ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ಇರಬಹುದು; ಶಿವಸೇನೆ

|
Google Oneindia Kannada News

ಮುಂಬೈ, ಏಪ್ರಿಲ್ 5: ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಶಿವಸೇನೆ ಆಕ್ಷೇಪ ವ್ಯಕ್ತಪಡಿಸಿದ್ದು, "ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ. ಮೋದಿ ಸರ್ಕಾರ, ಚುನಾವಣಾ ಆಯೋಗದ ಪುಸ್ತಕದಲ್ಲಿನ ನಿಷ್ಪಕ್ಷಪಾತ ಎಂಬ ಪುಟವನ್ನು ಹರಿದುಹಾಕಿದೆ" ಎಂದು ಟೀಕಿಸಿದೆ.

ಅಸ್ಸಾಂನ ಎರಡನೇ ಹಂತದ ವಿಧಾನಸಭಾ ಚುನಾವಣೆ ಸಂದರ್ಭ ಇವಿಎಂ ದುರ್ಬಳಕೆ ಆರೋಪದ ಕುರಿತು ತನ್ನ ಪಕ್ಷದ ಸಂಪಾದಕೀಯ "ಸಾಮ್ನಾ"ದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಶಿವಸೇನೆ, ಈ ಒಂದು ಘಟನೆ ಚುನಾವಣಾ ಆಯೋಗ ಹಾಗೂ ಬಿಜೆಪಿಯ ಮುಖವಾಡದ ಹಿಂದಿನ ನಿಜ ಮುಖವನ್ನು ತೋರಿಸಿದೆ ಎಂದು ಹೇಳಿದೆ.

"ಅಸ್ಸಾಂ ಸಮಾಜ ಒಡೆಯುವಂಥ ಪ್ರಚಾರ ಮಾಡುತ್ತಿದೆ ಬಿಜೆಪಿ"

ಬಿಜೆಪಿಯ ಹಿಮಂತ ಬಿಸ್ವಾ ಶರ್ಮಾ ಅವರ ಚುನಾವಣಾ ಪ್ರಚಾರದ ಮೇಲಿನ ನಿರ್ಬಂಧದ ಅವಧಿಯನ್ನು ಇಳಿಸಿದ ಚುನಾವಣಾ ಆಯೋಗದ ಕುರಿತು ಮಾತನಾಡಿ, "ಇದು ಯಾರದೋ ಒತ್ತಡದಿಂದ ಆಗಿರುವ ಕೆಲಸ. ಇಂಥ ಕ್ರಮಗಳು ದೇಶದಲ್ಲಿನ ಪ್ರಜಾಪ್ರಭುತ್ವದ ನೀತಿಗಳನ್ನು ಕುಗ್ಗಿಸುತ್ತಿವೆ. ಆದರೆ ಚುನಾವಣಾ ಆಯೋಗದಂಥ ಏಜೆನ್ಸಿಗಳು ರಾಜಕೀಯಕ್ಕೆ ಇಳಿಯಬಾರದು. ಚುನಾವಣಾ ಆಯೋಗ ಬಿಜೆಪಿ ಏಜೆಂಟ್‌ ನಂತೆ ವರ್ತಿಸಬಾರದು" ಎಂದು ಹೇಳಿದೆ.

 Election Commission Acting On Behalf Of BJP Alleges Shivsena

ಜನರಿಗೆ ಇವಿಎಂಗಳ ಮೇಲೆ ನಂಬಿಕೆಯೇ ಹೋಗಿದೆ. ಚುನಾವಣಾ ಆಯೋಗವೂ ಅಕ್ರಮಗಳಿಗೆ ಬೆಂಬಲವಾಗಿರುವುದು ಇವಿಎಂ ಕಾರ್ಯವೈಖರಿ ಮೇಲೆ ಅನುಮಾನ ಮೂಡುವಂತೆ ಮಾಡಿದೆ ಎಂದು ತಿಳಿಸಿದೆ.

ಇವಿಎಂ ಅಕ್ರಮದ ಕುರಿತು ಟೀಕಿಸಿರುವ ಕಾಂಗ್ರೆಸ್, ಅಸ್ಸಾಂ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದೆ. ಚುನಾವಣಾ ಆಯೋಗ ತಕ್ಷಣವೇ ಕೈಗೊಳ್ಳಬೇಕು. ಇದು ಹೇಗೆ ಆಯಿತು ಎಂಬುದರ ಕುರಿತು ಪತ್ತೆ ಹಚ್ಚಬೇಕು ಎಂದು ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ರಿಯೋನ್ ಬೋರಾ ತಿಳಿಸಿದ್ದಾರೆ.

English summary
Election commission is being 'hijacked' by its former ally BJP alleges Shivsena over assam assembly election
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X