ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತರಿಗೆ ಲಸಿಕೆ ಜತೆ ಇದೀಗ ನೇಸಲ್ ಸ್ಪ್ರೇ ಕೂಡ ಲಭ್ಯ

|
Google Oneindia Kannada News

ಮುಂಬೈ, ಫೆಬ್ರವರಿ 10: ಇದೀಗ ಭಾರತದ ಮಾರುಕಟ್ಟೆಯಲ್ಲಿ ಕೊರೊನಾ ಲಸಿಕೆ ಜತೆಗೆ ನೇಸಲ್ ಸ್ಪ್ರೇ ಕೂಡ ಲಭ್ಯವಿದೆ.

ಕೊರೊನಾ ಸೋಂಕನ್ನು ಬೇರು ಸಮೇತ ತೆಗೆದು ಹಾಕಲು ವಿಜ್ಞಾನಿಗಳು, ತಜ್ಞರು ರೋಗದ ವಿರುದ್ಧ ಹೋರಾಡುವ ಅನೇಕ ಹೊಸ ಆವಿಷ್ಕಾರಗಳನ್ನು ಕಂಡು ಹಿಡಿಯುತ್ತಿದ್ದಾರೆ.

ಇತ್ತೀಚೆಗೆ ತಾಮ್ರ ಆಧಾರಿತ ಮಾಸ್ಕ್ ಅನ್ನು ಭಾರತೀಯ ವಿಜ್ಞಾನಿಗಳು ಬಳಕೆ ತಂದಿದ್ದಾರೆ. ಇದೀಗ ನೇಸಲ್ ಸ್ಪ್ರೇ ಈ ಪಟ್ಟಿಗೆ ಸೇರಿಕೊಳ್ಳಲಿದೆ. ಹೌದು, ವಯಸ್ಕ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಮೊದಲ ನೇಸಲ್ ಸ್ಪ್ರೇ ಅನ್ನು ಭಾರತದಲ್ಲಿ ಪ್ರಾರಂಭಿಸಲಾಗಿದೆ.

Fabi Spray

ನೈಟ್ರಿಕ್ ಆಕ್ಸೈಡ್ ನೇಸಲ್ ಅನ್ನು ಮೂಗಿನ ಲೋಳೆಪೊರೆಯ ಮೇಲೆ ಸಿಂಪಡಿಸಿದಾಗ ಅದು ವೈರಸ್ ವಿರುದ್ಧ ಭೌತಿಕ ಮತ್ತು ರಾಸಾಯನಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸಿ ಕೋವಿಡ್ ನಿಂದ ರಕ್ಷಿಸುತ್ತದೆ ಎಂದು ಕಂಪನಿ ಹೇಳಿದೆ.

ಮುಂಬೈ ಮೂಲದ ಔಷಧೀಯ ಕಂಪನಿ ಗ್ಲೆನ್‌ಮಾರ್ಕ್ ಸೋಂಕಿತರ ಚಿಕಿತ್ಸೆಗಾಗಿ ಫ್ಯಾಬಿಸ್ಪ್ರೇ ಹೆಸರಿನಲ್ಲಿ ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇಯನ್ನು ಬಿಡುಗಡೆ ಮಾಡಿದೆ. ಕೆನಡಾದ ಔಷಧೀಯ ಕಂಪನಿ ಸ್ಯಾನೋಟೈಜ್ ಸಹಭಾಗಿತ್ವದಲ್ಲಿ ನಾಸಲ್ ಸ್ಪ್ರೇಯನ್ನು ಅಭಿವೃದ್ಧಿಪಡಿಸಲಾಗಿದೆ.

ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇಯನ್ನು ಮೂಗಿಗೆ ಸ್ಪ್ರೇ ಮಾಡಿದಾಗ ವೈರಸ್ ವಿರುದ್ಧ ಹೋರಾಡಿ, ವೈರಸ್​ ವ್ಯಾಪಿಸದಂತೆ, ಶ್ವಾಸಕೋಶಕ್ಕೆ ಹಾನಿಯಾಗದಂತೆ ತಡೆಯುತ್ತದೆ. ಭಾರತದಲ್ಲಿ ಇದನ್ನು 3 ಹಂತದ ಕ್ಲಿನಿಕಲ್ ಪ್ರಯೋಗ ನಡೆದಿದ್ದು ಡಿಸಿಜಿಐ ಸೋಂಕಿತರ ಬಳಕೆಗೆ ಅನುಮತಿ ನೀಡಿದೆ.

ಗ್ಲೆನ್‌ಮಾರ್ಕ್ ಸಂಸ್ಥೆಯು ಈ ಹಿಂದೆ ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇ (NONS)ನ ತುರ್ತು ಬಳಕೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(DCGI) ಗೆ ಮನವಿ ಸಲ್ಲಿಸಿತ್ತು.

ಫ್ಯಾಬಿಸ್ಪ್ರೇಯು ಶ್ವಾಸನಾಳದಲ್ಲಿನ ಕೊರೊನಾ ವೈರಸ್​ ಅನ್ನು ಕೊಲ್ಲಲು ಸಹಾಯಕವಾಗುತ್ತದೆ. ಇದು ಸಾರ್ಸ್​ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.

ಭಾರತದಲ್ಲಿ ನೇಸಲ್ ಸ್ಪ್ರೇನ 3ನೇ ಹಂತದ ಪ್ರಯೋಗವು ಅಂತಿಮ ಹಂತವನ್ನು ಪೂರೈಸಿದೆ ಮತ್ತು 24 ಗಂಟೆಗಳಲ್ಲಿ 94% ಮತ್ತು 48 ಗಂಟೆಗಳಲ್ಲಿ ಶೇಕಡಾ 99 ರಷ್ಟು ವೈರಲ್ ಲೋಡ್ ಅನ್ನು ಕಡಿಮೆ ಮಾಡಿದೆ. ನೈಟ್ರಿಕ್ ಆಕ್ಸೈಡ್ ನೇಸಲ್ ಸ್ಪ್ರೇ (NONS) ಸುರಕ್ಷಿತವಾಗಿದೆ ಎಂದು ಕಂಪನಿ ತಿಳಿಸಿದೆ. ಗ್ಲೆನ್‌ಮಾರ್ಕ್ ಫ್ಯಾಬಿಸ್ಪ್ರೇ ಎಂಬ ಬ್ರ್ಯಾಂಡ್‌ ಹೆಸರಿನಲ್ಲಿ NONS ಅನ್ನು ಮಾರುಕಟ್ಟೆಗೆ ತರಲು ತಯಾರಿ ನಡೆಸಿದೆ.

"FabiSpray ಅನ್ನು ಮೂಗಿನ ಮೇಲ್ಭಾಗದ ವಾಯುಮಾರ್ಗಗಳಲ್ಲಿ COVID-19 ವೈರಸ್ ಅನ್ನು ಕೊಲ್ಲಲು ವಿನ್ಯಾಸಗೊಳಿಸಲಾಗಿದೆ. ನೈಟ್ರಿಕ್ ಆಕ್ಸೈಡ್ ನೇಸಲ್ ಅನ್ನು ಮೂಗಿನ ಲೋಳೆಪೊರೆಯ ಮೇಲೆ ಸಿಂಪಡಿಸಿದಾಗ ಅದು ವೈರಸ್ ವಿರುದ್ಧ ಭೌತಿಕ ಮತ್ತು ರಾಸಾಯನಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ವೈರಸ್, ಶ್ವಾಸಕೋಶಕ್ಕೆ ಹರಡುವುದನ್ನು ತಡೆಯುತ್ತದೆ, ಎಂದು ಕಂಪನಿ ಹೇಳಿದೆ.

ಯುಟಾಹ್ ಸ್ಟೇಟ್ ಯೂನಿವರ್ಸಿಟಿ USAನಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ, ಈ ನೇಸಲ್ ಸ್ಪ್ರೇ ಆಲ್ಫಾ, ಬೀಟಾ, ಗಾಮಾ, ಡೆಲ್ಟಾ ಮತ್ತು ಎಪ್ಸಿಲಾನ್ ರೂಪಾಂತರವನ್ನು ಒಳಗೊಂಡಂತೆ SARS-Cov-2 ವೈರಸ್‌ನ 99.9 ಪ್ರತಿಶತವನ್ನು 2 ನಿಮಿಷಗಳಲ್ಲಿ ಕೊಲ್ಲುತ್ತದೆ ಎಂದು ಸಾಬೀತಾಗಿದೆ..

ಅಧ್ಯಯನದ ಪ್ರಮುಖ ತನಿಖಾಧಿಕಾರಿಗಳಲ್ಲಿ ಒಬ್ಬರಾದ ಡಾ. ಶ್ರೀಕಾಂತ್ ಕೃಷ್ಣಮೂರ್ತಿ ಹೇಳುವ ಪ್ರಕಾರ, ನೈಟ್ರಿಕ್ ಆಕ್ಸೈಡ್ ನೆಸಲ್ ಸ್ಪ್ರೇ ವೈರಸ್ ಲೋಡ್ ಅನ್ನು ಕಡಿಮೆ ಮಾಡುತ್ತದೆ ಮತ್ತು COVID 19 ಸೋಂಕಿನ ಆರಂಭದಲ್ಲೇ ಇದನ್ನು ಬಳಸಿದಾಗ RT-PCR ಋಣಾತ್ಮಕತೆಯನ್ನು ವೇಗಗೊಳಿಸುತ್ತದೆ. ಮತ್ತು ವೈರಸ್ ಹರಡುವುದನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. NONS ಸಾಮಯಿಕವಾಗಿರುವುದು ಸುರಕ್ಷಿತವಾಗಿದೆ ಮತ್ತು ಕೋವಿಡ್ ವಿರುದ್ಧ ಹೋರಾಡಲು ಉತ್ತಮ ಆಯ್ಕೆಯಾಗಿದೆ ಎಂದಿದ್ದಾರೆ.

ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನ ಮುಖ್ಯ ವಾಣಿಜ್ಯ ಅಧಿಕಾರಿ ರಾಬರ್ಟ್ ಕ್ರೋಕಾರ್ಟ್ ಮಾತನಾಡಿ, COVID-19ಗೆ ಈ ಸ್ಪ್ರೇ ಪರಿಣಾಮಕಾರಿ ಮತ್ತು ಸುರಕ್ಷಿತ ಆ್ಯಂಟಿವೈರಲ್ ಚಿಕಿತ್ಸೆಯಾಗಿದ್ದು, ಇದು ರೋಗಿಗಳಿಗೆ ಹೆಚ್ಚು ಅಗತ್ಯವಿರುವ ಮತ್ತು ಸಮಯೋಚಿತ ಚಿಕಿತ್ಸೆಯ ಆಯ್ಕೆಯನ್ನು ನೀಡುತ್ತದೆ ಎಂದಿದ್ದಾರೆ.

Recommended Video

ಕೇಸರಿ ಶಾಲುಗಳನ್ನು ವಿದ್ಯಾರ್ಥಿಗಳಿಗೆ ಹಂಚಿದ ಮಂತ್ರಿಯ ಮಗ ಯಾರು? | oneindia kannada

ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳ ವಿಷಯದ ಕುರಿತು, ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನ ಹಿರಿಯ ವಿಪಿ ಮತ್ತು ಕ್ಲಿನಿಕಲ್ ಡೆವಲಪ್‌ಮೆಂಟ್ ಮುಖ್ಯಸ್ಥ ಡಾ. ಮೋನಿಕಾ ಟಂಡನ್ ಮಾತನಾಡಿ, 3ನೇ ಹಂತದ ಪ್ರಯೋಗದಲ್ಲಿ ಡಬಲ್ ಬ್ಲೈಂಡ್, ಪ್ಲಸೀಬೊ ನಿಯಂತ್ರಿತ ಪ್ರಯೋಗದ ಫಲಿತಾಂಶಗಳು ಉತ್ತೇಜಕವಾಗಿವೆ. ಕೋವಿಡ್ ರೋಗಿಯಲ್ಲಿ ಗಮನಾರ್ಹ ಧನಾತ್ಮಕ ಪರಿಣಾಮವನ್ನು ನೀಡಿದೆ. ಪ್ರಸ್ತುತ ಸನ್ನಿವೇಶದಲ್ಲಿ, ಹೆಚ್ಚಿನ ಪ್ರಸರಣವನ್ನು ಪ್ರದರ್ಶಿಸುವ COVID-19 ರೂಪಾಂತರಗಳೊಂದಿಗೆ ಹೋರಾಡಲು NONS ಉಪಯುಕ್ತ ಆಯ್ಕೆಯಾಗಿದೆ ಎಂದಿದ್ದಾರೆ.

English summary
Mumbai based innovation-driven global pharma company Glenmark has launched Nitric Oxide Nasal Spray (FabiSpray) in India, in partnership with SaNOtize, for treatment of adult patients suffering from COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X