ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರ: ಮುಂಬೈನಲ್ಲಿ 390 ಜನರಿಗೆ ನಕಲಿ ಕೊರೊನಾವೈರಸ್ ಲಸಿಕೆ!

|
Google Oneindia Kannada News

ಮುಂಬೈ, ಜೂನ್ 16: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಲಸಿಕೆ ವಿತರಣೆಯಲ್ಲೂ ಹಗರಣ ನಡೆಯುತ್ತಿವೆ. "ಕೊವಿಡ್-19 ಲಸಿಕೆ ಹಗರಣದಲ್ಲಿ ತಾವು ಬಲಿಯಾಗಿದ್ದೇವೆ" ಎಂದು ಮುಂಬೈ ಕಂಡಿವಲಿ ಪ್ರದೇಶದ ಹೌಸಿಂಗ್ ಸೊಸೈಟಿಯ ನಿವಾಸಿಗಳು ಹೇಳಿದ್ದಾರೆ.

ಕಳೆದ ಮೇ 30ರಂದು ಮುಂಬೈನ ಹೀರಾ ನಂದಿನಿ ಎಸ್ಟೇಟ್ ಸೊಸೈಟಿಯಲ್ಲಿ ಕೊವಿಡ್-19 ಲಸಿಕೆ ವಿತರಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಈ ವೇಳೆ 390 ಫಲಾನುಭವಿಗಳು ನಕಲಿ ಕೊವಿಶೀಲ್ಡ್ ಲಸಿಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ.

ಕೊವಿಶೀಲ್ಡ್ ಮತ್ತು ಸ್ಪುಟ್ನಿಕ್-ವಿ ಲಸಿಕೆಗಿಂತ ಕೊವ್ಯಾಕ್ಸಿನ್ ದುಬಾರಿ ಯಾಕೆ? ಕೊವಿಶೀಲ್ಡ್ ಮತ್ತು ಸ್ಪುಟ್ನಿಕ್-ವಿ ಲಸಿಕೆಗಿಂತ ಕೊವ್ಯಾಕ್ಸಿನ್ ದುಬಾರಿ ಯಾಕೆ?

"ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಯ ಪ್ರತಿನಿಧಿ ಎಂದು ಹೇಳಿಕೊಳ್ಳುವ ಫೆಸಿಲಿಟೇಟರ್ ರಾಜೇಶ್ ಪಾಂಡೆ ಸೊಸೈಟಿ ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದರು," ಎಂದು ನಿವಾಸಿಗಳು ಹೇಳಿದ್ದಾರೆ. ಕೊವಿಡ್ ಲಸಿಕೆ ಅನ್ನು ಸಂಜಯ್ ಗುಪ್ತಾ ಒದಗಿಸಿದರೆ, ಮೂರನೆಯ ವ್ಯಕ್ತಿ ಆಗಿರುವ ಮಹೇಂದ್ರ ಸಿಂಗ್ ಸೊಸೈಟಿ ಸದಸ್ಯರಿಂದ ಹಣವನ್ನು ಸಂಗ್ರಹಿಸಿರುವುದು ಗೊತ್ತಾಗಿದೆ.

Mumbai: Fake Coronavirus Vaccines Given To People In Hiranandani Society

ಒಂದು ಡೋಸ್ ಲಸಿಕೆಗೆ 1260 ರೂಪಾಯಿ:

"ನನ್ನ ಮಗ 1,260 ರೂಪಾಯಿ ಕೊಟ್ಟು ಒಂದು ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾನೆ. ಒಂದು ಬಾರಿ ಲಸಿಕೆ ಹಾಕಿಸಿಕೊಂಡ ನಂತರದಲ್ಲಿ ನಮ್ಮ ಮೊಬೈಲಿಗೆ ಯಾವುದೇ ಸಂದೇಶ ಬರಲಿಲ್ಲ. ಅಲ್ಲದೇ, ಲಸಿಕೆ ಪಡೆದುಕೊಳ್ಳುವಾಗ ಯಾವುದೇ ರೀತಿ ಫೋಟೋ ತೆಗೆದುಕೊಳ್ಳುವುದಕ್ಕೆ ಹಾಗೂ ಸೆಲ್ಫಿ ತೆಗೆದುಕೊಳ್ಳುವುದಕ್ಕೂ ಅವಕಾಶ ನೀಡಲಿಲ್ಲ," ಎಂದು ಹೌಸಿಂಗ್ ಸೊಸೈಟಿ ನಿವಾಸಿ ಹಿತೇಶ್ ಪಟೇಲ್ ಆರೋಪಿಸಿದ್ದಾರೆ.

English summary
Mumbai: Fake Coronavirus Vaccines Given To People In Hiranandani Society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X