ಮಹಾರಾಷ್ಟ್ರದ ಮಾಜಿ ಸಚಿವ ವಿಲಾಸ್ ಪಾಟೀಲ್ ನಿಧನ
ಸತಾರಾ, ಜನವರಿ 08: ಮಹಾರಾಷ್ಟ್ರದ ಮಾಜಿ ಸಚಿವ ವಿಲಾಸ್ ಪಾಟೀಲ್ ಉಂಡಾಲ್ಕರ್ ನಿಧನರಾಗಿದ್ದಾರೆ.
82 ವರ್ಷದ ಉಂಡಾಲ್ಕರ್ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಕಾಕಾ ಎಂದೇ ಪ್ರಸಿದ್ದರಾಗಿದ್ದ ಉಂಡಾಲ್ಕರ್ 2014ರ ವರೆಗೆ ಖಾರದ್ ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ 7 ಬಾರಿ ಆಯ್ಕೆಯಾಗಿದ್ದರು. ಈ ಕ್ಷೇತ್ರವನ್ನು ಸದ್ಯ ಪೃಥ್ವಿ ರಾಜ್ ಚೌಹಣ್ ಪ್ರತಿನಿಧಿಸುತ್ತಿದ್ದಾರೆ.
2014 ರಲ್ಲಿ ಉಂಡಾಲ್ಕರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿ ಪೃಥ್ವಿರಾಜ್ ಚವಾಣ್ ಗೆ ನೀಡಿತು. ಉಂಡಾಲ್ಕರ್ ಚವಾಣ್ ವಿರುದ್ಧ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಉಂಡಾಲ್ಕರ್ ಅವರು ಏಳು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ವಿಲಾಸ್ ಪಾಟೀಲ್ ಉಂಡಾಲ್ಕರ್ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.