ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್ ಮಾನನಷ್ಟ ಮೊಕದ್ದಮೆ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್

|
Google Oneindia Kannada News

ಮುಂಬೈ, ಜುಲೈ 04: ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೆಸ್ಸೆಸ್ ಕೈವಾಡವಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಈ ಪ್ರಕರಣ ವಿಚಾರಣೆ ಇಂದು ನಡೆದಿದ್ದು ರಾಹುಲ್ ಗಾಂಧಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ.

ಬಿಜೆಪಿ-ಆರೆಸ್ಸೆಸ್ ಸಿದ್ಧಾಂತಕ್ಕೂ ಗೌರಿ ಲಂಕೇಶ್ ಅವರ ಹತ್ಯೆಗೂ ನಂಟು ಬೆಸೆದಿದ್ದ ಕಾರಣಕ್ಕೆ ಆರೆಸ್ಸೆಸ್ ಕಾರ್ಯಕರ್ತ ಧ್ರುತಿಮಾನ್ ಜೋಶಿ ಎಂಬುವವರು 2017ರಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಸೀತಾರಾಮ್ ಯಚೂರಿ ಅವರ ವಿರುದ್ಧ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದರು.

ಗೌರಿ ಹತ್ಯೆ ಆರೋಪಿಗಳು ಯಾರ್ಯಾರು? ಕೊಲೆಯಲ್ಲಿ ಅವರ ಪಾತ್ರ ಏನು?ಗೌರಿ ಹತ್ಯೆ ಆರೋಪಿಗಳು ಯಾರ್ಯಾರು? ಕೊಲೆಯಲ್ಲಿ ಅವರ ಪಾತ್ರ ಏನು?

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ರಾಹುಲ್ ತಪ್ಪಿತಸ್ಥರಲ್ಲ ಎಂದು ಆದೇಶಿಸಿ, ಶ್ಯೂರಿಟಿ ಪಡೆದು ರಾಹುಲ್ ಅವರನ್ನು ಬಿಡುಗಡೆ ಮಾಡಿದೆ. ಮಾಜಿ ಸಂಸದ ಏಕನಾಥ್ ಗಾಯಕ್ವಾಡ್ ಅವರು 15000 ರು ಶ್ಯೂರಿಟಿ ಮೊತ್ತ ಕಟ್ಟಿದ್ದಾರೆ.

ಗೌರಿ ಹತ್ಯೆಯ ಸಂಚು ನಡೆದಿದ್ದು ಹೇಗೆ? 'ಈವೆಂಟ್'ನ ರೋಚಕ ಸತ್ಯ ಬಯಲುಗೌರಿ ಹತ್ಯೆಯ ಸಂಚು ನಡೆದಿದ್ದು ಹೇಗೆ? 'ಈವೆಂಟ್'ನ ರೋಚಕ ಸತ್ಯ ಬಯಲು

ಫೆ. 18ರಂದು ಮ್ಯಾಜಿಸ್ಟ್ರೇಟ್ ಪಿ.ಕೆ. ದೇಶಪಾಂಡೆ ಅವರು, ರಾಹುಲ್ ಗಾಂಧಿ ಮತ್ತು ಸೀತಾರಾಮ್ ಯೆಚೂರಿ ಅವರ ವಿರುದ್ಧ ಸಮನ್ಸ್ ಜಾರಿಗೆ ಆದೇಶಿಸಿದ್ದರು.

ರಾಹುಲ್ ವಿರುದ್ಧ ಎರಡು ಮಾನನಷ್ಟ ಮೊಕದ್ದಮೆ

ರಾಹುಲ್ ವಿರುದ್ಧ ಎರಡು ಮಾನನಷ್ಟ ಮೊಕದ್ದಮೆ

ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೆಸ್ಸೆಸ್ ಕೈವಾಡವಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಈ ಕೇಸಿನಲ್ಲಿ ಸದ್ಯ ರಿಲೀಫ್ ಪಡೆದುಕೊಂಡಿದ್ದಾರೆ.

ಇನ್ನೊಂದು ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಮಹಾರಾಷ್ಟ್ರದ ಭಿವಾಂಡಿ ನ್ಯಾಯಾಲಯದ ಮುಂದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಜರಾಗಬೇಕಿದೆ. ಆರ್.ಎಸ್.ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ಎಂಬವರು ಅವರ ವಿರುದ್ಧ ದಾಖಲಿಸಿದ ಮಾನನಷ್ಟ ಮೊಕದ್ದಮೆ ಪ್ರಕರಣ ಇದಾಗಿದೆ

ಲೋಕಸಭೆ ಚುನಾವಣೆ ವೇಳೆ ರಾಹುಲ್ ಹೇಳಿಕೆ

ಲೋಕಸಭೆ ಚುನಾವಣೆ ವೇಳೆ ರಾಹುಲ್ ಹೇಳಿಕೆ

ಮಹಾತ್ಮಾ ಗಾಂಧಿ ಹತ್ಯೆ ಹಿಂದೆ ಆರ್.ಎಸ್.ಎಸ್ ಕೈವಾಡವಿದೆ ಎನ್ನುವ ಹೇಳಿಕೆಯನ್ನು ರಾಹುಲ್ ಗಾಂಧಿ ಮಾರ್ಚ್ 6, 2014ರಲ್ಲಿ ನೀಡಿದ್ದರು. ಈ ಹೇಳಿಕೆ ಸಂಬಂಧ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಲಾಗಿದೆ. ಲೋಕಸಭೆ ಚುನಾವಣೆ ವೇಳೆ ನೀಡಿದ ಈ ಹೇಳಿಕೆ ಸಾಕಷ್ಟು ಸದ್ದು ಮಾಡಿತ್ತು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

ರಾಹುಲ್ ಗಾಂಧಿ ವಿರುದ್ಧ ಆರೋಪ ದಾಖಲು

ರಾಹುಲ್ ಗಾಂಧಿ ವಿರುದ್ಧ ಆರೋಪ ದಾಖಲು

ಭಿವಾಂಡಿ ನ್ಯಾಯಾಲಯ ರಾಹುಲ್ ಗಾಂಧಿ ವಿರುದ್ಧ ಆರೋಪಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿದ ದೂರುದಾರ ರಾಜೇಶ್ ಕುಂಟೆ, "ರಾಹುಲ್ ಗಾಂಧಿ ಮತ್ತು ಅವರ ಜನರಿಗೆ ವಿಶೇಷ ಆತಿಥ್ಯ ನೀಡಲಾಗಿದೆ. ಆದರೆ ದೂರುದಾರನಾಗಿದ್ದೂ ನನಗೆ ನ್ಯಾಯಾಲಯದೊಳಗೆ ಪ್ರವೇಶಿಸಲು ಅವಕಾಶ ನೀಡಿಲ್ಲ. ಪೊಲೀಸರು ತಾರತಮ್ಯ ನಡೆಸಿದ್ದಾರೆ," ಎಂದು ದೂರಿದ್ದರು.

ಖುದ್ದು ಹಾಜರಾತಿಗೆ ವಿನಾಯತಿ ಕೋರಿದ್ದ ರಾಹುಲ್

ಖುದ್ದು ಹಾಜರಾತಿಗೆ ವಿನಾಯತಿ ಕೋರಿದ್ದ ರಾಹುಲ್

ಪ್ರಕರಣದ ವಿರುದ್ಧ ತಾವು ಸಲ್ಲಿಸಿದ್ದ ಅರ್ಜಿಯನ್ನು 2016ರ ಸೆಪ್ಟೆಂಬರ್‌ನಲ್ಲಿ ಹಿಂದಕ್ಕೆ ಪಡೆದುಕೊಂಡಿದ್ದ ರಾಹುಲ್ ಗಾಂಧಿ, ತಾವು ವಿಚಾರಣೆ ಎದುರಿಸುವುದಾಗಿ ಹೇಳಿದ್ದರು. ರಾಹುಲ್ ಅವರಿಗೆ ನ್ಯಾಯಾಲಯದಿಂದ ಖುದ್ದು ಹಾಜರಾತಿಗೆ ವಿನಾಯಿತಿ ಕೋರಿ ರಾಹುಲ್ ಗಾಂಧಿ ಅವರ ವಕೀಲರು ಏಪ್ರಿಲ್ 23ರಂದು ಮನವಿ ಮಾಡಿದ್ದರು. ಆದರೆ ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು.

English summary
Defamation case filed against Rahul Gandhi for allegedly linking Gauri Lankesh's murder with "BJP-RSS ideology": Rahul Gandhi pleads not guilty. He has been released on Rs 15000 surety amount. Ex MP Eknath Gaikwad has given surety for Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X