ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರಿನಿಂದ ಬಳಲುತ್ತಿದ್ದ ಖ್ಯಾತ ನಿರ್ದೇಶಕಿ ಕಲ್ಪನಾ ಲಾಜ್ಮಿ ಇನ್ನಿಲ್ಲ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 23: ಖ್ಯಾತ ನಿರ್ದೇಶಕಿ ಕಲ್ಪನ ಲಾಜ್ಮಿ ಅವರು ಮುಂಬೈನಲ್ಲಿ ಭಾನುವಾರ ಬೆಳಗ್ಗೆ 4.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಕಲ್ಪನಾ ಅವರ ನಿಧನಕ್ಕೆ ಬಾಲಿವುಡ್ ನ ಗಣ್ಯಾತಿಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. 64 ವರ್ಷ ವಯಸ್ಸಿನ ಲಾಜ್ಮಿ ಅವರು ಕೆಲಕಾಲದಿಂಡ ಮೂತ್ರಪಿಂಡದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು

ಮಹಿಳಾ ಪ್ರಧಾನ ಚಿತ್ರಗಳನ್ನು ನಿರ್ದೇಶಿಸಿ, ಸಿನಿವಿಮರ್ಶಕರು ಮೆಚ್ಚಿಗೆ ಗಳಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸಿದ್ದರು. ರುಡಾಲಿ, ಚಿಂಗಾರಿ, ಏಕ್ ಪಲ್, ದಮನ್ ಮುಂತಾದ ಚಿತ್ರಗಳನ್ನು ಲಾಜ್ಮಿ ಅವರು ನಿರ್ದೇಶಿಸಿದ್ದರು.

ಶ್ಯಾಂ ಬೆನಗಲ್ ಅವರ ಜತೆ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಲಾಜ್ಮಿ ಅವರು 2006ರಲ್ಲಿ ಮಿಥುನ್ ಚಕ್ರವರ್ತಿ ಹಾಗೂ ಸುಷ್ಮಿತಾ ಸೇನ್ ಅಭಿನಯದ ಚಿಂಗಾರಿ ಚಿತ್ರವನ್ನು ನಿರ್ದೇಶಿಸಿದ್ದೇ ಕೊನೆ.

Filmmaker Kalpana Lajmi Passes Away

ಕ್ಯಾನ್ಸರಿಗೆ ತುತ್ತಾಗಿ ಆರ್ಥಿಕವಾಗಿ ದುರ್ಬಲರಾದಾಗ, ನಟ ಅಮೀರ್ ಖಾನ್, ಸಲ್ಮಾನ್ ಖಾನ್, ಕರಣ್ ಜೋಹರ್, ಅಲಿಯಾ ಭಟ್, ನೀನಾ ಗುಪ್ತಾ ಸೇರಿದಂತೆ ಅನೇಕ ನಟ, ನಟಿಯರು ಅವರಿಗೆ ನೆರವಾಗಿದ್ದರು.

ಸಂಗೀತ ದಿಗ್ಗಜ ಭೂಪೆನ್ ಹಜಾರಿಕಾ ಅವರ ಬಗ್ಗೆ ಕಲ್ಪನಾ ಬರೆದ ಕೃತಿ ಇತ್ತೀಚೆಗೆ ಲೋಕಾರ್ಪಣೆಗೊಂಡಿತ್ತು. ಅನಾರೋಗ್ಯದ ಕಾರಣ ಈ ಕಾರ್ಯಕ್ರಮದಲ್ಲಿ ಕಲ್ಪನಾ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

English summary
Renowned filmmaker Kalpana Lajmi died Sunday morning at the Kokilaben Dhirubhai Ambani Hospital here, a family member said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X