ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FACT CHECK: ನಾಗ್ಪುರದಲ್ಲಿ 59 ಕೊರೊನಾ ಕೇಸ್, ಆ ಆಡಿಯೋ ಸತ್ಯವೇನು?

|
Google Oneindia Kannada News

ಮುಂಬೈ, ಮಾರ್ಚ್ 26: ನಾಗ್ಪುರದಲ್ಲಿ ಇದುವರೆಗೂ ಒಟ್ಟು 59 ಕೊರೊನಾ ಕೇಸ್‌ಗಳು ದೃಢಪಟ್ಟಿದೆ. ಅದರಲ್ಲಿ ಮೂರು ಜನ ವೈದ್ಯರು ಸೇರಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಈ ಕುರಿತು ಆಡಿಯೋ ಕ್ಲಿಪ್‌ವೊಂದು ಹರಿದಾಡುತ್ತಿದೆ.

ಆದರೆ, ಈ ಸುದ್ದಿ ಸುಳ್ಳು ಎಂದು ಪಿಐಬಿ ( Press Information Bureau) ಖಚಿತ ಪಡಿಸಿದೆ. ನಾಗ್ಪುರದಲ್ಲಿ 59 ಕೇಸ್ ಪಾಸಿಟಿವ್ ಆಗಿದೆ ಎಂದು ಆಡಿಯೋವೊಂದು ವೈರಲ್ ಆಗಿದೆ. ಅದು ಸುಳ್ಳು ಸುದ್ದಿ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಇಂತಹ ಆಡಿಯೋಗಳನ್ನು ಹರಿಡಿಸಬೇಡಿ ಎಂದು ಪಿಐಬಿ ಮನವಿ ಮಾಡಿದೆ.

ನಾಗ್ಪುರದಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಡೋರ್ ಟು ಡೋರ್ ಸಮೀಕ್ಷೆ ಮಾಡಲು ಮುಂದಾಗಿದೆ. ಮಾರ್ಚ್ 26 ರಿಂದ ಮನೆ ಮನೆಯ ಬಳಿ ಹೋಗಿ ಯಾರಾದರೂ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಸಮೀಕ್ಷೆ ಮಾಡಲಾಗುವುದು. ಒಂದು ವೇಳೆ ಹೋಮ್‌ ಕ್ವಾರೆಂಟೈನ್‌ನಲ್ಲಿ ಯಾರಾದರೂ ಇದ್ದರೆ, ಅವರಿಗೆ ಸೂಕ್ತ ಸಲಹೆಗಳನ್ನು ನೀಡಲು ಸರ್ಕಾರದ ವತಿಯಿಂದ ಕೈಗೊಳ್ಳಲಾಗುತ್ತಿದೆ.

FACT CHECK: ಕೊರೊನಾಗಾಗಿ ಭಾರತೀಯ ಸೇನೆ ಆಸ್ಪತ್ರೆ ಕಟ್ಟಿದ್ದು ನಿಜವೇ?FACT CHECK: ಕೊರೊನಾಗಾಗಿ ಭಾರತೀಯ ಸೇನೆ ಆಸ್ಪತ್ರೆ ಕಟ್ಟಿದ್ದು ನಿಜವೇ?

ಇದುವರೆಗೂ ನಾಗ್ಪುರದಲ್ಲಿ ನಾಲ್ಕು ಕೊರೊನಾ ಪಾಸಿಟಿವ್ ಕೇಸ್ ದೃಢಪಟ್ಟಿದೆ. 162 ಜನರು ಐಸೋಲೇಶನ್ ವಾರ್ಡ್‌ನಲ್ಲಿದ್ದು, ಅವರ ಮೇಲೆ ತೀವ್ರ ನಿಗಾವಹಿಸಲಾಗಿದೆ. ಇನ್ನು 658 ಜನರ ಮೇಲೆ ನಿಗಾವಹಿಸಲಾಗಿದೆ.

Fact Check Nagpur Has Tested 59 Positive Cases Of COVID 19?

ಮಹಾರಾಷ್ಟ್ರದಲ್ಲಿ ಒಟ್ಟು 125 ಜನರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಭಾರತದಲ್ಲಿ 693 ಜನರಲ್ಲೊ ಕೋವಿಡ್ 19 ಪತ್ತೆಯಾಗಿದೆ. ಒಟ್ಟು 13 ಜನರು ಸಾವನ್ನಪ್ಪಿದ್ದಾರೆ.

English summary
FACT CHECK: An audio clip is in circulation on the social media claiming that Nagpur has tested 59 positive cases of coronavirus. but, this audio clip is fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X