ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಶಾಂತ್ ಸಿಂಗ್ ಕೇಸ್: ED ವಿಚಾರಣೆಯಲ್ಲಿ ರಿಯಾ ಚಕ್ರವರ್ತಿ ಹೇಳಿದ್ದೇನು?

|
Google Oneindia Kannada News

ಮುಂಬೈ, ಆಗಸ್ಟ್ 8: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲದ ಮುಂದೆ ವಿಚಾರಣೆಗೆ ಹಾಜರಾಗಿದ್ದ ನಟಿ ರಿಯಾ ಚಕ್ರವರ್ತಿ 'ನನ್ನ ಸ್ವಂತ ಆದಾಯದಿಂದ ವ್ಯವಹಾರ ಮಾಡಿದ್ದೇನೆ, ಸುಶಾಂತ್ ಹಣವನ್ನು ನಾನು ಬಳಸಿಲ್ಲ' ಎಂದು ಹೇಳಿಕೆ ನೀಡಿದ್ದಾರೆ.

ಸುಶಾಂತ್ ಸಿಂಗ್ ಖಾತೆಯಿಂದ ಗೆಳತಿ ರಿಯಾ ಚಕ್ರವರ್ತಿ ಸುಮಾರು 15 ಕೋಟಿವರೆಗೂ ಹಣ ತೆಗೆದುಕೊಂಡಿದ್ದಾಳೆ ಎಂದು ಸುಶಾಂತ್ ಸಿಂಗ್ ತಂದೆ ಪಾಟ್ನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸುಶಾಂತ್ ಕೇಸ್: ಜಾರಿ ನಿರ್ದೇಶನಾಲಯ ವಿಚಾರಣೆಗೆ ರಿಯಾ ಹಾಜರ್ಸುಶಾಂತ್ ಕೇಸ್: ಜಾರಿ ನಿರ್ದೇಶನಾಲಯ ವಿಚಾರಣೆಗೆ ರಿಯಾ ಹಾಜರ್

ಪಾಟ್ನಾ ಪೊಲೀಸ್ ಎಫ್ ಐ ಆರ್ ಆಧರಿಸಿ ಇಡಿ ಇಲಾಖೆ ರಿಯಾ ಚಕ್ರವರ್ತಿ ಹಾಗು ಇನ್ನಿತರ ಏಂಟು ಜನರ ವಿರುದ್ಧ ಮನಿ ಲ್ಯಾಂಡರಿಂಗ್ ಕೇಸ್ ನಮೂದಿಸಿದ್ದರು. ಈ ಸಂಬಂಧ ರಿಯಾಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಸಮನ್ಸ್ ಹಿನ್ನೆಲೆ ಶುಕ್ರವಾರ ಮುಂಬೈನ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿದ್ದ ರಿಯಾ, ಸುಶಾಂತ್ ಜೊತೆಗಿನ ವ್ಯವಹಾರಿಕ ಸಂಬಂಧದ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ, ಇಡಿ ಅಧಿಕಾರಿಗಳ ಮುಂದೆ ರಿಯಾ ಹೇಳಿದ್ದೇನು? ಮುಂದೆ ಓದಿ....

ಫ್ಲ್ಯಾಟ್ ಬಗ್ಗೆ ರಿಯಾ ಸ್ಪಷ್ಟನೆ

ಫ್ಲ್ಯಾಟ್ ಬಗ್ಗೆ ರಿಯಾ ಸ್ಪಷ್ಟನೆ

ರಿಯಾ ಚಕ್ರವರ್ತಿ ಬಳಿಕ ಕೋಟ್ಯಾಂತರ ಮೌಲ್ಯದ ಆಸ್ತಿಪಾಸ್ತಿ ಇದೆ ಎಂದು ಹೇಳಲಾಗಿದೆ. ಅದರಲ್ಲಿ ಸುಶಾಂತ್ ಹಣದಲ್ಲಿ ಮುಂಬೈನಲ್ಲಿ ಒಂದು ಫ್ಲ್ಯಾಟ್ ಖರೀದಿಸಿದ್ದಾರೆ ಎಂದು ಸುಶಾಂತ್ ತಂದೆ ದೂರಿದ್ದಾರೆ. ಈ ಬಗ್ಗೆ ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಅದಕ್ಕೆ ಸ್ಪಷ್ಟನೆ ನೀಡಿರುವ ರಿಯಾ ಚಕ್ರವರ್ತಿ, 'ನನ್ನ ಸ್ವಂತ ಆದಾಯದಿಂದ ವ್ಯವಹಾರ ಮಾಡಿದ್ದೇನೆ, ಸುಶಾಂತ್ ಹಣವನ್ನು ನಾನು ಬಳಸಿಲ್ಲ' ಎಂದಿದ್ದಾರೆ. 'ಫ್ಲ್ಯಾಟ್ ಬೆಲೆ 85 ಲಕ್ಷ, 60 ಲಕ್ಷಕ್ಕೆ ಲೋನ್ ಪಡೆಯಲಾಗಿದೆ. ಉಳಿದ 25 ಲಕ್ಷ ತನ್ನ ಸ್ವಂತ ಆದಾಯದಿಂದ ಬಂದಿದೆ' ಎಂದಿದ್ದಾರೆ.

ಎರಡನೇ ಬಾರಿಯ ರಿಯಾ ವಿಚಾರಣೆ ಸಾಧ್ಯತೆ!

ಎರಡನೇ ಬಾರಿಯ ರಿಯಾ ವಿಚಾರಣೆ ಸಾಧ್ಯತೆ!

'ರಿಯಾ ಚಕ್ರವರ್ತಿ ಹೇಳಿಕೆ ಪಡೆಯಲಾಗಿದೆ. ವಕೀಲ ಪಿಂಕ್ವಿಲ್ಲಾಗೆ. ಐಟಿ ರಿಟರ್ನ್ಸ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಪೊಲೀಸ್ ಮತ್ತು ಇಡಿ ತನಿಖೆಗೆ ರಿಯಾ ಯಾವಾಗಲೂ ಸಹಕರಿಸುತ್ತಾರೆ. ಮರೆಮಾಚಲು ಏನೂ ಇಲ್ಲ. ಅಗತ್ಯವಿದ್ದು ಮತ್ತೆ ವಿಚಾರಣೆಗೆ ಕರೆದರೂ ಸಹ ಅವರು ಬರ್ತಾರೆ' ಎಂದು ರಿಯಾ ಚಕ್ರವರ್ತಿ ಪರ ವಕೀಲ ತಿಳಿಸಿದ್ದಾರೆ.

'ಯಾರು ನೀವು?' CBI ತನಿಖೆ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್ ತರಾಟೆ'ಯಾರು ನೀವು?' CBI ತನಿಖೆ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್ ತರಾಟೆ

ಶ್ರುತಿ ಮೋದಿಗೂ ಸಮನ್ಸ್

ಶ್ರುತಿ ಮೋದಿಗೂ ಸಮನ್ಸ್

ಸುಶಾಂತ್ ಸಿಂಗ್ ರಜಪೂತ ಜೊತೆ ಕೆಲಸ ಮಾಡಿರುವ ರಿಯಾ ಅವರ ಮ್ಯಾನೇಜರ್ ಶ್ರುತಿ ಮೋದಿಗೂ ಇಡಿ ಸಮನ್ಸ್ ನೀಡಿತ್ತು. ರಿಯಾ ಅವರ ಸಹೋದರ ಶೌವಿಕ್ ಚಕ್ರವರ್ತಿ ವಿರುದ್ಧ ಸಹ ದೂರು ದಾಖಲಾಗಿದೆ. ಶುಕ್ರವಾರ ರಿಯಾ, ಶ್ರುತಿ ಮತ್ತು ಶೋಯಿಕ್ ಅವರ ಹೇಳಿಕೆಗಳನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ತನಿಖೆ ಸಹ ಆರಂಭ!

ಸಿಬಿಐ ತನಿಖೆ ಸಹ ಆರಂಭ!

ಮತ್ತೊಂದೆಡೆ ಸುಶಾಂತ್ ಸಿಂಗ್ ರಜಪೂತ್ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಇಡಿ ಅಧಿಕಾರಿಗಳ ತನಿಖೆಗೆ ಜೊತೆ ಸಿಬಿಐ ತನಿಖೆಗೂ ರಿಯಾ ಚಕ್ರವರ್ತಿ ಸಹಕರಿಸಬೇಕಿದೆ. ಪಾಟ್ನಾ ಪೊಲೀಸರಿಂದ ಕೇಸ್‌ಗೆ ಸಂಬಂಧಿಸಿದಂತೆ ವಿವರಗಳನ್ನು ಪಡೆದುಕೊಂಡಿರುವ ಸಿಬಿಐ ಅಧಿಕಾರಿಗಳು ರಿಯಾ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಹೆಚ್ಚಿದೆ.

English summary
Sushant Singh Rajput death case: Enforcement Directorate (ED) records Rhea Chakraborty statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X