ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ನ್ಯಾಕ್ಸ್ ತಿನ್ನಲು ಆಸ್ಪತ್ರೆಯಿಂದ ಓಡಿದ ಶಂಕಿತ ಕೊರೊನಾ ಸೋಂಕಿತರು!

|
Google Oneindia Kannada News

ಮುಂಬೈ, ಮಾರ್ಚ್.14: ಕೊರೊನಾ ವೈರಸ್ ಎಂದರೆ ಜನರು ಬೆಚ್ಚಿ ಬೀಳುವಂತಾ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿ ಬಿಟ್ಟಿದೆ. ಇದರ ಮಧ್ಯೆ ಮಹಾರಾಷ್ಟ್ರದಲ್ಲಿ ಐವರು ಶಂಕಿತ ಕೊರೊನಾ ವೈರಸ್ ಪೀಡಿತರು ಆಸ್ಪತ್ರೆಯಿಂದಲೇ ಓಡಿ ಹೋಗಿರುವುದು ಸಾಕಷ್ಟು ಸುದ್ದಿಯಾಗಿದೆ.
ನಾಗ್ಪುರ್ ದಲ್ಲಿರುವ ಮಾಯೋ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಿದ್ದ ಐವರು ಕೊರೊನಾ ವೈರಸ್ ಶಂಕಿತರು ಆಸ್ಪತ್ರೆಯಿಂದಲೇ ಓಡಿಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಐವರ ಪೈಕಿ ಒಬ್ಬನ ರಕ್ತದ ಮಾದರ ಮತ್ತು ಗಂಟಲು ದ್ರವ್ಯದ ಪರೀಕ್ಷೆ ನಡೆಸಲಾಗಿ ಫಲಿತಾಂಶವು ನೆಗೆಟಿವ್ ಎಂದು ಬಂದಿತ್ತು ಎನ್ನಲಾಗಿದೆ.

ಕೊರೊನಾ ಕೀಚಕ: ಸಾವಿನ ಸುರುಳಿ ಸುತ್ತಿಕೊಂಡ ಟಾಪ್-10 ರಾಷ್ಟ್ರಗಳು
ಐವರು ಶಂಕಿತ ಸೋಂಕಿತರನ್ನು ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ಗಳಲ್ಲಿ ಇರಿಸಲಾಗಿತ್ತು. ನಾಲ್ವರಿಗೆ ಸೋಂಕು ತಗಲಿದೆಯೇ ಇಲ್ಲವೇ ಎಂಬುದರ ಬಗ್ಗೆ ವರದಿ ಇನ್ನಷ್ಚೇ ಬರಬೇಕಿತ್ತು. ಅಷ್ಟರಲ್ಲಿಯೇ ವಾರ್ಡ್ ನಿಂದ ಐವರು ಓಡಿಹೋಗಿದ್ದಾರೆ ಎಂದು ತೆಹ್ಸಿಲ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಎಸ್.ಸೂರ್ಯವಂಶಿ ತಿಳಿಸಿದ್ದಾರೆ.

Five CoronaVirus Supspecteds Escaped From Hospital For Snacks

ಸ್ನ್ಯಾಕ್ಸ್ ತಿನ್ನುವುದಕ್ಕಾಗಿ ಓಡಿ ಹೋದರಾ ಶಂಕಿತರು?
ಮಾಯೋ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದ ಕೊರೊನಾ ವೈರಸ್ ಸೋಂಕು ಶಂಕಿತರು ಓಡಿ ಹೋಗಿರುವ ಬಗ್ಗೆ ತನಿಖೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದೇನು. ಈ ವೇಳೆ ಐವರು ಶಂಕಿತರು ಸ್ನ್ಯಾಕ್ಸ್ ತಿನ್ನುವುದಕ್ಕಾಗಿ ಓಡಿ ಹೋಗಿದ್ದು, ಮರಳಿ ಆಸ್ಪತ್ರೆಗೆ ವಾಪಸ್ ಬಂದಿಲ್ಲ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಆಸ್ಪತ್ರೆ ಸಿಬ್ಬಂದಿಗೆ ಸಹಕಾರ ನೀಡುವುದಾಗಿ ಸಬ್ ಇನ್ಸ್ ಪೆಕ್ಟರ್ ಸೂರ್ಯವಂಶಿ ತಿಳಿಸಿದ್ದಾರೆ.
ಶುಕ್ರವಾರವಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಮುಂಬೈ, ನವ-ಮುಂಬೈ, ಥಾಣೆ, ನಾಗ್ಪುರ್, ಪಿಂಪ್ರಿ ಚಿಂಚ್ ವಾಡ್ ಗಳಲ್ಲಿ ಸಿನಿಮಾ ಥಿಯೇಟರ್, ಜಿಮ್, ಸ್ವಿಮ್ಮಿಂಗ್ ಪೂಲ್ ಗಳು ಮುಂದಿನ ಮಾರ್ಚ್.30ವರೆಗೂ ಬಂದ್ ಮಾಡುವಂತೆ ಘೋಷಿಸಿದ್ದರು.

English summary
Five CoronaVirus Supspecteds Escaped From Nagpur Hospital For Snacks. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X