ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ದಿನದಂದು ದೇಶದಲ್ಲೇ ಮೊದಲ ಪೆಂಗ್ವಿನ್ ಜನನದ ಸಂಭ್ರಮ

|
Google Oneindia Kannada News

ಮುಂಬೈ, ಆಗಸ್ಟ್ 16: ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಬುಧವಾರ ಮತ್ತೊಂದು ಸಂತಸ ಸೇರ್ಪಡೆಯಾಗಿದೆ. ಮುಂಬೈನ ವೀರಮಾತಾ ಜೀಜಾಬಾಯಿ ಭೋಂಸ್ಲೆ ಉದ್ಯಾನ್ ಪ್ರಾಣಿ ಸಂಗ್ರಹಾಲಯದಲ್ಲಿ ಹಂಬೋಲ್ಟ್ ಪೆಂಗ್ವಿನ್ ಜನಿಸಿದೆ. ದೇಶದಲ್ಲೇ ಇದು ಮೊದಲ ಪೆಂಗ್ವಿನ್ ಜನನದ ಸಂಭ್ರಮ.

ಆಗಸ್ಟ್ 15ರಂದು ರಾತ್ರಿ 8 ಗಂಟೆ 02 ನಿಮಿಷಕ್ಕೆ ಮೊಟ್ಟೆಯೊಡೆದು ಪೆಂಗ್ವಿನ್ ಮರಿ ಆಚೆ ಬಂದಿತು. ಮರಿ ಚಟುವಟಿಕೆಯಿಂದ ಇದ್ದು, ತಾಯಿ ಹಕ್ಕಿ ಅದಕ್ಕೆ ಆಹಾರ ಉಣಿಸುವ ಪ್ರಯತ್ನ ಮಾಡುತ್ತಿದೆ ಎಂದು ಪ್ರಾಣಿ ಸಂಗ್ರಹಾಲಯದ ನಿರ್ದೇಶಕರೂ ಆದ ಡಾ.ಸಂಜಯ್ ತ್ರಿಪಾಠಿ ಮಾಹಿತಿ ನೀಡಿದ್ದಾರೆ.

ಈ ಪ್ರಾಣಿ ಸಂಗ್ರಹಾಲಯದಲ್ಲಿ ನಾಲ್ಕು ಹೆಣ್ಣು ಹಾಗೂ ಮೂರು ಗಂಡು ಪೆಂಗ್ವಿನ್ ಗಳಿವೆ. ಒಟ್ಟು ಆರು ಪೆಂಗ್ವಿನ್ ಗಳು ಅದಾಗಲೇ ಜೊತೆಯಾಗಿವೆ. ಆ ಪೈಕಿ ಒಂದು ಹೆಣ್ಣು ಪೆಂಗ್ವಿನ್ ಗೆ ಜೊತೆಗಾರನನ್ನು ಝೂನ ಸಿಬ್ಬಂದಿ ಹುಡುಕಾಡುತ್ತಿದ್ದಾರೆ. ಈ ಹೊಸ ಮರಿಯು ಝೂನ ಇತರ ಪೆಂಗ್ವಿನ್ ಗಳ ಜೊತೆಯಾಗಿದೆ.

First Penguin born in India on Independence day

ಒಟ್ಟು ಏಳು ಹಂಬೋಲ್ಟ್ ಪೆಂಗ್ವಿನ್ ಗಳನ್ನು ದಕ್ಷಿಣ ಕೊರಿಯಾದಿಂದ ಇಲ್ಲಿಗೆ ತರಲಾಗಿತ್ತು. ಆ ಪೈಕಿ ಒಂದು, ಡೋರಿ ಮೃತಪಟ್ಟಿತ್ತು.

English summary
In India, this is the first time penguin chick born in Mumbai Veermata Jeejabai Bhonsle Udyan zoo on August 15th, Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X