ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಟಿಆರ್‌ಪಿ ಹಗರಣ: 12,000 ಡಾಲರ್ ಮತ್ತು 40 ಲಕ್ಷ ರೂ ಪಾವತಿಸಿದ್ದ ಅರ್ನಬ್ ಗೋಸ್ವಾಮಿ

|
Google Oneindia Kannada News

ಮುಂಬೈ, ಜನವರಿ 25: ಟಿಆರ್‌ಪಿ ತಿದ್ದುವ ಮೂಲಕ ತಮಗೆ ಸಹಾಯ ಮಾಡಿದ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಂದ ಮೂರು ವರ್ಷಗಳಲ್ಲಿ 40 ಲಕ್ಷ ರೂಪಾಯಿಗೂ ಅಧಿಕ ಹಣ ಹಾಗೂ ಎರಡು ಪ್ರತ್ಯೇಕ ರಜಾದಿನಗಳ ವೆಚ್ಚವಾಗಿ 12,000 ಅಮೆರಿಕನ್ ಡಾಲರ್ ಹಣ ಪಡೆದಿದ್ದದ್ದಾಗಿ ಬಾರ್ಕ್ ಇಂಡಿಯಾದ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಮುಂಬೈ ಪೊಲೀಸರಿಗೆ ಲಿಖಿತ ಹೇಳಿಕೆ ನೀಡಿದ್ದಾರೆ.

ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಜನವರಿ 11ರಂದು ಮುಂಬೈ ಪೊಲೀಸರು ಸಲ್ಲಿಸಿರುವ 3,600 ಪುಟಗಳ ದೋಷಾರೋಪಪಟ್ಟಿಯು ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್‌ನ (ಬಾರ್ಕ್) ವಿಧಿವಿಜ್ಞಾನ ಲೆಕ್ಕಪರಿಶೋಧನಾ ವರದಿ, ಪಾರ್ಥೋ ದಾಸ್‌ಗುಪ್ತಾ ಮತ್ತು ಅರ್ನಬ್ ಗೋಸ್ವಾಮಿ ನಡುವೆ ನಡೆದ ವಾಟ್ಸಾಪ್ ಚಾಟ್, ಬಾರ್ಕ್‌ನ ಮಾಜಿ ಉದ್ಯೋಗಿಗಳು ಹಾಗೂ ಕೇಬಲ್ ಆಪರೇಟರ್‌ಗಳು ಒಳಗೊಂಡಂತೆ 59 ಮಂದಿಯ ಹೇಳಿಕೆಗಳನ್ನು ಒಳಗೊಂಡಿದೆ.

ಅರ್ನಬ್ ವಾಟ್ಸಾಪ್ ಚಾಟ್ ಸೋರಿಕೆ: ಸರ್ಕಾರದ ಮೌನದ ಕುರಿತು ಸೋನಿಯಾ ಗಾಂಧಿ ತರಾಟೆಅರ್ನಬ್ ವಾಟ್ಸಾಪ್ ಚಾಟ್ ಸೋರಿಕೆ: ಸರ್ಕಾರದ ಮೌನದ ಕುರಿತು ಸೋನಿಯಾ ಗಾಂಧಿ ತರಾಟೆ

ರಿಪಬ್ಲಿಕ್ ಟಿವಿ, ಟೈಮ್ಸ್ ನೌ ಮತ್ತು ಆಜ್‌ತಕ್ ಸೇರಿದಂತೆ ವಿವಿಧ ಸುದ್ದಿ ವಾಹಿನಿಗಳನ್ನು ಆಡಿಟ್ ವರದಿಯಲ್ಲಿ ಹೆಸರಿಸಲಾಗಿದ್ದು, ಬಾರ್ಕ್‌ನ ಉನ್ನತ ಹುದ್ದೆಯ ಉದ್ಯೋಗಿಗಳಿಂದ ಚಾನೆಲ್‌ಗಳಿಗೆ ಮೊದಲೇ ನಿಗದಿ ಮಾಡಿದ ರೇಟಿಂಗ್ ನೀಡಲಾಗಿತ್ತು ಎಂಬುದಕ್ಕೆ ವಿವರಗಳನ್ನು ನೀಡಿದೆ. ಮುಂದೆ ಓದಿ.

ಹೆಚ್ಚುವರಿ ಆರೋಪಪಟ್ಟಿ ದಾಖಲು

ಹೆಚ್ಚುವರಿ ಆರೋಪಪಟ್ಟಿ ದಾಖಲು

ಪಾರ್ಥೋ ದಾಸ್‌ಗುಪ್ತಾ, ಬಾರ್ಕ್‌ನ ಮಾಜಿ ಸಿಒಒ ರೋಮಿಲ್ ರಾಮಗರ್ಹಿಯಾ ಮತ್ತು ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ ಸಿಇಒ ವಿಕಾಸ್ ಖಾನ್‌ಚಂದಾನಿ ವಿರುದ್ಧ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲಾಗಿದೆ. 2020ರ ನವೆಂಬರ್‌ನಲ್ಲಿ 12 ವ್ಯಕ್ತಿಗಳ ವಿರುದ್ಧ ಮೊದಲ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಎರಡನೆಯ ಆರೋಪಪಟ್ಟಿ ಪ್ರಕಾರ 2020ರ ಡಿಸೆಂಬರ್ 27ರಂದು ಕ್ರೈಂ ಇಂಟೆಲಿಜೆನ್ಸ್ ಘಟಕವು ಇಬ್ಬರು ಸಾಕ್ಷಿದಾರರ ಸಮ್ಮುಖದಲ್ಲಿ ದಾಸ್‌ಗುಪ್ತಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

16 ವರ್ಷಗಳ ಪರಿಚಯ

16 ವರ್ಷಗಳ ಪರಿಚಯ

'ನನಗೆ 2004ರಿಂದ ಅರ್ನಬ್ ಗೋಸ್ವಾಮಿ ಪರಿಚಯವಿದೆ. ನಾವು ಟೈಮ್ಸ್‌ ನೌನಲ್ಲಿ ಜತೆಗೆ ಕೆಲಸ ಮಾಡುತ್ತಿದ್ದೆವು. 2013ರಲ್ಲಿ ನಾನು ಬಾರ್ಕ್ ಸಿಇಒ ಆಗಿ ಸೇರಿಕೊಂಡಿದ್ದೆ. 2017ರಲ್ಲಿ ಅರ್ನಬ್ ರಿಪಬ್ಲಿಕ್ ಆರಂಭಿಸಿದರು. ರಿಪಬ್ಲಿಕ್ ಟಿವಿ ಆರಂಭಿಸುವುದಕ್ಕೂ ಮುನ್ನ ಅವರು ಅದರ ಯೋಜನೆಗಳ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದರು. ತಮ್ಮ ವಾಹಿನಿಗೆ ಉತ್ತಮ ರೇಟಿಂಗ್ ನೀಡುವ ಮೂಲಕ ಸಹಾಯ ಮಾಡುವಂತೆ ಪರೋಕ್ಷವಾಗಿ ಹೇಳುತ್ತಿದ್ದರು. ಟಿಆರ್‌ಪಿ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದು ನನಗೆ ಗೊತ್ತಿಗೆ ಎನ್ನುವುದು ಅರ್ನಬ್‌ಗೆ ಚೆನ್ನಾಗಿ ತಿಳಿದಿತ್ತು. ನನಗೆ ಭವಿಷ್ಯದಲ್ಲಿ ಸಹಾಯ ಮಾಡುವುದಾಗಿಯೂ ಅವರು ಆಮಿಷವೊಡ್ಡಿದ್ದರು' ಎಂದು ಪಾರ್ಥೋ ದಾಸ್‌ಗುಪ್ತಾ ಹೇಳಿಕೆ ನೀಡಿದ್ದಾರೆ.

ಅರ್ನಬ್ ಗೋಸ್ವಾಮಿ ಚಾಟ್ ಲೀಕ್; ರಾಷ್ಟ್ರೀಯ ಭದ್ರತೆ ಪ್ರಶ್ನೆ ಎತ್ತಿದ ಕಾಂಗ್ರೆಸ್ಅರ್ನಬ್ ಗೋಸ್ವಾಮಿ ಚಾಟ್ ಲೀಕ್; ರಾಷ್ಟ್ರೀಯ ಭದ್ರತೆ ಪ್ರಶ್ನೆ ಎತ್ತಿದ ಕಾಂಗ್ರೆಸ್

ನಾಲ್ಕು ದೇಶಗಳ ಪ್ರವಾಸಕ್ಕೆ ಹಣ

ನಾಲ್ಕು ದೇಶಗಳ ಪ್ರವಾಸಕ್ಕೆ ಹಣ

'ರಿಪಬ್ಲಿಕ್ ಟಿವಿ ನಂಬರ್ 1 ರೇಟಿಂಗ್ ಪಡೆದುಕೊಳ್ಳುವಂತೆ ಟಿಆರ್‌ಪಿ ರೇಟಿಂಗ್ಸ್ ತಿದ್ದಲು ನನ್ನ ತಂಡದೊಂದಿಗೆ ಕೆಲಸ ಮಾಡಿದ್ದೆ. ಇದು 2017 ರಿಂದ 2019ರವರೆಗೂ ಮುಂದುವರಿದಿತ್ತು. ಇದಕ್ಕಾಗಿ 2017ರಲ್ಲಿ ಅರ್ಬನ್ ಗೋಸ್ವಾಮಿ ಸೇಂಟ್ ರೆಗಿಸ್ ಹೋಟೆಲ್‌ನಲ್ಲಿ ಖುದ್ದು ಭೇಟಿಯಾಗಿದ್ದರು. ಫ್ರಾನ್ಸ್ ಮತ್ತು ಸ್ವಿಟ್ಜರ್ಲೆಂಡ್‌ನ ಕುಟುಂಬ ಪ್ರವಾಸಕ್ಕಾಗಿ ನನಗೆ 6000 ಡಾಲರ್ ನಗದು ನೀಡಿದ್ದರು. 2019ರಲ್ಲಿ ಅದೇ ಹೋಟೆಲ್‌ನಲ್ಲಿ ಭೇಟಿಯಾಗಿದ್ದರು. ಆಗ ಸ್ವೀಡನ್ ಮತ್ತು ಡೆನ್ಮಾರ್ಕ್ ಪ್ರವಾಸಕ್ಕಾಗಿ ಮತ್ತೆ 6,000 ಡಾಲರ್ ನೀಡಿದ್ದರು ' ಎಂದು ತಿಳಿಸಿದ್ದಾರೆ.

40 ಲಕ್ಷ ರೂ ನಗದು

40 ಲಕ್ಷ ರೂ ನಗದು

'2017ರಲ್ಲಿ ಐಟಿಸಿ ಪ್ಯಾರೆಲ್ ಹೋಟೆಲ್‌ನಲ್ಲಿ ವೈಯಕ್ತಿಕವಾಗಿ ಭೇಟಿಯಾಗಿದ್ದ ಅರ್ನಬ್, 20 ಲಕ್ಷ ರೂ ನಗದು ನೀಡಿದ್ದರು. ಹಾಗೆಯೇ 2018 ಮತ್ತು 2019ರಲ್ಲಿ ಕೂಡ ಐಟಿಸಿ ಪ್ಯಾರೆಲ್‌ನಲ್ಲಿ ಭೇಟಿಯಾಗಿ, ಎರಡು ಸಲವೂ ತಲಾ 10 ಲಕ್ಷ ರೂ ಹಣ ಕೊಟ್ಟಿದ್ದರು' ಎಂದು ಹೇಳಿದ್ದಾರೆ.

ಟಿಆರ್‌ಪಿ ಹಗರಣ : ಅರ್ನಬ್ ಗೋಸ್ವಾಮಿ ಹಾಗೂ ಬಾರ್ಕ್ ಮಾಜಿ ಸಿಇಒ ನಡುವಿನ ವಾಟ್ಸಾಪ್ ಚಾಟ್ ಸೋರಿಕೆಟಿಆರ್‌ಪಿ ಹಗರಣ : ಅರ್ನಬ್ ಗೋಸ್ವಾಮಿ ಹಾಗೂ ಬಾರ್ಕ್ ಮಾಜಿ ಸಿಇಒ ನಡುವಿನ ವಾಟ್ಸಾಪ್ ಚಾಟ್ ಸೋರಿಕೆ

English summary
Former CEO of BARC Partho Dasgupta in a statement to Mumbai police that Arnab Goswami paid him $12,000 and Rs 40 lakh to fix TRP for Republic TV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X