ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಭೂ ಹಗರಣ: ಸಂಸದ ಸಂಜಯ್ ರಾವತ್‌ಗೆ ಇಡಿ ಸಮನ್ಸ್

|
Google Oneindia Kannada News

ಮುಂಬೈ, ಜೂನ್ 27: ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರದ ಬುಡ ಅಲ್ಲಾಡುತ್ತಿರುವ ವೇಳೆಯಲ್ಲಿ ಉದ್ಧವ್ ಜೊತೆ ನಿಂತಿರುವ ಸಂಸದ ಸಂಜಯ್ ರಾವತ್‌ಗೆ ಆಘಾತ ಎದುರಾಗಿದೆ. ಎಚ್‌ಡಿಐಎಲ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ರಾವತ್‌ಗೆ ಸಮನ್ಸ್ ನೀಡಲಾಗಿದೆ. ರಾವತ್‌ಗೆ ಮಂಗಳವಾರ ಸಮನ್ಸ್‌ ನೀಡಲಾಗಿದೆ.

ಭೂ ಹಗರಣ ಪ್ರಕರಣದಲ್ಲಿ ಶಿವಸೇನೆ ಮುಖಂಡ ಸಂಜಯ್ ರಾವತ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. ಮಂಗಳವಾರ ಏಜೆನ್ಸಿಯ ಮುಂಬೈ ಕಚೇರಿಗೆ ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಉದ್ಧವ್ ಠಾಕ್ರೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಸಂಜಯ ಉವಾಚಉದ್ಧವ್ ಠಾಕ್ರೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಸಂಜಯ ಉವಾಚ

ಶಿವಸೇನೆಯ ರಾಜ್ಯಸಭಾ ಸಂಸದರಿಗೆ ಸಮನ್ಸ್ ನೀಡಲಾಗಿರುವ ಸುದ್ದಿಯನ್ನು ಇಡಿ ಜಂಟಿ ನಿರ್ದೇಶಕ ಸತ್ಯವ್ರತ್ ಕುಮಾರ್ ಖಚಿತಪಡಿಸಿದ್ದಾರೆ.

ಪತ್ರಾ ಚಾಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಪ್ರವೀಣ್ ರಾವತ್ ಅವರಿಗೂ ಸಮನ್ಸ್ ಜಾರಿ ಮಾಡಲಾಗಿದೆ. ರಾವತ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಕೆಲವು ಆಸ್ತಿಗಳನ್ನು ಸಂಸ್ಥೆಯು ಈ ಹಿಂದೆ ಜಪ್ತಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಂಜಯ್ ಟ್ವೀಟ್ ಪ್ರತಿಕ್ರಿಯೆ: ಇಡಿ ನನಗೆ ಸಮನ್ಸ್ ಕಳುಹಿಸಿದೆ. ನಾವೆಲ್ಲರೂ ಬಾಳಾಸಾಹೇಬರ ಶಿವಸೈನಿಕರು, ಬಂಡಾಯಗಾರರ ಬಳಿಗೆ ಹೋಗಿ ಅವರನ್ನು ಕರೆ ತರಲು ಯತ್ನಿಸಲಿಲ್ಲ, ಸಂಧಾನ ಸಾಧ್ಯವಾಗದಿದ್ದಾಗ ಈ ರೀತಿ ಮಾರ್ಗ ನಿರೀಕ್ಷಿತ ಎಂಬರ್ಥದಲ್ಲಿ ಟ್ವೀಟ್ ಮಾಡಿ ಜೈ ಮಹಾರಾಷ್ಟ್ರ! ಎಂದಿದ್ದಾರೆ. ಜೊತೆಗೆ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಟ್ವೀಟ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.

Enforcement Directorate (ED) summons Shiv Sena MP Sanjay Raut on June 28


ಏನಿದು ಹಗರಣ?: ಪತ್ರಾ ಚಾವ್ಲ್ ಭೂ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಪ್ರವೀಣ್ ರಾವತ್ ಅವರು 55 ಕೋಟಿ ರೂ ಮೊತ್ತದ ಹಣವನ್ನು ತಮ್ಮ ಪತ್ನಿಯ ಖಾತೆಯಿಂದ ಸಂಜಯ್ ರಾವತ್ ಅವರ ಪತ್ನಿ ವರ್ಷಾ ಖಾತೆಗೆ ವರ್ಗಾವಣೆ ಮಾಡಿದ್ದನ್ನು ಪತ್ತೆ ಹಚ್ಚಿತ್ತು. ಈ ಹಣ ವರ್ಗಾವಣೆ ಮೂಲಕ ಅಲಿಬಾಗ್‌ನಲ್ಲಿ ಭೂಮಿ ಖರೀದಿ ಮಾಡಲಾಗಿದೆ. 2010 ಮತ್ತು 2012ರ ನಡುವೆ ಭಾರಿ ಪ್ರಮಾಣದಲ್ಲಿ ನಗದು ಪಾವತಿಗಳನ್ನು ನಡೆಸಲಾಗಿದೆ ಎಂದು ಇ.ಡಿ ಹೇಳಿದೆ. ಸಂಜಯ್ ರಾವತ್ ಪತ್ನಿಗೆ ಪ್ರವೀಣ್ ರಾವತ್ ಪತ್ನಿ 55 ಲಕ್ಷ ರೂ ಸಾಲ ಕೂಡ ನೀಡಿದ್ದಾರೆ ಎಂದು ಆರೋಪಿಸಿದೆ.

ಪ್ರವೀಣ್ ರಾವತ್ ಜತೆಗೆ ಎಚ್‌ಡಿಐಎಲ್‌ನ ಸಾರಂಗ್ ವಧಾವನ್ ಮತ್ತು ರಾಕೇಶ್ ವಧಾವನ್, ಗುರು ಆಶಿಶ್ ಕನ್‌ಸ್ಟ್ರಕ್ಷನ್ ರಿಯಲ್ ಎಸ್ಟೇಟ್ ಸಂಸ್ಥೆ ಹಾಗೂ ಇತರರನ್ನು ಕೂಡ ಆರೋಪಪಟ್ಟಿಯಲ್ಲಿ ಇ.ಡಿ ಹೆಸರಿಸಿದೆ. ಪ್ರವೀಣ್ ಅವರನ್ನು ಫೆಬ್ರವರಿ 2ರಂದು ಇ.ಡಿ ಬಂಧಿಸಿತ್ತು. ಗೋರೆಗಾಂವ್‌ನಲ್ಲಿನ ಪತ್ರಾ ಚಾವ್ಲ್‌ನಲ್ಲಿ 11.15 ಕೋಟಿ ರೂ ಮೊತ್ತದ ಫ್ಲೂರ್ ಸ್ಪೇಸ್ ಇಂಡೆಕ್ಸ್ (ಎಫ್‌ಎಸ್‌ಐ) ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

ಮಹಾರಾಷ್ಟ್ರ ಹೌಸಿಂಗ್ ಆಂಡ್ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ ಕೆಲವು ವರ್ಷಗಳ ಹಿಂದೆ ಮುಂಬಯಿಯ ಉಪ ನಗರ ಗೋರೆಗಾಂವ್ ಪಶ್ಚಿಮದಲ್ಲಿನ ಪತ್ರಾ ಚಾವ್ಲ್ ಎಂಬಲ್ಲಿ ಮರು ಅಭಿವೃದ್ಧಿಗೆ ಗುರು ಆಶಿಶ್ ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಗುತ್ತಿಗೆ ನೀಡಿತ್ತು.

ಎಂಎಚ್‌ಎಡಿಎ ಮತ್ತು ಎಚ್‌ಡಿಐಎಲ್ ನಡುವಿನ ವ್ಯವಹಾರದಲ್ಲಿ ಪ್ರವೀಣ್ ರಾವತ್ ಮಧ್ಯಸ್ಥಿಕೆ ವಹಿಸಿದ್ದರು. ಚಾವ್ಲ್‌ನಲ್ಲಿ ವಾಸಿಸುವ ಜನರಿಗೆ ಕಡ್ಡಾಯ ವಠಾರಗಳನ್ನು ನಿರ್ಮಿಸದೆಯೇ 11.15 ಕೋಟಿ ರೂಪಾಯಿ ಮೌಲ್ಯದ ಎಫ್‌ಎಸ್‌ಐ ಅನ್ನು ಕಂಪೆನಿಯು ಮಾರಾಟ ಮಾಡಿ ವಂಚಿಸಿದೆ ಎಂದು ಇ.ಡಿ ಆರೋಪ ಮಾಡಿದೆ.

ತಮ್ಮ ಆಸ್ತಿಗಳ ಮುಟ್ಟುಗೋಲು ಕ್ರಮದ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆಯೇ ಸಂಜಯ್ ರಾವತ್ ಅವರು, 'ಅಸತ್ಯಮೇವ ಜಯತೇ' ಎಂದು ಟ್ವೀಟ್ ಮಾಡುವ ಮೂಲಕ ಜಾರಿ ನಿರ್ದೇಶನಾಲಯದ ವಿರುದ್ಧ ಕಿಡಿಕಾರಿದ್ದರು. ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಕೇಂದ್ರ ಸಂಸ್ಥೆಗಳನ್ನು ಆಡಳಿತಾರೂಢ ಬಿಜೆಪಿ ಸರ್ಕಾರ, ತನ್ನ ವಿರುದ್ಧ ಧ್ವನಿ ಎತ್ತುವವರ ಮೇಲೆ ಬಳಸಿಕೊಳ್ಳುತ್ತಿದೆ ಎಂದು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದಾರೆ.

English summary
Shiv Sena MP Sanjay Raut has been summoned in connection with the probe into the HDIL case. Raut has been summoned for Tuesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X