• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೆಂಡೂಲ್ಕರ್, ಉದ್ಧವ್ ಠಾಕ್ರೆ ನೀರಿನ ಬಿಲ್ ಕಟ್ಟೇ ಇಲ್ಲ!

By Srinath
|
ಮುಂಬೈ, ಜ.29- ಖ್ಯಾತ ಮಾಜಿ ಕ್ರಿಕೆಟ್ಟಿಗ ಸಚಿನ್ ತೆಂಡೂಲ್ಕರ್, ಶಿವ ಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ಅಬು ಅಜ್ಮಿ, ಎ ಆರ್ ಆ್ಯಂಟುಳೆ ಪುತ್ರ ನವೀದ್ ಮುಂತಾದವರು ನೀರಿನ ಬಿಲ್ ಕಟ್ಟೇ ಇಲ್ಲ!

ತೆಂಡೂಲ್ಕರ್ ಒಬ್ಬರೇ ಅಲ್ಲ. ಹೀಗೆ ಬೃಹನ್ಮುಂಬಯಿ ಮಹಾನಗರ ಪಾಲಿಕೆಗೆ (MCGM)ನೀರಿನ ಬಿಲ್ ಕಟ್ಟದವರ ಸಂಖ್ಯೆ ಮುಂಬೈ ಮಹಾನಗರಿಯಲ್ಲಿ 2 ಲಕ್ಷ ಮಂದಿ ಇದ್ದಾರೆ. ಅವರೆಲ್ಲರಿಂದ MCGMಗೆ 1,000 ಕೋಟಿ ರೂ. ಬಾಕಿ ಪಾವತಿಯಾಗಬೇಕಿದೆ.

ಅಂದಹಾಗೆ Municipal Corporation of Greater Mumbai (MCGM)ಗೆ ಯಾರೆಲ್ಲಾ ನೀರಿನ ಬಿಲ್ ಪಾವತಿ ಮಾಡಿಲ್ಲವೋ ಅಷ್ಟೂ ಮಂದಿಯ ಹೆಸರುಗಳನ್ನು ಸಂಸ್ಥೆಯ ವೆಬ್ ಸೈಟಿನಲ್ಲಿ ಪ್ರಕಟಿಸಿ ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗವು ಕಳೆದ ಡಿಸೆಂಬರ್ 6ರಂದು ಆದೇಶಿಸುತ್ತಿದ್ದಂತೆ ಸಂಸ್ಥೆಯು ತನ್ನ ಅಧಿಕೃತ ವೆಬ್ ಸೈಟಿನಲ್ಲಿ (www.mcgm.gov.in) ಈ ಮಾಹಿತಿ ನೀಡಿದೆ.

ವಾಡಲಾದ ನಿವಾಸಿ ಜೈಪ್ರಕಾಶ್ ಗುಪ್ತಾ ಅವರು ಈ ಬಗ್ಗೆ ಮಾಹಿತಿ ಕೋರಿ MCGMಗೆ ಅರ್ಜಿ ಸಲ್ಲಿಸಿದಾಗ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅದನ್ನು ನಿರಾಕರಿಸಿದ್ದರು. ಮುಂದೆ ಮುಖ್ಯ ಮಾಹಿತಿ ಆಯುಕ್ತರ ಬಳಿ ವಿಚಾರಣೆಗೆ ಬಂದು ಅವರಿಂದ ಆದೇಶ ಹೊರಬೀಳುತ್ತಿದ್ದಂತೆ ಎಚ್ಚೆತ್ತ ಸಂಸ್ಥೆಯು ತಕ್ಷಣ ಮಾಹಿತಿಯನ್ನು ವೆಬ್ ಸೈಟಿನಲ್ಲಿ ಪ್ರಕಟಿಸಿದೆ.

ಅಂದಹಾಗೆ ಬಿಲ್ ಮೊತ್ತ ಬಾಕಿ ಉಳಿಸಿಕೊಂಡವರ ಹೆಸರುಗಳು ವೆಬ್ ಸೈಟಿನಲ್ಲಿ ಜನವರಿ 30ರವರೆಗೂ ಇರುತ್ತದೆ. ಒಟ್ಟು 24 ವಾರ್ಡುಗಳಲ್ಲಿನ ವಾಣಿಜ್ಯ, ಕೈಗಾರಿಕೆ ಮತ್ತು ಗೃಹ ಬಳಕೆ ಗ್ರಾಹಕರ ಹೆಸರುಗಳು ಇದರಲ್ಲಿ ದಾಖಲಾಗಿವೆ. ( ಬಾಳಾ ಆಸ್ತಿ: ಕೋರ್ಟ್ ಮೆಟ್ಟಿಲೇರಿದ ಠಾಕ್ರೆ ಸೋದರರು! )

ತೆಂಡೂಲ್ಕರ್, ಶಿವ ಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ಅಬು ಅಜ್ಮಿ, ಎ ಆರ್ ಆ್ಯಂಟುಳೆ ಪುತ್ರ ನವೀದ್ ಮುಂತಾದವರು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅಜ್ಮಿ ಅವರು ಕೊಲಾಬಾದಲ್ಲಿರುವ ತಮ್ಮ ಗಲ್ಫ್ ಹೋಟೆಲಿನ ವತಿಯಿಂದ ಆರು ತಿಂಗಳ ಹಿಂದೆಯೇ ಬಾಲಿ ಮೊತ್ತವನ್ನು ಪಾವತಿಸಿರುವುದಾಗಿಯೂ, ಯಾವುದೇ ಬಾಕಿಯನ್ನು ಉಳಿಸಿಕೊಂಡಿಲ್ಲವೆಂದೂ ಸ್ಪಷ್ಟಪಡಿಸಿದ್ದಾರೆ. ಆದರೆ ಉಳಿದಿಬ್ಬರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ex cricketer Sachin Tendulkar named as water bill defaulters to MCGM. As on January 16, 2014, the Municipal Corporation of Greater Mumbai (MCGM) is still to recover more than Rs1,000 crore from over 200,000 defaulters. The civic body recently uploaded the list of bill defaulters on its website, following an order from the state information commissioner (SIC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more