ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ, 60 ಜನರ ರಕ್ಷಣೆ

|
Google Oneindia Kannada News

ಮುಂಬೈ, ಜುಲೈ 22 : ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇದುವರೆಗೂ 60 ಜನರನ್ನು ರಕ್ಷಣೆ ಮಾಡಲಾಗಿದ್ದು, 14 ಅಗ್ನಿ ಶಾಮಕದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ.

ಸೋಮವಾರ ಸಂಜೆ ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಮಹಾನಗರ್ ಟೆಲಿಪೋನ್ ನಿಗಮ್ ಲಿಮಿಟೆಡ್‌ನ ಕಟ್ಟಡದಲ್ಲಿ ಅಗ್ನಿ ದುರಂತ ನಡೆದಿದೆ. ಕಟ್ಟಡದಲ್ಲಿ ನೂರಾರು ಜನರು ಸಿಲುಕಿದ್ದು, 14 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ.

ಮುಂಬೈ ಕಟ್ಟಡ ಕುಸಿತ: ಮೃತರ ಸಂಖ್ಯೆ 13ಕ್ಕೆ ಏರಿಕೆಮುಂಬೈ ಕಟ್ಟಡ ಕುಸಿತ: ಮೃತರ ಸಂಖ್ಯೆ 13ಕ್ಕೆ ಏರಿಕೆ

Fire accident at Bandra Mumbai 60 rescued

ಪ್ರಾಥಮಿಕ ಮಾಹಿತಿಯಂತೆ ಯಾವುದೇ ಪ್ರಾಣಾಪಾಯವಿಲ್ಲ. ಇದುವರೆಗೂ ಕಟ್ಟಡದಲ್ಲಿ ಸಿಲುಕಿದ್ದ 60 ಜನರನ್ನು ರಕ್ಷಣೆ ಮಾಡಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ. ನೂರಕ್ಕೂ ಅಧಿಕ ಜನರು ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.

ವೈದ್ಯೆ ಪಾಯಲ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವುವೈದ್ಯೆ ಪಾಯಲ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು

ಮಹಾನಗರ್ ಟೆಲಿಪೋನ್ ನಿಗಮ ಲಿಮಿಟೆಡ್‌ (ಎಂಟಿಎನ್‌ಎಲ್) ಕಟ್ಟಡದ 3ನೇ ಮಹಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಬಳಿಕ 4 ಮತ್ತು 5ನೇ ಮಹಡಿಗೆ ಹಬ್ಬಿದೆ. ದಟ್ಟ ಹೊಗೆ ತುಂಬಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.

"ಇಡೀ ಕಟ್ಟಡದಲ್ಲಿ ಹೊಗೆ ತುಂಬಿಕೊಂಡಿದೆ. 4 ಮತ್ತು 5ನೇ ಅಂತಸ್ತಿನಲ್ಲಿ ಕೆಲವು ಜನರು ಸಿಲುಕಿರುವ ಶಂಕೆ ಇದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಅಗ್ನಿ ಶಾಮಕ ದಳದ ಮುಖ್ಯಸ್ಥರು ಹೇಳಿದ್ದಾರೆ.

English summary
Fire accident at Mahanagar Telephone Nigam Limited building at Bandra West, Mumbai. No injuries have been reported yet, 14 fire engines rushed the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X