ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಿಂದ ಹೊರಟ ಮೊದಲ "ಆಕ್ಸಿಜನ್ ಎಕ್ಸ್‌ಪ್ರೆಸ್" ರೈಲು

|
Google Oneindia Kannada News

ಮುಂಬೈ, ಏಪ್ರಿಲ್ 20: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ಆಮದು ಮಾಡಿಕೊಳ್ಳವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರ ಮಧ್ಯೆ ಭಾರತೀಯ ರೈಲ್ವೆ ಇಲಾಖೆ ಘೋಷಿಸಿದ ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಮಹಾರಾಷ್ಟ್ರದಿಂದಲೇ ಹೊರಟಿದೆ.

ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ದ್ರವರೂಪದ ಆಕ್ಸಿಜನ್ ತುಂಬಿಸಿಕೊಂಡು ಬರುವುದಕ್ಕಾಗಿ ಮುಂಬೈ ಬಳಿಯ ರೈಲ್ವೆ ನಿಲ್ದಾಣದಿಂದ ಸೋಮವಾರ ಖಾಲಿ ಟ್ಯಾಂಕರ್ ಹೊತ್ತಿರುವ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಸಂಚರಿಸಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಕೊವಿಡ್ 19 ಸೋಂಕಿತರಿಗೆ ಬೆಡ್, ಆಕ್ಸಿಜನ್ ರೆಮ್‌ಡೆಸಿವಿರ್ ಎಲ್ಲಿ ಸಿಗುತ್ತೆ?ಕೊವಿಡ್ 19 ಸೋಂಕಿತರಿಗೆ ಬೆಡ್, ಆಕ್ಸಿಜನ್ ರೆಮ್‌ಡೆಸಿವಿರ್ ಎಲ್ಲಿ ಸಿಗುತ್ತೆ?

ಏಳು ಖಾಲಿ ಟ್ಯಾಂಕರ್‌ಗಳನ್ನು ಹೊಂದಿರುವ ರೋ-ರೋ (ರೋಲ್-ಆನ್-ರೋಲ್-ಆಫ್) ರೈಲು ಮುಂಬೈಯಿಂದ 40 ಕಿ.ಮೀ ದೂರದಲ್ಲಿರುವ ನವೀ ಮುಂಬಯಿಯ ಕಲಂಬೋಲಿ ಗೂಡ್ಸ್ ಯಾರ್ಡ್ ನಿಂದ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ಗೆ ಹೊರಟಿದೆ ಎಂದು ಕೇಂದ್ರ ರೈಲ್ವೆ ಪ್ರಕಟಣೆಯಲ್ಲಿ ಹೇಳಿದೆ.

First Oxygen Express Train Starts Travel To Visakhapatnam From Maharashtra With 7 Empty Tankers

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಮಾತು:

"ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲ್ವೆ ಸಂಚಾರ ಆರಂಭಿಸಿದೆ. 7 ಖಾಲಿ ಟ್ಯಾಂಕರ್‌ಗಳನ್ನು ಹೊಂದಿರುವ ರೋ-ರೋ ಸೇವೆ ಮಹಾರಾಷ್ಟ್ರದ ಕಲಂಬೋಲಿ ಗೂಡ್ಸ್ ಯಾರ್ಡ್ ನಿಂದ ವಿಶಾಖಪಟ್ಟಣಂಗೆ ಹೊರಟಿದೆ. ಗ್ರೀನ್ ಕಾರಿಡಾರ್ ಮೂಲಕ ಲಿಕ್ವಿಡ್ ಆಕ್ಸಿಜನ್ ತುಂಬಿಸಿಕೊಂಡು ಬರಲು ಆಕ್ಸಿಜನ್ ಎಕ್ಸ್‌ಪ್ರೆಸ್ ಚಲಿಸುತ್ತದೆ" ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ತಿಳಿಸಿದ್ದಾರೆ.

ಭಾನುವಾರ ಆಕ್ಸಿಜನ್ ಎಕ್ಸ್‌ಪ್ರೆಸ್ ಬಗ್ಗೆ ಘೋಷಣೆ:

ದೇಶದ ವಿವಿಧ ನಗರಗಳಿಗೆ ಆಮ್ಲಜನಕ(ಆಕ್ಸಿಜನ್) ಮತ್ತು ದ್ರವರೂಪದ ಆಮ್ಲಜನಕ(ಲಿಕ್ವಿಡ್ ಆಕ್ಸಿಜನ್) ಸರಬರಾಜು ಮಾಡುವುದಕ್ಕೆ ವಿಶೇಷ ರೈಲುಗಳನ್ನು ಬಿಡಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ಭಾನುವಾರ ಘೋಷಿಸಿತ್ತು. ವಿಜಾಗ್, ಜಮ್ಶೆಡ್ಪುರ್, ರೌರ್ಖೇಲಾ ಮತ್ತು ಬೋಕಾರೋ ಪ್ರದೇಶಗಳಲ್ಲಿ ಆಕ್ಸಿಜನ್ ಮತ್ತು ಲಿಕ್ವಿಡ್ ಆಕ್ಸಿಜನ್ ಅನ್ನು ತುಂಬಿಸಿಕೊಂಡು ಬರುವುದಕ್ಕಾಗಿ ಖಾಲಿ ಟ್ಯಾಂಕರ್ ಕಳುಹಿಸಲಾಗುವುದು. ಮಹಾರಾಷ್ಟ್ರ ಮುಂಬೈನ ಕಾಳಂಬೋಲಿ ಮತ್ತು ಬಯೋಸರ್ ರೈಲ್ವೆ ನಿಲ್ದಾಣದಿಂದ ಖಾಲಿ ಟ್ಯಾಂಕರ್ ಅನ್ನು ವಿಶೇಷ ರೈಲುಗಳನ್ನು ಕಳುಹಿಸಲಾಗುವುದು ಎಂದು ತಿಳಿಸಿತ್ತು.

English summary
First Oxygen Express Train Starts Travel To Visakhapatnam From Maharashtra With 7 Empty Tankers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X