ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿಯ ಇಬ್ಬರು ಸಂಪಾದಕರಿಗೆ ಸಮನ್ಸ್

|
Google Oneindia Kannada News

ಮುಂಬೈ, ಅಕ್ಟೋಬರ್ 14: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿಯ ಇಬ್ಬರು ಹಿರಿಯ ಸಂಪಾದಕರಿಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

ಬುಧವಾರ ಸಂಜೆ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ನಲ್ಲಿ ತಿಳಿಸಲಾಗಿದೆ. ಬಳಕೆದಾರರಿಗೆ ನಿರ್ದಿಷ್ಟ ರಿಪಬ್ಲಿಕ್ ಚಾನೆಲ್‌ನ್ನೇ ನೋಡಲು ಬಳಕೆದಾರರಿಗೆ ಹಣ ನೀಡುತ್ತಿರುವ ಬಗ್ಗೆ ಹನ್ಸ್ ರಿಸರ್ಚ್ ಟೀಮ್ ದೂರು ದಾಖಲಿಸಿತ್ತು.

ನಕಲಿ ಟಿಆರ್‌ಪಿ ಹಗರಣ: ಐದನೇ ಆರೋಪಿಯ ಬಂಧನ ನಕಲಿ ಟಿಆರ್‌ಪಿ ಹಗರಣ: ಐದನೇ ಆರೋಪಿಯ ಬಂಧನ

ಇದನ್ನು ಆಧರಿಸಿ ಡಿಪಬ್ಲಿಕ್ ಟಿವಿಯ ಹಿರಿಯ ಸಂಪಾದಕರಾದ ನಿರಂಜನ್ ನಾರಾಯಣಸ್ವಾಮಿ ಹಾಗೂ ಅಭಿಷೇಕ್ ಕಪೂರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

Fake Ratings Case: 2 Top Republic TV Editors Summoned By Mumbai Police

ಇದಲ್ಲದೆ ಇತ್ತೀಚೆಗೆ ಹನ್ಸ್ ರಿಸರ್ಚ್ ಗ್ರೂಪ್‌ಗೆ ಸಂಬಂಧಿಸಿದ ವಿಡಿಯೋವೊಂದನ್ನು ಅನುಮತಿ ಇಲ್ಲದೆ ಬಳಸಿದ ಬಗ್ಗೆಯೂ ವಿವರಣೆ ಕೇಳಲು ಪೊಲೀಸರು ನಿರ್ಧರಿಸಿದ್ದಾರೆ.
ನಕಲಿ ಟಿಆರ್‌ಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ಸ್ ರಿಸರ್ಚ್ ಗ್ರೂಪ್‌ನ ಮಾಜಿ ಸಿಬ್ಬಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಮಿರ್ಜಾಪುರ್‌ನಲ್ಲಿ ವಿನಯ್ ತ್ರಿಪಾಠಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಿದಂತಾಗಿದೆ.

ಬಳಕೆದಾರರಿಗೆ ಹಣ ಹಂಚಿಕೆ ಹಾಗೂ ಟಿವಿ ಚಾನೆಲ್‌ಗಳೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ವಿನಯ್ ತ್ರಿಪಾಠಿ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನುವುದು ಮುಂಬೈ ಪೊಲೀಸರ ವಾದವಾಗಿದೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ, ಬಾಕ್ಸ್ ಸಿನಿಮಾ ಹಾಗೂ ಫಕ್ತ್ ಮರಾಠಿ ವಾಹಿನಿ ಹಾಗೂ ಅದರ ಮುಖ್ಯಸ್ಥರ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಹಾಗೆಯೇ ಹನ್ಸ್ ರಿಸರ್ಚ್ ಗ್ರೂಪ್‌ನ ಸಿಇಒ ಹೇಳಿಕೆಯನ್ನು ಕೂಡ ಪಡೆಯಲಾಗಿದೆ, ಮತ್ತು ದೂರುದಾರರ ಹೇಳಿಕೆಯನ್ನೂ ದಾಖಲಿಸಲಾಗಿದೆ.

English summary
Two top editors of Republic TV, which has been accused of rigging viewership ratings, have been summoned by Mumbai Police as part of its probe into the alleged manipulation of ratings by three channels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X