ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಲ್ಪಾ ಶೆಟ್ಟಿ ಮತ್ತವರ ಪತಿ ವಿರುದ್ಧ ವಂಚನೆ ದೂರು ದಾಖಲು

ಯಾರಿಗಾದರೂ ಕೊಡಬೇಕಾದ ದುಡ್ಡಿಗೆ ನಾಮ ಹಾಕಿದರೆ ಏನ್ಮಾಡ್ತಾರೆ ಹೇಳಿ? ಅದನ್ನೇ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿಗೆ ಮಾಡಿದ್ದಾರೆ ಮುಂಬೈನಲ್ಲಿರುವ ಟೆಕ್ಸ್ ಟೈಲ್ ಸಂಸ್ಥೆಯ ಮಾಲೀಕರು. ಅದೇನು ದೂರು ಅಂತ ತಿಳಿಯಕ್ಕೆ ಈ ವರದಿ ಓದಿ

By ಮಾಧುರಿ
|
Google Oneindia Kannada News

ಮುಂಬೈ, ಏಪ್ರಿಲ್ 27: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ಪತಿ ರಾಜ್ ಕುಂದ್ರಾ ವಿರುದ್ಧ ಗುರುವಾರ ಥಾಣೆಯ ಭಿವಂಡಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. 24 ಲಕ್ಷ ರುಪಾಯಿ ವಂಚಿಸಿದ್ದಾರೆ ಎಂದು ಈ ದಂಪತಿ ವಿರುದ್ಧ ಟೆಕ್ಸ್ ಟೈಲ್ ಸಂಸ್ಥೆಯ ಮಾಲೀಕರೊಬ್ಬರು ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ.

ತನ್ನ ಪರವಾಗಿ ಹಣ ಪಡೆದಿರುವ ಇವರಿಬ್ಬರು ಅದನ್ನು ತನಗೆ ನೀಡಿಲ್ಲ ಎಂದು ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. "ಬಿಗ್ ಡೀಲ್ಸ್ ಎಂಬ ಕಂಪೆನಿಗೆ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ನಿರ್ದೇಶಕರು. ಮಲೋಶಿಯಾ ಟೆಕ್ಸ್ ಟೈಲ್ಸ್ ನ ಪರವಾಗಿ ಮಾರಿರುವ ಬೆಡ್ ಶೀಟ್ ಗಳಿಗೆ ಗ್ರಾಹಕರಿಂದ ಹಣ ಪಡೆದು, ಅದನ್ನು ಟೆಕ್ಸ್ ಟೈಲ್ಸ್ ನವರಿಗೆ ನೀಡಿಲ್ಲ.[ನಟಿ ಶಿಲ್ಪಾ ಶೆಟ್ಟಿ ಮೇಲೆ 420 ಕೇಸು ದಾಖಲು]

Shilpa shetty

ಶಿಲ್ಪಾ ಹಾಗೂ ರಾಜ್ ಕುಂದ್ರಾ ಮಾಲೀಕತ್ವದ ಹೋಮ್ ಶಾಪಿಂಗ್ ಟಿವಿ ಬೆಸ್ಟ್ ಡೀಲ್ ಹಾಗೂ ಅದಕ್ಕೆ ವಸ್ತುಗಳನ್ನು ಮಾರುತ್ತಿದ್ದವರ ಮಧ್ಯೆ ತಿಕ್ಕಾಟ ಮುಂದುವರಿದಿತ್ತು. ಏಕೆಂದರೆ ಈ ವರ್ಷದ ಆರಂಭದಿಂದಲೂ ಯಾವುದೇ ಹಣ ಪಾವತಿಸಿರಲಿಲ್ಲ. 2016ರ ನವೆಂಬರ್ 8ರಂದು ಅಪನಗದೀಕರಣದ ಘೋಷಣೆ ಮಾಡುವ ಮುಂಚಿನಿಂದಲೂ ಶಿಲ್ಪಾ ಶೆಟ್ಟಿ ಒಡೆತನದ ಕಂಪೆನಿಯಿಂದ ಹಣ ಪಾವತಿಸುತ್ತಿರಲಿಲ್ಲ ಎಂದು ದೂರಿದ್ದಾರೆ.[ಶಾಲು ಮಾರುತ್ತಿದ್ದ ಶಿಲ್ಪಾಶೆಟ್ಟಿ ಪತಿ ಈಗ ಬಾಜಿಗರ್!]

ಹಲವು ಸಲ ಬಾಕಿ ಮೊತ್ತ ಪಾವತಿಸಿ ಎಂದು ಕೇಳಿಕೊಂಡರೂ ಹಣ ಕೊಟ್ಟಿರಲಿಲ್ಲ. ಆದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

English summary
A FIR was registered on Thursday against Bollywood actress Shilpa Shetty and Raj Kundra in connection with a cheating case in Thane's Bhiwandi police station for allegedly duping a textile firm owner of Rs 24 lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X