ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪು ಶಿಲೀಂಧ್ರ ಸೋಂಕಿನಿಂದ ಕಣ್ಣುಗಳನ್ನು ಕಳೆದುಕೊಂಡ 3 ಮಕ್ಕಳು

|
Google Oneindia Kannada News

ಮುಂಬೈ, ಜೂ. 17: ಮುಂಬೈನಲ್ಲಿ ಕಪ್ಪು ಶಿಲೀಂಧ್ರ ಸೋಂಕಿತ ಮೂವರು ಮಕ್ಕಳು ತಮ್ಮ ಒಂದು ಕಣ್ಣನ್ನು ಕಳೆದುಕೊಂಡಿದ್ದಾರೆ. ''ಮಕ್ಕಳಲ್ಲಿ ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಲಕ್ಷಣಗಳು ಇದೆ,'' ಎಂದು ವೈದ್ಯರು ಹೇಳಿದ್ದಾರೆ.

"ಮುಂಬೈನ ಎರಡು ಆಸ್ಪತ್ರೆಗಳಲ್ಲಿ 4, 6 ಮತ್ತು 14 ವರ್ಷ ವಯಸ್ಸಿನ ಮೂವರು ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸಾಮಾನ್ಯವಾಗಿ ಈ ಸೋಂಕು ಮಧುಮೇಹದಂತಹ ರೋಗಗಳು ಇರುವ ಕೋವಿಡ್‌ ರೋಗಿಗಳನ್ನು ಅಥವಾ ಕೋವಿಡ್‌ನಿಂದ ಗುಣಮುಖರಾದವರನ್ನು ಗುರಿಯಾಗಿಸುತ್ತದೆ. ಈ ಪ್ರಕರಣದಲ್ಲಿ ಇಬ್ಬರು ಮಕ್ಕಳು ಮಧುಮೇಹಿಗಳಲ್ಲ, ಆದರೂ ಸೋಂಕು ಕಾಣಿಸಿಕೊಂಡಿದೆ. ಇನ್ನು 14 ವರ್ಷದ ಬಾಲಕಿಗೆ ಮಧುಮೇಹವಿದೆ ಎಂದು ಹೇಳಲಾಗಿದೆ. 16 ವರ್ಷದ ಬಾಲಕಿಯಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ ಮಧುಮೇಹ ಕಾಣಿಸಿಕೊಂಡಿದೆ," ಎಂದು ವೈದ್ಯರು ತಿಳಿಸಿದ್ದಾರೆ.

 ಬ್ಲ್ಯಾಕ್‌ ಫಂಗಸ್ ತಡೆಯಲು ಏನು ಮಾಡಬೇಕು; ಏಮ್ಸ್ ನಿರ್ದೇಶಕರ ಮೂರು ಬಹುಮುಖ್ಯ ಸಲಹೆ ಬ್ಲ್ಯಾಕ್‌ ಫಂಗಸ್ ತಡೆಯಲು ಏನು ಮಾಡಬೇಕು; ಏಮ್ಸ್ ನಿರ್ದೇಶಕರ ಮೂರು ಬಹುಮುಖ್ಯ ಸಲಹೆ

"ಎರಡನೇ ಅಲೆಯಲ್ಲಿ ಕಪ್ಪು ಶಿಲೀಂಧ್ರಕ್ಕೆ ಒಳಗಾಗಿದ್ದ ಸೋಂಕಿತ ಇಬ್ಬರು ಬಾಲಕಿಯನ್ನು ನಾವು ನೋಡಿದ್ದೇವೆ. ಇಬ್ಬರೂ ಮಧುಮೇಹ ಉಳ್ಳವರು. ಈ ಪೈಕಿ ನಮ್ಮ ಬಳಿಗೆ ಬಂದ 14 ವರ್ಷದ ಬಾಲಕಿ ಒಂದು ಕಣ್ಣು 48 ಗಂಟೆಗಳಲ್ಲಿ ಕಪ್ಪು ಬಣ್ಣಕ್ಕೆ ತಿರುಗಿದೆ. ಶಿಲೀಂಧ್ರವು ಹರಡುತ್ತಿರುವುದು ಆ ಸಂದರ್ಭ ಗಮನಕ್ಕೆ ಬಂದಿದೆ, ಆದರೆ ಅದೃಷ್ಟವಶಾತ್, ಆ ಬ್ಲ್ಯಾಕ್‌ ಫಂಗಸ್‌ ಮೆದುಳಿಗೆ ತಲುಪಿರಲಿಲ್ಲ. ನಾವು ಆ ಬಾಲಕಿಗೆ ಆರು ವಾರಗಳವರೆಗೆ ಚಿಕಿತ್ಸೆ ನೀಡಿದ್ದೇವೆ. ದುರದೃಷ್ಟವಶಾತ್, ಬಾಲಕಿ ಕಣ್ಣನ್ನು ಕಳೆದುಕೊಂಡಲು," ಎಂದು ಫೋರ್ಟಿಸ್ ಆಸ್ಪತ್ರೆಯ ಹಿರಿಯ ಸಲಹೆಗಾರ ಮಕ್ಕಳ ವೈದ್ಯ ಡಾ. ಜೆಸಾಲ್ ಶೆತ್ ಎಂದಿದ್ದಾರೆ.

Mumbai: Eyes Of 3 Children Infected With Black Fungus Removed

"16 ವರ್ಷದ ಬಾಲಕಿ ಒಂದು ತಿಂಗಳ ಹಿಂದೆ ಆರೋಗ್ಯವಾಗಿದ್ದಳು. ಕೋವಿಡ್‌ನಿಂದ ಚೇತರಿಸಿಕೊಂಡಿದ್ದಳು. ಬಾಲಕಿಗೆ ಮಧುಮೇಹ ಇರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಬಾಲಕಿಗೆ ಮಧುಮೇಹ ಬಂದಿದೆ. ಈ ಸಂದರ್ಭ ಬಾಲಕಿ ನಮ್ಮನ್ನು ಸಂಪರ್ಕಿಸಿದ್ದಾಳೆ. ಬಾಲಕಿಯ ಕರುಳುಗಳಲ್ಲಿ ರಕ್ತಸ್ರಾವವಾಗಲು ಪ್ರಾರಂಭವಾಗಿದೆ. ನಾವು ಆಂಜಿಯೋಗ್ರಫಿ ಮಾಡಿದ್ದು ಆ ಸಂದರ್ಭ ಕಪ್ಪು ಶಿಲೀಂಧ್ರ ಸೋಂಕಿತೆ ಎಂಬುದು ತಿಳಿದು ಬಂದಿದೆ," ಎಂದು ವೈದ್ಯ ಡಾ. ಜೆಸಾಲ್ ಶೆತ್ ವಿವರಿಸಿದ್ದಾರೆ.

ಮಧುಮೇಹವಿಲ್ಲದ ಕಿರಿಯ ಮಕ್ಕಳನ್ನು ಮುಂಬೈನ ಕೆಬಿಹೆಚ್ ಬಚೂಲಿ ನೇತ್ರ ಮತ್ತು ಇಎನ್‌ಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರಿಗೂ ಕೋವಿಡ್ ಇತ್ತು.

ಕೊರೊನಾ ನಂತರ ಮಾರಕ ಕೊರೊನಾ ನಂತರ ಮಾರಕ "ಕಪ್ಪು ಶಿಲೀಂಧ್ರ" ರೋಗ; ಒಂಬತ್ತು ಮಂದಿ ಸಾವು

"ಮಕ್ಕಳ ಕಣ್ಣಿನಲ್ಲಿ ಕಪ್ಪು ಶಿಲೀಂಧ್ರ ಹರಡುತ್ತಿತ್ತು. ನಾವು ಕಣ್ಣುಗಳನ್ನು ತೆಗೆದುಹಾಕದಿದ್ದರೆ ಮಕ್ಕಳ ಜೀವಕ್ಕೆ ಅಪಾಯವಿತ್ತು. ಈಗಾಗಲೇ ಮಕ್ಕಳ ಒಂದು ಕಣ್ಣು ಕುರುಡಾಗಿತ್ತು. ಮಕ್ಕಳಿಗೆ ತೀವ್ರ ನೋವು ಉಂಟಾಗಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಒಂದು ಮಗುವನ್ನು ನಮ್ಮ ಬಳಿಗೆ ಕರೆದುಕೊಂಡು ಬರಲಾಗಿತ್ತು. ಎರಡನೇ ಪ್ರಕರಣವು ಎರಡನೇ ಅಲೆಯ ಸಮಯದಲ್ಲಿ ಕಂಡು ಬಂದಿದೆ," ಎಂದು ಆಸ್ಪತ್ರೆಯ ಆಕ್ಯುಲೋಪ್ಲ್ಯಾಸ್ಟಿ, ಆಕ್ಯುಲರ್ ಆಂಕೊಲಾಜಿ ಮತ್ತು ಆಕ್ಯುಲರ್ ಪ್ರಾಸ್ಥೆಟಿಕ್ ಡಾ. ಪ್ರಿತೇಶ್ ಶೆಟ್ಟಿ ತಿಳಿಸಿದರು.

ಕಪ್ಪು ಶಿಲೀಂಧ್ರ ಸೋಂಕು ಆಕ್ರಮಣಕಾರಿಯಾಗಿರುವುದರಿಂದ ಬೇಗನೆ ಪತ್ತೆಹಚ್ಚಬೇಕಾಗುತ್ತದೆ. ಈ ಕಪ್ಪು ಶಿಲೀಂಧ್ರಕ್ಕೆ ಒಳಗಾದ ಅಂಗವನ್ನು ತೆಗೆಯಬೇಕಾಗುತ್ತದೆ. ಶಸ್ತ್ರಚಿಕಿತ್ಸಕರು ರೋಗಿಗಳ ಮೂಗು, ಕಣ್ಣುಗಳು ಅಥವಾ ದವಡೆಯನ್ನು ತೆಗೆದು ಈ ಶಿಲೀಂಧ್ರ ಮೆದುಳಿಗೆ ತಗುಲುವುದನ್ನು ತಡೆಯಬೇಕಾದ ಪರಿಸ್ಥಿತಿ ಬಂದಿದೆ.

English summary
Three children infected with Black Fungus had to go through surgery to remove an eye each in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X