ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೆಸ್ ಬ್ಯಾಂಕ್; ರಾಣಾ ಕಪೂರ್‌ ಮಾ.11ರ ತನಕ ಇಡಿ ಕಸ್ಟಡಿಗೆ

|
Google Oneindia Kannada News

ಮುಂಬೈ, ಮಾರ್ಚ್ 08 : ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್‌ರನ್ನು ಮಾರ್ಚ್ 11ರ ತನಕ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಭಾನುವಾರ ಬೆಳಗ್ಗೆ ಇಡಿ ರಾಣಾ ಕಪೂರ್ ಬಂಧಿಸಿತ್ತು.

ಮುಂಬೈನ ರಜಾಕಾಲದ ವಿಶೇಷ ನ್ಯಾಯಾಲಯದ ಮುಂದೆ ರಾಣಾ ಕಪೂರ್‌ರನ್ನು ಇಡಿ ಅಧಿಕಾರಿಗಳು ಭಾನುವಾರ ಹಾಜರುಪಡಿಸಿದ್ದರು. 62 ವರ್ಷದ ರಾಣಾ ಕಪೂರ್‌ರನ್ನು ನ್ಯಾಯಾಲಯ ಮಾರ್ಚ್ 11ರ ತನಕ ಇಡಿ ವಶಕ್ಕೆ ನೀಡಿತ್ತು.

ಸಂಕಷ್ಟದಲ್ಲಿರುವ ಯೆಸ್ ಬ್ಯಾಂಕ್ ಗ್ರಾಹಕರಿಗೊಂದು ಸಿಹಿ ಸುದ್ದಿ ಸಂಕಷ್ಟದಲ್ಲಿರುವ ಯೆಸ್ ಬ್ಯಾಂಕ್ ಗ್ರಾಹಕರಿಗೊಂದು ಸಿಹಿ ಸುದ್ದಿ

Enforcement Directorate Custody For Rana Kapoor Till March 11

ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪದ ಮೇಲೆ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್‌ ಬಂಧಿಸಲಾಗಿದೆ. ನಿರಂತರವಾಗಿ ಇಡಿ ಅವರ ವಿಚಾರಣೆ ನಡೆಸಿತ್ತು. ಬಳಿಕ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಭಾನುವಾರ ಮುಂಜಾನೆ 3ಗಂಟೆಗೆ ರಾಣಾ ಕಪೂರ್ ಬಂಧಿಸಲಾಗಿತ್ತು.

ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಬಂಧನಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಬಂಧನ

ಜಾರಿ ನಿರ್ದೇಶನಾಲಯ ರಾಣಾ ಕಪೂರ್ ವಿರುದ್ಧ ಕಾಳಧನ ಸಕ್ರಮ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದೆ. ಡಿಎಚ್‌ಎಫ್‌ಎಲ್‌ ಜೊತೆಗಿನ ಯೆಸ್ ಬ್ಯಾಂಕ್ ವ್ಯವಹಾರದ ಕುರಿತು ಇಡಿ ಮಾಹಿತಿ ಸಂಗ್ರಹ ಮಾಡಲಿದೆ.

ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟ; ತಿರುಪತಿ ತಿಮ್ಮಪ್ಪನಿಗೆ ಮೊದಲೇ ಗೊತ್ತಿತ್ತಾ?ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟ; ತಿರುಪತಿ ತಿಮ್ಮಪ್ಪನಿಗೆ ಮೊದಲೇ ಗೊತ್ತಿತ್ತಾ?

ಜಾರಿ ನಿರ್ದೇಶನಾಲಯ ರಾಣಾ ಕಪೂರ್ ವಿರುದ್ಧ ಕಾಳಧನ ಸಕ್ರಮ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದೆ. ಡಿಎಚ್‌ಎಫ್‌ಎಲ್‌ ಜೊತೆಗಿನ ಯೆಸ್ ಬ್ಯಾಂಕ್ ವ್ಯವಹಾರದ ಕುರಿತು ಇಡಿ ಮಾಹಿತಿ ಸಂಗ್ರಹ ಮಾಡಲಿದೆ.

ಏಪ್ರಿಲ್ 30ರ ತನಕ ಯೆಸ್ ಬ್ಯಾಂಕ್ ಗ್ರಾಹಕರು 50 ಸಾವಿರಕ್ಕಿಂತ ಹೆಚ್ಚು ಹಣವನ್ನು ವಿತ್ ಡ್ರಾ ಮಾಡುವಂತಿಲ್ಲ ಎಂದು ಆರ್‌ಬಿಐ ಷರತ್ತು ಹಾಕಿದೆ. ಇದರಿಂದಾಗಿ ಬ್ಯಾಂಕಿನಲ್ಲಿ ಠೇವಣಿ ಇಟ್ಟ ಗ್ರಾಹಕರು ಆತಂಕಗೊಂಡಿದ್ದಾರೆ.

English summary
Mumbai special holiday court on Sunday sent YES Bank founder Rana Kapoor to Enforcement Directorate (ED) custody till March 11, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X