ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒತ್ತಾಯದ ಕನ್ಯತ್ವ ಪರೀಕ್ಷೆ ಲೈಂಗಿಕ ಹಲ್ಲೆ ನಡೆಸಿದಂತೆ: ಮಹಾರಾಷ್ಟ್ರ ಸರಕಾರ

|
Google Oneindia Kannada News

ಮುಂಬೈ, ಫೆಬ್ರವರಿ 7: ಕನ್ಯತ್ವ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮಹಿಳೆಯನ್ನು ಒತ್ತಾಯ ಮಾಡುವುದನ್ನು ಶೀಘ್ರದಲ್ಲೇ ಕಾನೂನು ಬಾಹಿರ ಎಂದು ಮಾಡಲಾಗುವುದು ಹಾಗೂ ಹೀಗೆ ಮಾಡಿದರೆ ಲೈಂಗಿಕ ಹಲ್ಲೆ ಎಂದು ಪರಿಗಣಿಸಲಾಗುವುದು ಎಂದು ಮಹಾರಾಷ್ಟ್ರ ರಾಜ್ಯ ಸರಕಾರವು ಹೇಳಿದೆ.

ರಾಜ್ಯದಲ್ಲಿ ಕೆಲ ಸಮುದಾಯದಲ್ಲಿ ಪದ್ಧತಿ ರೂಢಿಯಲ್ಲಿದೆ. ಹೊಸದಾಗಿ ಮದುವೆಯಾಗುವ ಮಹಿಳೆ ಮೊದಲಿಗೆ ತಾನು ಕನ್ಯೆ ಎಂದು ಸಾಬೀತು ಮಾಡಬೇಕಾಗುತ್ತದೆ. ಗೃಹ ಖಾತೆ ರಾಜ್ಯ ಸಚಿವರಾದ ರಣಜಿತ್ ಪಾಟೀಲ್ ಮಾತನಾಡಿ, ಕನ್ಯತ್ವ ಪರೀಕ್ಷೆಯನ್ನು ಇನ್ನು ಮುಂದೆ ಲೈಂಗಿಕ ಹಲ್ಲೆ ಎಂದು ಪರಿಗಣಿಸಲಾಗುವುದು. ಕಾನೂನು ಹಾಗೂ ನ್ಯಾಯಾಂಗಕ್ಕೆ ಸಂಬಂಧಿಸಿದವರ ಜತೆ ಚರ್ಚೆ ನಡೆಸಿ, ಆ ನಂತರ ಇದು ಶಿಕ್ಷಾರ್ಹ ಅಪರಾಧ ಎಂದು ಸುತ್ತೋಲೆ ಹೊರಡಿಸಲಾಗುವುದು ಎಂದಿದ್ದಾರೆ.

ಕನ್ಯತ್ವ ಕಳೆದುಕೊಂಡವಳನ್ನು ಮದುವೆಯಾಗಲು ರೆಡಿನಾ? ಕನ್ಯತ್ವ ಕಳೆದುಕೊಂಡವಳನ್ನು ಮದುವೆಯಾಗಲು ರೆಡಿನಾ?

ಮಹಾರಾಷ್ಟೃದ ಕಂಜರ್ ಭಟ್ ಸಮುದಾಯ ಸೇರಿದಂತೆ ಇತರೆ ಸಮುದಾಯಗಳಲ್ಲಿ ಕನ್ಯತ್ವ ಪರೀಕ್ಷೆ ಮಾಡುವ ಪದ್ಧತಿ ಇದೆ. ಇದಕ್ಕೆ ಆಯಾ ಸಮುದಾಯದೊಳಗೆ ದಿನದಿನಕ್ಕೂ ಆಕ್ರೋಶ ಹೆಚ್ಚಾಗುತ್ತಿದೆ. ಆ ಸಮುದಾಯದ ಯುವಕ-ಯುವತಿಯರು ಕನ್ಯತ್ವ ಪರೀಕ್ಷೆ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಅಭಿಯಾನ ಆರಂಭಿಸಿದ್ದಾರೆ.

Forcing virginity test for women treated as sexual assault: Maharashtra government

ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಟ್ವೀಟ್ ಮಾಡಿ, ಇದು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಇಡೀ ಸಮಾಜಕ್ಕೆ ಸಂಬಂಧಿಸಿದ ಸಂಗತಿ ಎಂದು ಸರಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗವು ಕಳೆದ ವಾರವಷ್ಟೇ ಮಾಧ್ಯಮಗಳ ವರದಿ ಆಧರಿಸಿ, ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಗೆ ಪತ್ರ ಬರೆದು, ಈ ವಿಚಾರದ ಬಗ್ಗೆ ಗಮನ ಹರಿಸಲು ಕೇಳಿದ್ದರು.

ಪತ್ನಿ ಕನ್ಯತ್ವ ಪರೀಕ್ಷೆ ಮಾಡಿಸಿದ ಬೆಂಗಳೂರಿನ 'ಅಜ್ಞಾನಿ'ಪತ್ನಿ ಕನ್ಯತ್ವ ಪರೀಕ್ಷೆ ಮಾಡಿಸಿದ ಬೆಂಗಳೂರಿನ 'ಅಜ್ಞಾನಿ'

ಕಂಜರ್ ಭಟ್ ಸಮುದಾಯದಲ್ಲಿ ಕನ್ಯತ್ವ ಪರೀಕ್ಷೆ ನಡೆಯುವ ಸಂಗತಿ ಪುಣೆಯಲ್ಲಿ ಬೆಳಕಿಗೆ ಬಂದಿತ್ತು.

English summary
Forcing women to take virginity tests will soon be made illegal and considered a form of sexual assault, the Maharashtra government said Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X