• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಯಾಣಿಕರಿಗೆ ಶಾಕ್: ಟ್ಯಾಕ್ಸಿ, ಆಟೋ ದರದಲ್ಲಿ ಮತ್ತಷ್ಟು ದುಬಾರಿ!

|
Google Oneindia Kannada News

ಮುಂಬೈ, ಸೆಪ್ಟೆಂಬರ್ 28: ವಾಣಿಜ್ಯ ನಗರಿ ಎನಿಸಿರುವ ಮುಂಬೈನಲ್ಲಿ ಇನ್ಮುಂದೆ ಜನರು ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವುದಕ್ಕೆ ಮೊದಲಿಗಿಂತಲೂ ಹೆಚ್ಚು ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಏಕೆಂದರೆ ಅಕ್ಟೋಬರ್ 1ರಿಂದಲೇ ನಗರದಲ್ಲಿ ಟ್ಯಾಕ್ಸಿ ಮತ್ತು ಆಟೋ ಬಾಡಿಗೆ ದರದಲ್ಲಿ ಕೊಂಚ ಏರಿಕೆ ಮಾಡಲಾಗಿದೆ.

ಮುಂಬೈ ನಗರದ ಕಪ್ಪು ಮತ್ತು ಹಳದಿ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವುದಕ್ಕೆ ಕನಿಷ್ಠ ದರವಾಗಿ 28 ರೂಪಾಯಿ ಬಾಡಿಗೆಯನ್ನು ನೀವು ಪಾವತಿ ಮಾಡಬೇಕಾಗುತ್ತದೆ. ಅದೇ ರೀತಿ ಆಟೋಗಳಲ್ಲಿ ಪ್ರಯಾಣಿಸಲು ಕನಿಷ್ಠ 23 ರೂಪಾಯಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ.

ಕೇರಳದಲ್ಲಿ ಕೈಗೆಟುಕುವ ದರದಲ್ಲಿ ಟ್ಯಾಕ್ಸಿ: ಇ-ಟ್ಯಾಕ್ಸಿ ಸೇವೆಗೆ ಪಿಣರಾಯಿ ವಿಜಯನ್‌ ಚಾಲನೆಕೇರಳದಲ್ಲಿ ಕೈಗೆಟುಕುವ ದರದಲ್ಲಿ ಟ್ಯಾಕ್ಸಿ: ಇ-ಟ್ಯಾಕ್ಸಿ ಸೇವೆಗೆ ಪಿಣರಾಯಿ ವಿಜಯನ್‌ ಚಾಲನೆ

ಈ ಹಿಂದೆ ಆಟೋ ಪ್ರಯಾಣದ ಕನಿಷ್ಠ ದರ 21 ರೂಪಾಯಿ ಆಗಿದ್ದು, ಅಕ್ಟೋಬರ್ 1ರಿಂದ 2 ರೂಪಾಯಿ ಹೆಚ್ಚಳ ಮಾಡಲಾಗುತ್ತಿದೆ. ಇನ್ನು ಕಪ್ಪು ಮತ್ತು ಹಳದಿ ಆಟೋಗಳ ಕನಿಷ್ಠ ದರ ಈ ಮೊದಲು 25 ರೂಪಾಯಿ ಆಗಿದ್ದು, ಇದೀಗ 3 ರೂಪಾಯಿ ಹೆಚ್ಚಿಸಲಾಗಿದೆ. ಹೊಸ ದರಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ ಎಂದು ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಸಾರಿಗೆ ಪ್ರಾಧಿಕಾರ (ಎಂಎಂಆರ್‌ಟಿಎ) ತಿಳಿಸಿದೆ.

 ಟ್ಯಾಕ್ಸಿಯಲ್ಲಿ 1.5 ಕಿ.ಮೀಗೆ ಕನಿಷ್ಠ 28 ರೂಪಾಯಿ

ಟ್ಯಾಕ್ಸಿಯಲ್ಲಿ 1.5 ಕಿ.ಮೀಗೆ ಕನಿಷ್ಠ 28 ರೂಪಾಯಿ

ಮುಂಬೈ ನಗರದ ಆಟೋಗಳಲ್ಲಿ ಕನಿಷ್ಠ 1.5 ಕಿಲೋಮೀಟರ್ ದೂರ ಕ್ರಮಿಸುವುದಕ್ಕೆ ಈ ಮೊದಲು ಪ್ರಯಾಣಿಕರು 21 ರೂಪಾಯಿ ಪಾವತಿ ಮಾಡುತ್ತಿದ್ದರು, ಆದರೆ ಅಕ್ಟೋಬರ್ 1ರಿಂದ 23 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಹಾಗೆ ಕಪ್ಪು ಮತ್ತು ಹಳದಿ ಟ್ಯಾಕ್ಸಿಗಳಲ್ಲಿ ಸಂಚರಿಸುವ ಪ್ರಯಾಣಿಕರು 1.5 ಕಿಲೋ ಮೀಟರ್ ಕ್ರಮಿಸುವುದಕ್ಕೆ ಈ ಹಿಂದೆ ಕನಿಷ್ಠ 25 ರೂಪಾಯಿ ಪಾವತಿಸುತ್ತಿದ್ದರು, ಆದರೆ ಇನ್ಮುಂದೆ 28 ರೂಪಾಯಿ ಪಾವತಿ ಮಾಡಬೇಕಾಗುತ್ತದೆ ಎಂದು ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಸಾರಿಗೆ ಪ್ರಾಧಿಕಾರ (ಎಂಎಂಆರ್‌ಟಿಎ) ತಿಳಿಸಿದೆ.

 ಕನಿಷ್ಠ ದರ ನಂತರದಲ್ಲಿ ಮುಂದಿನ ಪಾವತಿ ಕ್ರಮ?

ಕನಿಷ್ಠ ದರ ನಂತರದಲ್ಲಿ ಮುಂದಿನ ಪಾವತಿ ಕ್ರಮ?

ಕನಿಷ್ಠ ದರವನ್ನು ಪಾವತಿ ಮಾಡಿದ ಪ್ರಯಾಣಿಕರು 1.5 ಕಿಲೋ ಮೀಟರ್ ಪ್ರಯಾಣಿಸಲು ಅವಕಾಶವಿರುತ್ತದೆ. ತದನಂತರದಲ್ಲಿ ಪ್ರತಿ ಕಿಲೋ ಮೀಟರ್ ಮೇಲೆ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವವರು ಈ ಹಿಂದಿ ಪಾವತಿಸುತ್ತಿದ್ದ 16.93 ರೂಪಾಯಿ ಬದಲಿಗೆ 18.66 ರೂಪಾಯಿ ಪಾವತಿಸಬೇಕಾಗುತ್ತದೆ. ಅದೇ ರೀತಿಯಾಗಿ ಆಟೋ-ರಿಕ್ಷಾಗಳಲ್ಲಿ ಪ್ರಯಾಣಿಸುವವರು ಪ್ರತಿ ಕಿಲೋ ಮೀಟರ್ ಗೆ 14.20 ರೂಪಾಯಿ ಬದಲಿಗೆ 15.33 ರೂಪಾಯಿ ಅನ್ನು ಪಾವತಿಸಬೇಕಾಗುತ್ತದೆ ಎಂದು MMRTA ಹೇಳಿದೆ.

ಆಟೋ, ಟ್ಯಾಕ್ಸಿ ದರ ಈ ಹಿಂದೆ ಪರಿಷ್ಕರಣೆಯಾಗಿದ್ದು ಯಾವಾಗ?

ಆಟೋ, ಟ್ಯಾಕ್ಸಿ ದರ ಈ ಹಿಂದೆ ಪರಿಷ್ಕರಣೆಯಾಗಿದ್ದು ಯಾವಾಗ?

ಮುಂಬೈ ಮಹಾನಗರದಲ್ಲಿ ಪ್ರಸ್ತುತ ಜಾರಿಯಲ್ಲಿರುವ ದರವನ್ನು ಕಳೆದ 2021ರ ಮಾರ್ಚ್ 1ರಂದು ಪರಿಷ್ಕರಣೆ ಮಾಡಲಾಗಿತ್ತು. ನಗರದಲ್ಲಿ 60,000 ಟ್ಯಾಕ್ಸಿಗಳು ಮತ್ತು 4.6 ಲಕ್ಷ ಆಟೋರಿಕ್ಷಾಗಳಿರುವುದ್ದು, ಪರಿಷ್ಕೃತ ದರಗಳು ಪೆಟ್ರೋಲ್ ಮತ್ತು CNG-ಚಾಲಿತ ಟ್ಯಾಕ್ಸಿಗಳಿಗೆ ಅನ್ವಯಿಸುತ್ತವೆ ಎಂದು MMRTA ತಿಳಿಸಿದೆ. ಕಳೆದ ಸೋಮವಾರ ಮಹಾರಾಷ್ಟ್ರ ಸಾರಿಗೆ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಎಂಎಂಆರ್‌ಟಿಎ ಸಭೆಯಲ್ಲಿ ಪ್ರಯಾಣ ದರವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ ಸಭೆಯ ನಡಾವಳಿಗೆ ಸಹಿ ಮಾಡಿದ ನಂತರವೇ ಅದನ್ನು ಘೋಷಿಸಲಾಯಿತು.

 ಮುಂಬೈನಲ್ಲಿ ಏಕೆ ಹೆಚ್ಚಾಯ್ತು ಆಟೋ, ಟ್ಯಾಕ್ಸಿ ದರ?

ಮುಂಬೈನಲ್ಲಿ ಏಕೆ ಹೆಚ್ಚಾಯ್ತು ಆಟೋ, ಟ್ಯಾಕ್ಸಿ ದರ?

ಸಾಮಾನ್ಯವಾಗಿ, ಏರುತ್ತಿರುವ ಜೀವನ ವೆಚ್ಚ, ಹಣದುಬ್ಬರ ಮತ್ತು ಇತರ ಅಂಶಗಳ ಹೊರತಾಗಿ, ಮಾರ್ಚ್ 1, 2021 ರಂದು ಸಿಎನ್‌ಜಿ ಬೆಲೆಯನ್ನು ಕೆಜಿಗೆ 49.40 ರಿಂದ 80 ರೂಪಾಯಿಗೆ ಹೆಚ್ಚಿಸಲಾಗಿತ್ತು. ಇದರಿಂದ ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳ ದರಗಳನ್ನು ಪರಿಷ್ಕರಿಸಲಾಗುತ್ತಿದೆ. ನೀಲಿ-ಬೆಳ್ಳಿಯ 'ಕೂಲ್' ಕ್ಯಾಬ್ ಟ್ಯಾಕ್ಸಿಗಳ ಕನಿಷ್ಠ ದೂರದ ದರವನ್ನು ಪ್ರತಿ ಕಿ.ಮೀಗೆ 33 ರೂಪಾಯಿಯಿಂದ 40 ರೂಪಾಯಿಗೆ ಹೆಚ್ಚಿಸಲಾಗಿದೆ. ಈ ಕ್ಯಾಬ್‌ಗಳ ಪ್ರತಿ ಕಿ.ಮೀ ದರವು 26.71 ರೂಪಾಯಿ ಆಗಿರುತ್ತದೆ. ಟ್ಯಾಕ್ಸಿಗಳು ಮತ್ತು ಆಟೋ ರಿಕ್ಷಾಗಳಲ್ಲಿ ಅಳವಡಿಸಲಾದ ಶುಲ್ಕ ಮೀಟರ್‌ಗಳನ್ನು ಮರುಮಾಪನ ಮಾಡಲು ಅಕ್ಟೋಬರ್ 1 ರಿಂದ ನವೆಂಬರ್ 30ರ ನಡುವೆ ಎರಡು ತಿಂಗಳ ಕಾಲಾವಕಾಶ ಇರುವುದಾಗಿ ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಸಾರಿಗೆ ಪ್ರಾಧಿಕಾರ ತಿಳಿಸಿದೆ.

English summary
From Oct 1 Taxi And Auto Fares To Be Hiked in Mumbai : Know How Much You Will Pay Extra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X