ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಫ್ರೀ ಕಾಶ್ಮೀರ' ಪೋಸ್ಟರ್ ಹಿಡಿದ ಲೇಖಕಿ ವಿರುದ್ಧ ಎಫ್‌ಐಆರ್

|
Google Oneindia Kannada News

ಮುಂಬೈ, ಜನವರಿ 7: ದೆಹಲಿಯ ಜೆಎನ್‌ಯುದಲ್ಲಿ ನಡೆದ ಹಿಂಸಾಚಾರದ ವಿರುದ್ಧ ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ಸೋಮವಾರ ಪ್ರತಿಭಟನೆ ವೇಳೆ 'ಫ್ರೀ ಕಾಶ್ಮೀರ' ಎಂಬ ಪೋಸ್ಟರ್ ಹಿಡಿದಿದ್ದ ಕಥೆಗಾರ್ತಿ ಮೆಹಕ್ ಮಿರ್ಜಾ ಪ್ರಭು ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕೋಲಬಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸೆಕ್ಷನ್ 153ಬಿ ಅಡಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಲು ಈ ಪ್ರತಿಭಟನೆ ನಡೆದ ಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಇತರೆ ವಿಡಿಯೋ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಲ್ಕತ್ತಾದಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್: ಇಂಡಿಯಾ ಗೇಟ್ ಬಳಿ ಕೇಂದ್ರದ ವಿರುದ್ಧ ಕೂಗುಕೋಲ್ಕತ್ತಾದಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್: ಇಂಡಿಯಾ ಗೇಟ್ ಬಳಿ ಕೇಂದ್ರದ ವಿರುದ್ಧ ಕೂಗು

'ಮೆಹಕ್ ಮಿರ್ಜಾ ಪ್ರಭು ವಿರುದ್ಧ ಐಪಿಸಿ ಸೆಕ್ಷನ್ 153 ಬಿ ಅಡಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಹೇಳಿಕೆ ನೀಡುವಂತೆ ಇನ್ನೂ ಕರೆಸಿಕೊಂಡಿಲ್ಲ. ಅವರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಿದ್ದೇವೆ. ಅಗತ್ಯಬಿದ್ದಾಗ ಹೇಳಿಕೆ ಪಡೆದುಕೊಳ್ಳಲು ಅವರನ್ನು ಕರೆಸಿಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.

FIR Against Woman For Holding Free Kashmir Poster In Mumbai During Protest

ಸೋಮವಾರ ಸಂಜೆ ನಡೆದ ಪ್ರತಿಭಟನೆ ವೇಳೆ 'ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಿ' ಎಂಬ ಬರಹವಿದ್ದ ಪೋಸ್ಟರ್ ಹಿಡಿದಿದ್ದ ಮಿರ್ಜಾ ಪ್ರಭು ಅವರ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ, ತಕ್ಷಣ ತನಿಖೆ ನಡೆಸುವಂತೆ ಆಗ್ರಹಿಸಿತ್ತು.

ಜೆಎನ್‌ಯು ಹಿಂಸಾಚಾರ: ಭಯದಲ್ಲಿ ಕ್ಯಾಂಪಸ್ ತೊರೆದ ವಿದ್ಯಾರ್ಥಿನಿಯರುಜೆಎನ್‌ಯು ಹಿಂಸಾಚಾರ: ಭಯದಲ್ಲಿ ಕ್ಯಾಂಪಸ್ ತೊರೆದ ವಿದ್ಯಾರ್ಥಿನಿಯರು

'ನಾನು ಹಿಡಿದಿದ್ದ ಪೋಸ್ಟರ್‌ಅನ್ನು ತಪ್ಪಾಗಿ ಅರ್ಥೈಸಲಾಗಿದೆ. ಕಾಶ್ಮೀರದ ಜನರ ಹಕ್ಕುಗಳ ಬಗ್ಗೆ ಮಾತ್ರ ನಾನು ಮಾತನಾಡಿದ್ದೆ. ಸಿಎಎ, ಎನ್‌ಆರ್‌ಸಿ ಮತ್ತು ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ದಾಳಿ ಸೇರಿದಂತೆ ಹಲವು ವಿಚಾರಗಳ ಪೋಸ್ಟರ್‌ಗಳನ್ನು ನಾನು ನೋಡಿದೆ. ಹೀಗಾಗಿ ಪ್ರತಿಭಟನೆಗೆ ಈ ಪೋಸ್ಟರ್ ಹಿಡಿದು ಹೋಗಿದ್ದೆ. ನಾನು ಕಾಶ್ಮೀರದವಳಲ್ಲ. ನನಗೆ ಕಾಶ್ಮೀರಿಗಳ ಸಂವಿಧಾನಾತ್ಮಕ ಹಕ್ಕುಗಳು ನೆನಪಾಯಿತು. ಅದನ್ನೂ ತೋರಿಸಿದೆ. ಆದರೆ ಅದನ್ನು ಬೇರೆ ರೀತಿ ನೋಡಲಾಗಿದೆ. ಈ ಪರಿಸ್ಥಿತಿ ನನ್ನಂತಹ ಮಹಿಳೆಯರಿಗೆ ಭಯ ಹುಟ್ಟಿಸಿದೆ. ಈ ರೀತಿಯ ಭಯದಲ್ಲಿ ನಾವು ಬದುಕಬಾರದು' ಎಂದು ಫೇಸ್‌ಬುಕ್ ವಿಡಿಯೋದಲ್ಲಿ ಅವರು ಹೇಳಿಕೊಂಡಿದ್ದಾರೆ.

English summary
Mumbai police filed an FIR against storyteller Mahek Mirza Prabhu for holding 'Free Kashmir' poster during protest against JNU incident at Gateway of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X