ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಹಿಂದುತ್ವ ಬದಲಾಗಿಲ್ಲ, ಶಿವಸೇನೆಯು ಹಿಂದುತ್ವವನ್ನು ತೊರೆದಿದೆ: ದೇವೇಂದ್ರ ಫಡ್ನವಿಸ್

|
Google Oneindia Kannada News

ಮುಂಬೈ, ನವೆಂಬರ್ 28: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶಿವಸೇನೆ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.

ಶಿವಸೇನೆಯು ಹಿಂದುತ್ವವನ್ನು ಬಿಟ್ಟಿದೆ ಆದರೆ ನಮ್ಮ ಹಿಂದುತ್ವದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಹೇಳಿದರು.

ಶಿವಸೇನೆಯು ಗುಪ್ಕಾರ್ ಘೋಷಣೆಗೆ ಸಮರ್ಥನೆಯನ್ನು ನೀಡುವ ಕಾಂಗ್ರೆಸ್ ಪರವಾಗಿದೆ. ದೇವರ ಕೃಪೆಯಿಂದ ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿಲ್ಲ.

ಒಂದು ದಿನ ಕರಾಚಿಯೂ ಭಾರತದ ಭಾಗವಾಗಲಿದೆ: ದೇವೇಂದ್ರ ಫಡ್ನವಿಸ್ ಒಂದು ದಿನ ಕರಾಚಿಯೂ ಭಾರತದ ಭಾಗವಾಗಲಿದೆ: ದೇವೇಂದ್ರ ಫಡ್ನವಿಸ್

ನಮ್ಮ ಮಿತ್ರರು ಸಾರ್ವರ್ಕರ್ ಹೇಳಿದ್ದನ್ನು ಮರೆತತಿದ್ದಾರೆ, ಏಕೆಂದರೆ ಅವರು ಗುಪ್ಕಾರ್ ಘೋಷಣೆಯನ್ನು ಬೆಂಬಲಿಸುವ ಕಾಂಗ್ರೆಸ್ ಜತೆಗಿದ್ದಾರೆ.ಇದು ಚೀನಾ ನೆರವಿನೊಂದಿಗೆ ಕಾಶ್ಮೀರದಲ್ಲಿ ಮತ್ತೆ 370 ವಿಧಿಯನ್ನು ಪುನಸ್ಥಾಪಿಸುವ ಬಗ್ಗೆ ಮಾತನಾಡುತ್ತದೆ.

Fadnavis Says Our Hindutva Hasnt Changed, Shiv Sena Has Left Hindutva

ಹಿಂದುತ್ವ ವಿಚಾರವಾಗಿ ಶಿವಸೇನೆ ಹಾಗೂ ಬಿಜೆಪಿ ನಡುವೆ ವಾಕ್ಸಮರ ಮುಂದುವರಿದಿದ್ದು, ಶಿವಸೇನಾ ನಾಯಕ ಸಂಜಯ್‌ ರಾವತ್‌ ದೇಶಕ್ಕೆ ಅಗತ್ಯವಿದ್ದಾಗ ಹಿಂದುತ್ವದ ಖಡ್ಗವನ್ನು ನಮ್ಮ ಪಕ್ಷ ಹಿಡಿಯುತ್ತದೆ. ಶಿವಸೇನೆ ಯಾವಾಗಲೂ ಹಿಂದುತ್ವವಾದಿ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದರು..

ಯಾವುದೇ ಪಕ್ಷದಿಂದ ನಮ್ಮ ಬಗ್ಗೆ ಹಿಂದುತ್ವ ಪ್ರಮಾಣ ಪತ್ರ ಪಡೆಯುವ ಅಗತ್ಯವಿಲ್ಲ. ನಾವು ಹಿಂದೆ, ಈಗ ಮತ್ತು ಯಾವಾಗಲೂ ಹಿಂದುತ್ವವಾದಿಗಳಾಗಿರುತ್ತೇವೆ, ನಾವು ಅವರಂತೆ ಹಿಂದುತ್ವ ರಾಜಕೀಯ ಮಾಡುವುದಿಲ್ಲ. ದೇಶಕ್ಕೆ ಅಗತ್ಯವಿದ್ದಾಗ ಶಿವಸೇನೆ ಯಾವಾಗಲೂ ಹಿಂದುತ್ವದ ಕತ್ತಿ ಹಿಡಿಯಲು ಮುಂದೆ ಬರುತ್ತದೆ ಎಂದು ಹೇಳಿದ್ದರು.

English summary
Maharashtra fomer chief minister Devendra Fadnavis said that Our Hindutva hasn't changed. Shiv Sena has left Hindutva. How can they forget what their allies said on Savarkar? They're with Congress which backs Gupkar Declaration, that talks of restoring Article 370 with China's aid:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X