ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೃತಿಕ್ ರೋಷನ್ ತಂದೆ ರಾಕೇಶ್ ಗೆ ಗಂಟಲು ಕ್ಯಾನ್ಸರ್ ಶಸ್ತ್ರಚಿಕಿತ್ಸೆ

|
Google Oneindia Kannada News

ಮುಂಬೈ, ಜನವರಿ 8: ಹಿರಿಯ ನಿರ್ಮಾಪಕ- ನಟ ರಾಕೇಶ್ ರೋಷನ್ ಅವರಿಗೆ ಗಂಟಲು ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಸಮಸ್ಯೆ ಆರಂಭಿಕ ಹಂತದಲ್ಲಿದೆ ಎಂದು ನಟ ಹಾಗೂ ರಾಕೇಶ್ ಮಗ ಹೃತಿಕ್ ರೋಷನ್ ಮಂಗಳವಾರ ಹೇಳಿದ್ದಾರೆ. ನನ್ನ ತಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಅವರು ಇನ್ ಸ್ಟಾ ಗ್ರಾಮ್ ನಲ್ಲಿ ತಿಳಿಸಿದ್ದಾರೆ.

ಒಂದು ಫೋಟೋಗಾಗಿ ಅಪ್ಪನನ್ನು ಕೇಳಿದೆ. ನನಗೆ ಗೊತ್ತಿತ್ತು ಶಸ್ತ್ರಚಿಕಿತ್ಸೆ ದಿನವೂ ಅವರು ಜಿಮ್ ತಪ್ಪಿಸಲ್ಲ. ನನಗೆ ಗೊತ್ತಿರುವ ಹಾಗೆ ತುಂಬ ಗಟ್ಟಿ ಮನುಷ್ಯ ಅವರು. ಕೆಲವು ವಾರಗಳ ಹಿಂದೆ ಅವರಿಗೆ ಗಂಟಲು ಕ್ಯಾನ್ಸರ್ ಇರುವುದು ಗೊತ್ತಾಯಿತು. ಅದು ಆರಂಭಿಕ ಹಂತದಲ್ಲಿತ್ತು. ಅವರಿಗೆ ಇಂದು ತುಂಬ ಉತ್ಸಾಹ ಇತ್ತು. ಅವರು ಅದರ ಜತೆ ಕಾದಾಡಲು ಹೊರಟಿದ್ದಾರೆ. ಕುಟುಂಬವಾಗಿ ನಾವು ಅದೃಷ್ಟವಂತರು. ಏಕೆಂದರೆ ನಮಗೆ ಅವರಂಥ ನಾಯಕರಿದ್ದಾರೆ ಎಂದು ಹೃತಿಕ್ ಬರೆದುಕೊಂಡಿದ್ದಾರೆ.

Filmmaker Rakesh Roshan diagnosed with early stage throat cancer

ಕ್ಯಾನ್ಸರ್ ಚಿಕಿತ್ಸೆ ನಂತರ ಮುಂಬೈಗೆ ಮರಳಿದ ಸೋನಾಲಿ ಬೇಂದ್ರೆಕ್ಯಾನ್ಸರ್ ಚಿಕಿತ್ಸೆ ನಂತರ ಮುಂಬೈಗೆ ಮರಳಿದ ಸೋನಾಲಿ ಬೇಂದ್ರೆ

ಅರವತ್ತೊಂಬತ್ತು ವರ್ಷದ ರಾಕೇಶ್ ರೋಷನ್ ಅವರ ಜತೆಗೆ ಜಿಮ್ ನಲ್ಲಿ ನಿಂತಿರುವ ಫೋಟೋವನ್ನು ಹೃತಿಕ್ ಹಾಕಿದ್ದಾರೆ. ಕೆಲವು ವರ್ಷಗಳ ಹಿಂದೆ ರಾಕೇಶ್ ರೋಷನ್ ರ ಮಗಳು ಸುನೈನಾಗೆ ಕೂಡ ಸರ್ವಿಕಲ್ ಕ್ಯಾನ್ಸರ್ ಪತ್ತೆಯಾಗಿತ್ತು. ಆ ನಂತರ ಅವರು ಗುಣಮುಖರಾಗಿದ್ದರು.

ಕ್ಯಾನ್ಸರಿನಿಂದ ಬಳಲುತ್ತಿದ್ದ ಖ್ಯಾತ ನಿರ್ದೇಶಕಿ ಕಲ್ಪನಾ ಲಾಜ್ಮಿ ಇನ್ನಿಲ್ಲಕ್ಯಾನ್ಸರಿನಿಂದ ಬಳಲುತ್ತಿದ್ದ ಖ್ಯಾತ ನಿರ್ದೇಶಕಿ ಕಲ್ಪನಾ ಲಾಜ್ಮಿ ಇನ್ನಿಲ್ಲ

ರಾಕೇಶ್ ರೋಷನ್ ಅವರು ಕಾಮ್ ಚೋರ್ ಹಾಗೂ ಖೂಬ್ ಸೂರತ್ ನಂಥ ಸಿನಿಮಾಗಳಿಂದ ತಮ್ಮ ವೃತ್ತಿ ಬದುಕು ಆರಂಭಿಸಿದರು. ಆ ನಂತರ ನಿರ್ಮಾಣಕ್ಕೆ ಇಳಿದರು. ತಾವೇ ನಿರ್ದೇಶನ ಮಾಡಿದ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡರು.

English summary
Veteran filmmaker-actor Rakesh Roshan has been diagnosed with “early stage squamous cell carcinoma of the throat”, his son, actor Hrithik Roshan said on January 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X