ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಪಿಇ ಕಿಟ್‍ಗಳ ಉತ್ಪಾದನೆಗಾಗಿ ದಾದ್ರಾ ಘಟಕ ಪುನರಾರಂಭಿಸಿದ ಫಿಲಾಟೆಕ್ಸ್

|
Google Oneindia Kannada News

ಬೆಂಗಳೂರು, ಮೇ 17: ಮನುಷ್ಯ ನಿರ್ಮಿತ ಫ್ಯಾಬ್ರಿಕ್ ಉತ್ಪಾದನೆಯಲ್ಲಿ ಅಗ್ರಗಣ್ಯ ಕಂಪನಿಯಾದ ಫಿಲಾಟೆಕ್ಸ್ ಇಂಡಿಯಾ ಲಿಮಿಟೆಡ್, ಫೇಸ್ ಮಾಸ್ಕ್, ವೈಯಕ್ತಿಕ ಸುರಕ್ಷಾ ದಿರಿಸು ಮತ್ತಿತರ ವಸ್ತುಗಳ ಉತ್ಪಾದನೆಗೆ ಎಳೆಗಳನ್ನು ಪೂರೈಸುವ ಸಲುವಾಗಿ ತುರ್ತು ಅಗತ್ಯತೆ ಹಿನ್ನೆಲೆಯಲ್ಲಿ ತನ್ನ ಕಾರ್ಯಾಚರಣೆಯನ್ನು ದಾದ್ರಾ ಘಟಕದಲ್ಲಿ ಆರಂಭಿಸಿದೆ. ಇದು ರಕ್ಷಣಾ ಸಚಿವಾಲಯದಲ್ಲಿ ಕ್ವಾರಂಟೈನ್ ಅನ್ವಯಿಕೆಗಳಿಗೆ ಬಳಸುವ ಡೇರೆಗಳ ನಿರ್ಮಾಣದ ಸಲುವಾಗಿ ಫ್ಯಾಬ್ರಿಕ್ ತುರ್ತು ಅಗತ್ಯತೆಗಳನ್ನು ಕೂಡಾ ಪೂರೈಸಲಿದೆ.

ಸರ್ಕಾರದ ಪರಿಷ್ಕೃತ ಲಾಕ್‍ಡೌನ್ ನಿರ್ದೇಶನಗಳಲ್ಲಿ ಕಡ್ಡಾಯಪಡಿಸಿದ ಎಲ್ಲ ಸಾಮಾಜಿಕ ಅಂತರ ನಿಯಮಾವಳಿ ಮತ್ತು ನೈರ್ಮಲ್ಯ ಕ್ರಮಗಳನ್ನು ಅನುಸರಿಸಿಕೊಂಡು ದಾದ್ರಾ ಘಟಕದಲ್ಲಿ ಉತ್ಪಾದನೆ ಪುನರಾರಂಭಿಸಲಾಗಿದೆ.

ಪಿಪಿಇ ಕಿಟ್ ಉತ್ಪಾದನೆ; ದೇಶಕ್ಕೆ ಮಾದರಿಯಾದ ಬೆಂಗಳೂರುಪಿಪಿಇ ಕಿಟ್ ಉತ್ಪಾದನೆ; ದೇಶಕ್ಕೆ ಮಾದರಿಯಾದ ಬೆಂಗಳೂರು

ಈ ಬಗ್ಗೆ ವಿವರ ನೀಡಿದ ಫಿಲಾಟೆಕ್ಸ್ ಇಂಡಿಯಾದ ಅಧ್ಯಕ್ಷ & ವ್ಯವಸ್ಥಾಪಕ ನಿರ್ದೇಶಕ ಮಧುಸೂಧನ್ ಭಗೇರಿಯಾ, ''ಪಿಪಿಇ ಕಿಟ್‍ಗಳ ಉತ್ಪಾದಕರಿಂದ ಉತ್ತಮ ಬೇಡಿಕೆ ಬರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಹಾಗೂ ರಕ್ಷಣೆ ಮತ್ತು ಇತರ ವಲಯಗಳಲ್ಲಿ ಫ್ಯಾಬ್ರಿಕ್‍ನ ವಿಶೇಷ ಅಗತ್ಯತೆಯೂ ಕಂಡುಬರುತ್ತಿದೆ. ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಮುಂದಿನ ಎರಡು ಮೂರು ತಿಂಗಳಲ್ಲಿ ಪರಿಸ್ಥಿತಿ ಸಹಜತೆಗೆ ಬರುವ ನಿರೀಕ್ಷೆ ಇದೆ. ಚೀನಾದಿಂದ ಭಾರತಕ್ಕೆ ಹೆಚ್ಚಿನ ಕಾರ್ಯಾದೇಶ ಬರುವ ಸಾಧ್ಯತೆಯನ್ನು ಕೂಡಾ ನಾವು ನಿರೀಕ್ಷಿಸಿದದೇವೆ. ಒಟ್ಟಾರೆಯಾಗಿ ನಮ್ಮಂಥ ಭಾರತೀಯ ಕಂಪನಿಗಳು ಇಡೀ ಪರಿಸ್ಥಿತಿಯಿಂದ ಹೆಚ್ಚಿನ ಲಾಭ ಪಡೆಯುವ ಸಾಧ್ಯತೆ ಇದೆ'' ಎಂದು ಹೇಳಿದ್ದಾರೆ.

Filatex India resumes production at Dadra plant supply yarn to PPE kits

ಪಿಪಿಇ ಕಿಟ್ ಉತ್ಪಾದನೆ ಆರಂಭಿಸಿದ ನೈಋತ್ಯ ರೈಲ್ವೆ ಪಿಪಿಇ ಕಿಟ್ ಉತ್ಪಾದನೆ ಆರಂಭಿಸಿದ ನೈಋತ್ಯ ರೈಲ್ವೆ

''ಸೀಮಿತ, ಅಗತ್ಯ ಸಿಬ್ಬಂದಿಯ ಜತೆಗೆ ಸಾಮಾಜಿಕ ಅಂತರ ಕಾಪಾಡುವಿಕೆ ಕಾನೂನುಬದ್ಧವಾದ ಎಲ್ಲ ಸುರಕ್ಷಾ ಕ್ರಮಗಳನ್ನು ಅನುಸರಿಸಿ, ದೇಹದ ಉಷ್ಣಾಂಶ ಪರೀಕ್ಷೆ, ಮಾಸ್ಕ್‍ಗಳನ್ನು ಕಡ್ಡಾಯಪಡಿಸಿರುವುದು, ಸ್ಯಾನಿಟೈಸರ್ ಗಳ ಪೂರೈಕೆಯನ್ನು ಕಟ್ಟುನಿಟ್ಟಾಗಿ ಮಾಡಿದ್ದೇವೆ. ಕಾರ್ಮಿಕರ ಸುರಕ್ಷೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಿದ್ದೇವೆ. ನಾವು ಕ್ರಮೇಣ ಉತ್ಪಾದನೆಯನ್ನು ಮುಂದಿನ ಕೆಲ ವಾರಗಳಲ್ಲಿ ಹಂತಹಂತವಾಗಿ ಹೆಚ್ಚಿಸಲಿದ್ದೇವೆ'' ಎಂದು ಮಧುಸೂಧನ್ ಭಗೇರಿಯಾ ವಿವರಿಸಿದ್ದಾರೆ.

English summary
Filatex India Ltd., a leading player in manmade fibers, has resumed partial operations at its Dadra plant to Supplies yarn to fabric manufacturers for manufacturing PPE kits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X