• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಲ್ಡರ್ ಕೊಲೆ: ಅಬು ಸಲೇಂ ದೋಷಿ : ಟಾಡಾ ಕೋರ್ಟ್

By Mahesh
|

ನವದೆಹಲಿ, ಫೆ.16: ಮುಂಬೈ ಮೂಲದ ಬಿಲ್ಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಭೂಗತ ಪಾತಕಿ , ಗ್ಯಾಂಗ್‌ಸ್ಟರ್ ಅಬು ಸಲೇಂ ದೋಷಿ ಎಂದು ಟಾಡಾ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಿದೆ.

1995ರ ಮಾ.7ರಂದು ಮುಂಬೈ ಮೂಲದ ಬಿಲ್ಡರ್ ಪ್ರದೀಪ್ ಜೈನ್ ಎಂಬುವವರನ್ನು ಕೊಲೆ ಮಾಡಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ ಟಾಡಾ ನ್ಯಾಯಾಲಯ ಇಂದು ಅಬು ಸಲೇಂ ಹಂತಕ ಎಂದು ತೀರ್ಮಾನಿಸಿ ಮಹತ್ವದ ತೀರ್ಪು ನೀಡಿದೆ. ವಾದಿ -ಪ್ರತಿವಾದಿ ನ್ಯಾಯವಾದಿಗಳ ವಾದವನ್ನು ಆಲಿಸಿದ ಟಾಡಾ ಕೋರ್ಟ್ ನ್ಯಾಯಾಲಯದ ನ್ಯಾಯಾಧೀಶರು ಅಬು ಸಲೇಂ ಅಪರಾಧಿ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.

1993 ರ ಮುಂಬೈ ಸರಣಿ ಬಾಂಬ್ ಸ್ಫೋಟ ಆರೋಪಿ ಅಬು ಸೇಲಂನನ್ನು ಪೋರ್ಚುಗಲ್ ನಿಂದ 2005ರ ನವೆಂಬರ್ 11ರಂದು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಗಡಿಪಾರಾದ ನಂತರ ತಪ್ಪಿತಸ್ಥ ಎಂದು ಸಾಬೀತಾಗಿರುವ ಮೊದಲ ಪ್ರಕರಣ ಇದಾಗಿದೆ.

ಅಬು ಸಲೇಂ ಜೊತೆಗೆ ವೀರೇಂದ್ರ ಜಂಬ್ ಮತ್ತು ಮೆಹಂದಿ ಹಸ್ಸನ್ ಇನ್ನಿಬ್ಬರು ತಪ್ಪಿತಸ್ಥರು ಎಂದು ಕೋರ್ಟ್ ಹೇಳಿದೆ. ಮೂವರು ದೋಷಿಗಳ ಮೇಲೆ ಐಪಿಸಿ ಸೆಕ್ಷನ್ 302, 102 ಬಿ ಅಡಿ ಪ್ರಕರಣ ದಾಖಲಾಗಿತ್ತು ಎಂದು ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಉಜ್ವಲ್ ನಿಕಂ ತಿಳಿಸಿದ್ದಾರೆ.

ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಸಲೇಂ 2002ರಲ್ಲಿ ಪ್ರೇಯಸಿ ಮೋನಿಕಾ ಬೇಡಿ ಜತೆ ಲಿಸ್ಬನ್‌ನಲ್ಲಿ ಸೆರೆಸಿಕ್ಕಿದ್ದ. ಮೂರು ವರ್ಷಗಳ ನಂತರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಭಾರತಕ್ಕೆ ಪೋರ್ಚುಗಲ್ ದೇಶದಿಂದ ಹಸ್ತಾಂತರಗೊಂಡಿದ್ದ.

ಹಸ್ತಾಂತರದ ವೇಳೆ ಭಾರತ, ಅಬು ಸಲೇಂಗೆ ಮರಣದಂಡನೆ ಅಥವಾ 25 ವರ್ಷಕ್ಕಿಂತ ಹೆಚ್ಚಿನ ಸೆರೆವಾಸ ಶಿಕ್ಷೆ ವಿಧಿಸುವುದಿಲ್ಲ ಎಂದು ಪೋರ್ಚುಗಲ್ ಗೆ ಭರವಸೆ ನೀಡಲಾಗಿತ್ತು. ಭಾರತದಲ್ಲಿ ತನ್ನ ಮೇಲಿನ ಆರೋಪಗಳ ವಿಚಾರಣೆ ರದ್ದುಗೊಳಿಸುವಂತೆ ಅಬು ಸಲೇಂ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.

ನಂತರ, ನಕಲಿ ಪಾಸ್ ಫೋರ್ಟ್ ಬಳಕೆ ಆರೋಪದಡಿಯಲ್ಲಿ ಭೂಗತ ಪಾತಕಿ ಅಬು ಸಲೇಂಗೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ 2013ರಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai: A special TADA court on Monday convicted underworld don Abu Salem in the 1995 murder case of city-based builder Pradeep Jain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more