಪನಿಗೆ ಈ ಡ್ರಗ್ ಬಳಕೆ ಅನುಮತಿ ಸಿಕ್ಕಿದ್ದು, ಲಘು ಹಾಗೂ ಮಧ್ಯಮ ಪ್ರಮಾಣದ ಕೊವಿಡ್ 19 ಸೋಂಕಿತರಿಗೂ ಇದನ್ನು ಬಳಸಬಹುದಾಗಿದೆ. ಬಾಯಿ ಮೂಲಕ ಸೇವಿಸಬಹುದಾದ ಈ antiviral ಡ್ರಗ್ ವಿಶೇಷತೆಯಂದರೆ ಇಲ್ಲಿ ತನಕ ಈ ಡ್ರಗ್ ಬಳಸಿದವರಲ್ಲಿ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ.

ರಷ್ಯಾದಿಂದ ಕೊವಿಡ್19ಗೆ ಔಷಧ, Avifavir ಮ್ಯಾಜಿಕ್ ಡ್ರಗ್?ರಷ್ಯಾದಿಂದ ಕೊವಿಡ್19ಗೆ ಔಷಧ, Avifavir ಮ್ಯಾಜಿಕ್ ಡ್ರಗ್?

ಜಪಾನ್ ಮೂಲದ ಈ ಮಾತ್ರೆಯನ್ನು ಕೋವಿಡ್ 19 ರೋಗಿಗಳಿಗೆ ನೀಡಿ ಕ್ಲಿನಕಲ್ ಟ್ರಯಲ್ ನಡೆಸಿ ಕಾರ್ಯ ಕ್ಷಮತೆ ಪರೀಕ್ಷಿಸಲಾಗುತ್ತಿದೆ. ಜಪಾನ್ ನ ಫ್ಯೂಜಿಫಿಲಂ ಹೋಲ್ಡಿಂಗ್ಸ್ ಕಾರ್ಪ್ ಸಂಸ್ಥೆ ಅವಿಗಾನ್(avigan) ಹೆಸರಿನಲ್ಲಿ favipiravir ಹೊರ ತಂದಿದ್ದು, ಜುಲೈ ವೇಳೆಗೆ ಸಂಪೂರ್ಣವಾಗಿ ಕೊವಿಡ್ 19 ತೊಲಗಿಸುವ ಡ್ರಗ್ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ಗ್ಲೆನ್ ಮಾರ್ಕ್ ಸಂಸ್ಥೆಯಿಂದ FabiFlu

ಗ್ಲೆನ್ ಮಾರ್ಕ್ ಸಂಸ್ಥೆಯಿಂದ FabiFlu

ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಅಮೆರಿಕ, ಬ್ರೆಜಿಲ್, ಭಾರತ, ರಷ್ಯಾ ಪ್ರಮುಖವಾಗಿ ಕಾಣಿಸಿಕೊಂಡಿವೆ. 8.5 ಮಿಲಿಯನ್ ಜಾಗತಿಕವಾಗಿ ಸೋಂಕಿತರಿದ್ದು, 453,000 ಮಂದಿ ಮೃತರಾಗಿದ್ದಾರೆ. ಭಾರತದಲ್ಲಿ 12, 573ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ ದಾಟುತ್ತಿದ್ದಂತೆ ದೇಶದೆಲ್ಲೆಡೆ ಕೊವಿಡ್ 19 ಸೋಂಕಿತರ ಚಿಕಿತ್ಸೆಗೆ favipiravir ಡ್ರಗ್ ಬಳಸಲು ಅನುಮತಿ ನೀಡಲಾಯಿತು.

ಭಾರತದಲ್ಲಿ favipiravir ಡ್ರಗ್ ಗ್ಲೆನ್ ಮಾರ್ಕ್ ಸಂಸ್ಥೆಯಿಂದ FabiFlu ಹೆಸರಿನಲ್ಲಿ ದೊರೆಯಲಿದೆ. favipiravir ಹಾಗೂ umifenovir ಸಂಯೋಜಿಸಿ ಹೊಸ ಡ್ರಗ್ ತಯಾರಿಸಿ ಕೂಡಾ ಮಾರುಕಟ್ಟೆಗೆ ತರುವ ಯೋಜನೆಯನ್ನು ಸಂಸ್ಥೆ ಹಾಕಿಕೊಂಡಿದೆ.

ಜಪಾನಿಯರು ಹೊರ ತಂದ ಅವಿಫಾವಿರ್ ಮಾತ್ರೆ

ಜಪಾನಿಯರು ಹೊರ ತಂದ ಅವಿಫಾವಿರ್ ಮಾತ್ರೆ

2014ರಲ್ಲಿ ಜಪಾನಿಯರು ಮೊದಲಿಗೆ ಅವಿಫಾವಿರ್ ಮಾತ್ರೆಯನ್ನು ಕಂಡು ಹಿಡಿದು ಜ್ವರ ನಿವಾರಣೆಗಾಗಿ ಬಳಸತೊಡಗಿದರು. ಅಂದಿನಿಂದ ಇಲ್ಲಿ ತನಕ ಯಾವುದೇ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ ಹೀಗಾಗಿ, ಕೊವಿಡ್ 19 ರೋಗಿಗಳ ಕ್ಲಿನಿಕಲ್ ಟ್ರಯಲ್ ಬಳಕೆಗೂ ಸುರಕ್ಷಿತ ಹಾಗೂ ತ್ವರಿತಗತಿಯಲ್ಲಿ ಟ್ರಯಲ್ ಮುಗಿಸಬಹುದು ಎಂದು ಜಪಾನಿ ತಜ್ಞರು ಸೂಚನೆ ನೀಡಿದ ಬಳಿಕ ರಷ್ಯನ್ನರು ಟ್ರಯಲ್ ಆರಂಭಿಸಿದರು. ರಷ್ಯಾ ಹಾಗೂ ಜಪಾನ್ ಜಂಟಿ ಸಹಯೋಗದಲ್ಲಿ ಕೊವಿಡ್ 19ಗೆ ಈ ಡ್ರಗ್ ಹೇಗೆ ಉಪಯುಕ್ತ ಎಂಬುದರ ಬಗ್ಗೆ ಸಂಶೋಧನೆ, ಟ್ರಯಲ್ ನಡೆಸಲಾಗಿದೆ.

favipiravir ಡ್ರಗ್ ಬಳಕೆಗೆ ನಿಯಮ

favipiravir ಡ್ರಗ್ ಬಳಕೆಗೆ ನಿಯಮ

ಗ್ಲೆನ್ ಮಾರ್ಕ್ ಸಂಸ್ಥೆ ಲಸಿಕೆ/ಮಾತ್ರೆ ಬಳಕೆ ಮಾಡುವ ಮೊದಲು ಸೋಂಕಿತ ವ್ಯಕ್ತಿಯಿಂದ ಲಿಖಿತ ಒಪ್ಪಿಗೆ ಪಡೆದುಕೊಂಡಿರಬೇಕು. ಸೋಂಕಿತ ವ್ಯಕ್ತಿಗೆ 14ದಿನಗಳವರೆಗೆ ಮಾತ್ರ ಡ್ರಗ್ ನೀಡಬಹುದು. ಮೊದಲ ದಿನ 3600 mg, ಎರಡನೇ ದಿನ 1600 mg ಈ ರೀತಿ ಇಳಿಕೆ ಕ್ರಮದಲ್ಲೇ ನೀಡಬೇಕು. ಗರ್ಭಿಣಿ, ಬಾಣಂತಿ, ಕರುಳುಬೇನೆಯುಳ್ಳವರು, ಯೂರಿಕ್ ಆಮ್ಲ ಅಸಮತೋಲನವುಳ್ಳವರು.. ಹೀಗೆ ಮುಂತಾದ ದೇಹ ಪರಿಸ್ಥಿತಿಯುಳ್ಳವರಿಗೆ ನೀಡುವಂತಿಲ್ಲ.

ಇಲ್ಲಿ ತನಕದ ಕಾರ್ಯಕ್ಷಮತೆ ಎಷ್ಟಿದೆ?

ಇಲ್ಲಿ ತನಕದ ಕಾರ್ಯಕ್ಷಮತೆ ಎಷ್ಟಿದೆ?

favipiravir ಮೂಲ Anti viral ಡ್ರಗ್ ಆಧಾರ ಮೇಲೆ ಅವಿಫಾವಿರ್ ತಯಾರಾಗುತ್ತಿದ್ದು, 2014ರಿಂದ ಮುಖ್ಯವಾಗಿ ವಿಷಯ ಶೀತ ಜ್ವರಕ್ಕೆ ಬಳಸಲಾಗುತ್ತಿದೆ. ಸದ್ಯ ರಷ್ಯಾದಲ್ಲಿ ಕೊವಿಡ್ 19ಗೆ ಬಳಸಲು ಆರಂಭಿಸಿ ತಿಂಗಳು ಕೂಡಾ ಕಳೆದಿಲ್ಲ. ಸೈಡ್ ಎಫೆಕ್ಟ್ ಇಲ್ಲದಿರುವುದರಿಂದ 10 ದಿನಗಳ ಕ್ಲಿನಿಕಲ್ ಟ್ರಯಲ್ ಮಾತ್ರ ಮಾಡಲಾಗಿದೆ.

ಈ ಡ್ರಗ್ ಪಡೆದ ರೋಗಿಗೆ 4 ದಿನಗಳಲ್ಲೇ ಸೋಂಕು ತೊಲಗಿದೆ. ಶೇ 80ರಷ್ಟು ಕಾರ್ಯಕ್ಷಮತೆಯನ್ನು ಇದು ಹೊಂದಿದೆ ಎಂದು ಮಾಸ್ಕೋ ವಿವಿಯಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಿದ ಐಎಂ ಶೆಕೆನೊವ್ ಮೆಡಿಕಲ್ ವಿವಿ, ಲೊಮೊನೊಸೊವ್ ಮಾಸ್ಕೋ ವಿವಿ ವಿಜ್ಞಾನಿಗಳ ತಂಡ ಹೇಳಿದೆ. 10 ದಿನಗಳ ತನಕದ ಡೋಸೆಜ್ ಪೂರ್ಣಗೊಳಿಸಿದ ರೋಗಿಗಳಿಗೆ ಯಾವುದೇ ಸೋಂಕು, ಯಾವುದೇ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ.

English summary
Glenmark Pharmaceuticals Ltd has received Indian regulatory approval to make and sell oral antiviral drug favipiravir for treating mild-to-moderate COVID-19 infections in the country, it said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X