• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರವಾದಿ ಕುರಿತ ಹೇಳಿಕೆ: ಮುಂಬೈ ರಸ್ತೆಗಳ ಮೇಲೆ ಫ್ರಾನ್ಸ್ ಅಧ್ಯಕ್ಷರ ಫೋಟೊ

|

ಮುಂಬೈ, ಅಕ್ಟೋಬರ್ 30: ಪ್ರವಾದಿ ಮಹಮ್ಮದ್ ಅವರ ಕಾರ್ಟೂನ್‌ಗಳನ್ನು ಪ್ರಕಟಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಇದೆ ಎಂಬ ಹೇಳಿಕೆ ನೀಡಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮಕ್ರಾನ್ ವಿರುದ್ಧ ಭಾರತದ ಅನೇಕ ಕಡೆ ಪ್ರತಿಭಟನೆಗಳು ನಡೆದಿವೆ. ಮುಂಬೈನಲ್ಲಿ ಮಕ್ರಾನ್ ಅವರ ಫೋಟೊಗಳನ್ನು ರಸ್ತೆಗಳ ಮೇಲೆ ಅಂಟಿಸಿ ಪ್ರತಿಭಟಿಸಲಾಗಿದೆ.

ಮುಂಬೈನ ನಾಗ್ಪಡಾ ಮತ್ತು ಭೆಂಡಿ ಬಜಾರ್ ಪ್ರದೇಶ ಸೇರಿದಂತೆ ಅನೇಕ ರಸ್ತೆಗಳಲ್ಲಿ ಫೋಟೊಗಳನ್ನು ಅಂಟಿಸಲಾಗಿದೆ. ರಸ್ತೆಗಳೆಲ್ಲೆಡೆ ಫೋಟೊಗಳು ಕಾಣಿಸುತ್ತಿದ್ದಂತೆಯೇ ಅವುಗಳನ್ನು ತೆರವುಗೊಳಿಸಲು ಮುಂಬೈ ಪೊಲೀಸರು ಹಲವು ತಂಡಗಳನ್ನು ನಿಯೋಜಿಸಿದರು. ರಸ್ತೆಗಳಲ್ಲಿನ ಫೋಟೊಗಳನ್ನು ಪೊಲೀಸರು ತೆಗೆದುಹಾಕಿದರು. ಮುಸ್ಲಿಂ ಸಂಘಟನೆ ರಾಜಾ ಅಕಾಡೆಮಿ ಈ ಪ್ರತಿಭಟನೆ ನಡೆಸಿದೆ ಎನ್ನಲಾಗಿದೆ.

ಫ್ರಾನ್ಸ್ ಚರ್ಚ್ ಬಳಿ ದಾಳಿಕೋರನಿಂದ ಮಹಿಳೆಯ ಶಿರಶ್ಛೇದ

'ಮಹಾರಾಷ್ಟ್ರ ಸರ್ಕಾರವೇ, ನಿಮ್ಮ ಸರ್ಕಾರದಲ್ಲಿ ಏನಾಗುತ್ತಿದೆ? ಇಂದು ಫ್ರಾನ್ಸ್ ಬೆಂಬಲಕ್ಕೆ ಭಾರತ ನಿಂತಿದೆ. ಜಿಹಾದ್ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಭಯೋತ್ಪಾದನೆ ವಿರುದ್ಧದ ಫ್ರಾನ್ಸ್ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಪ್ರಧಾನಿ ಪ್ರತಿಜ್ಞೆ ಮಾಡಿದ್ದಾರೆ. ಹೀಗಿರುವಾಗ ಮುಂಬೈನ ಬೀದಿಗಳಲ್ಲಿ ಫ್ರೆಂಚ್ ಅಧ್ಯಕ್ಷರನ್ನು ಏಕೆ ಅವಮಾನಿಸುತ್ತೀರಿ?' ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಪ್ರಶ್ನಿಸಿದ್ದಾರೆ.

ಈ ನಡುವೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮಕ್ರಾನ್ ವಿರುದ್ಧ ಭಾರಿ ಪ್ರತಿಭಟನೆ ನಡೆದಿದೆ. ಭೋಪಾಲ್ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ನೇತೃತ್ವದಲ್ಲಿ ಐತಿಹಾಸಿಕ ಇಕ್ಬಾಲ್ ಮೈದಾನದಲ್ಲಿ ನೆರೆದ ಸಾವಿರಾರು ಮಂದಿ, ಎಮ್ಯಾನುಯೆಲ್ ಮಕ್ರಾನ್ ವಿರುದ್ಧ ಘೋಷಣೆಗಳನ್ನು ಕೂಗಿದರು. 'ಪ್ರವಾದಿ ಮಹಮ್ಮದ್ ನಮ್ಮ ಹೆಮ್ಮೆ', 'ಫ್ರಾನ್ಸ್ ಸ್ವಯಂ ನಾಶದತ್ತ ಸಾಗುತ್ತಿದೆ' ಎಂದು ಬರೆದ ಫಲಕಗಳನ್ನು ಪ್ರದರ್ಶಿಸಿದರು.

ಫ್ರಾನ್ಸ್ ಅಧ್ಯಕ್ಷರ ಮೇಲೆ ವಾಗ್ದಾಳಿ: ಪಾಕ್, ಟರ್ಕಿ ವಿರುದ್ಧ ಭಾರತ ಕಿಡಿ

ಮಸೂದ್ ಮತ್ತು 200ಕ್ಕೂ ಹೆಚ್ಚು ಮಂದಿ ವಿರುದ್ಧ ಪೊಲೀಸರು, ಮಾಸ್ಕ್ ಧರಿಸದ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಕಾರಣಕ್ಕಾಗಿ ಐಪಿಸಿ ಸೆಕ್ಷನ್ 188ರ ಅಡಿ ಪ್ರಕರಣ ದಾಖಲಿಸಿದ್ದಾರೆ.

English summary
France President Emmanuel Macrons pictures were pasted on many roads in Mumbai by Muslim protesters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X