ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಘರ್​ಕುಲ್​​​​ ವಸತಿ ಹಗರಣ: ಶಿವಸೇನಾ ಮುಖಂಡನಿಗೆ 100 ಕೋಟಿ ರು ದಂಡ

|
Google Oneindia Kannada News

ಮುಂಬೈ, ಸೆ. 01: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಶಿವಸೇನಾ ನಾಯಕ ಸುರೇಶ್ ಜೈನ್​​ ಹಾಗೂ ಗುಲಾಬ್ ರಾವ್ ದೇವಕರ್ ಸೇರಿದಂತೆ 46 ಮಂದಿ ವಿರುದ್ಧ ಮಹಾರಾಷ್ಟ್ರದ ಧುಲೆ ಜಿಲ್ಲೆಯ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ಘರ್​ಕುಲ್​​​​ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಾಣ ಹಗರಣದಲ್ಲಿ ಎಲ್ಲರಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ.

ಸುರೇಶ್ ಜೈನ್​ ಅವರಿಗೆ 7 ವರ್ಷ ಜೈಲು ಹಾಗೂ 100 ಕೋಟಿ ದಂಡ, ಎನ್​​ ಸಿಪಿ ಪಕ್ಷದ ನಾಯಕ ಗುಲಾಬ್​ರಾವ್ ಗೆ ಗೆ 5 ವರ್ಷ ಜೈಲು ಶಿಕ್ಷೆ. ಉಳಿದ 46 ಆರೋಪಿಗಳಿಗೆ 3 ಹಾಗೂ 7 ವರ್ಷ ಶಿಕ್ಷೆ ಹಾಗೂ ಉಳಿದ 46 ಮಂದಿ ತಪ್ಪಿತಸ್ಥರಿಗೆ 3 ಹಾಗೂ 7 ವರ್ಷಗಳ ಕಾಲ ಶಿಕ್ಷೆ ವಿಧಿಸಿ ಜಿಲ್ಲಾ ಸತ್ರ ನ್ಯಾಯಾಲಯದ ವಿಶೇಷ ನ್ಯಾ. ಸೃಷ್ಟಿ ನೀಲಕಾಂತ್​​ ಅವರು ತೀರ್ಪು ನೀಡಿದ್ದಾರೆ.

ಸುರೇಶ್ ಜೈನ್​​​​​​​ ಹಾಗೂ ಗುಲಾಬ್​ ರಾವ್ ಅಲ್ಲದೆ ಹಾಲಿ ಹಾಗೂ ಮಾಜಿ ಪುರಸಭಾ ಸದಸ್ಯರು ಈ ಹಗರಣದಲ್ಲಿ ಶಾಮೀಲಾಗಿರುವುದು ಸಾಬೀತಾಗಿದೆ. ನ್ಯಾಯಾಲಯದ ತೀರ್ಪಿನಂತೆ ಎಲ್ಲಾ ಅಪರಾಧಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Gharkul housing scam: Rs 100 crore fine, 7-year jail term for Shiv Sena leader in housing scam

ಜಲ್ಗಾಂವ್​​​ ಹೊರವಲಯದಲ್ಲಿ ನಿರ್ಮಾಣವಾಗಬೇಕಿದ್ದ 5000 ಮನೆಗಳ ಪೈಕಿ 1500 ಮನೆಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಈ ಕುರಿತಂತೆ ಜಲಗಾಂವ್​ನ ಮಾಜಿ ಪುರಸಭೆ ಆಯುಕ್ತ ಪ್ರವೀಣ ಗೆದಮ್​​​ ಅವರು ಈ ಸಂಬಂಧ ಫೆಬ್ರುವರಿ 2006ರಲ್ಲಿ ದೂರು ದಾಖಲಿಸಿದ್ದರು.

90ರ ದಶಕದಲ್ಲಿ ಗೃಹ ಇಲಾಖೆ ರಾಜ್ಯಸಚಿವರಾಗಿದ್ದ ಸುರೇಶ್ ಜೈನ್ 29 ಕೋಟಿ ರು ವಸತಿ ಯೋಜನೆ ವಂಚನೆ ಪ್ರಕರಣದಲ್ಲಿ ಸಿಲುಕಿದ್ದರಿಂದ ಮಾರ್ಚ್ 2012ರಲ್ಲಿ ಬಂಧಿಸಲಾಗಿತ್ತು. ಒಂದು ವರ್ಷಗಳ ಕಾಲ ಜೈಲುವಾಸ ಅನುಭವಿಸಿ, ನಂತರ ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದುಕೊಂಡಿದ್ದರು.

ಎನ್​​​ ಸಿಪಿ ನಾಯಕ ಗುಲಾಬ್ ರಾವ್ ಮೇ 2012ರಲ್ಲಿ ಬಂಧನಕ್ಕೊಳಗಾಗಿ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಿ,ಜಾಮೀನು ಪಡೆದುಕೊಂಡಿದ್ದಾರೆ. 1995 ಮತ್ತು 2000 ನಡುವೆ ಜಲ್ವಾಂಗ್​​​​​ ಪುರಸಭೆಯಲ್ಲಿ ಸದಸ್ಯರಾಗಿದ್ದರು. 29 ಕೋಟಿ ವಸತಿ ಯೋಜನೆ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ.

English summary
Suresh Jain and Gulabrao Deokar along with 46 others to varying jail terms between seven and three years after convicting them in the multi-crore ''Gharkul'' housing scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X