ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರ ರಚನೆಗೂ ಮುನ್ನವೇ ಶಿಂಧೆ-ಬಿಜೆಪಿ ನಡುವೆ ಖಾತೆ ಹಂಚಿಕೆ ಜಟಾಪಟಿ ಆರಂಭ

|
Google Oneindia Kannada News

ಮುಂಬೈ, ಜೂನ್ 30: ತಮ್ಮದೇ ಸರ್ಕಾರದ ವಿರುದ್ಧ ಬಂಡೆದ್ದ ಶಿವಸೇನೆ ಶಾಸಕರು ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರವನ್ನು ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ. ಬಹುಮತ ಸಾಬೀತಿಗೂ ಮೊದಲೇ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದಾರೆ. ಬಂಡಾಯ ಶಾಸಕರ ಬೆಂಬಲ ಪಡೆದು ಬಿಜೆಪಿ ಸರ್ಕಾರ ರಚಿಸಲು ಮುಂದಾಗಿದೆ. ಆದರೆ ಸರ್ಕಾರ ರಚನೆಗೂ ಮುನ್ನವೇ ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ಬಿಜೆಪಿ ನಡುವೆ ಹಗ್ಗಜಗ್ಗಾಟ ಶುರುವಾಗಿದೆ.

ಗುರುವಾರ (ಜೂನ್ 30)ರಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆಯಲಿದ್ದು ಬಿಜೆಪಿ ಸರ್ಕಾರ ರಚಿಸುವ ಸಿದ್ಧತೆಯಲ್ಲಿದೆ. ಆದರೆ ಬಂಡಾಯ ಶಾಸಕರು ಮತ್ತು ಬಿಜೆಪಿ ನಡುವೆ ಅಧಿಕಾರ ಹಂಚಿಕೆಯಲ್ಲಿ ಈಗಲೇ ಭಿನ್ನಾಭಿಪ್ರಾಯ ಶುರುವಾಗಿದೆ ಎನ್ನಲಾಗಿದೆ.

ರಾಜೀನಾಮೆಯ ಭಾವುಕ ಭಾಷಣ; ಉದ್ಧವ್ ಠಾಕ್ರೆ ಹೇಳಿದ್ದೇನು?ರಾಜೀನಾಮೆಯ ಭಾವುಕ ಭಾಷಣ; ಉದ್ಧವ್ ಠಾಕ್ರೆ ಹೇಳಿದ್ದೇನು?

ಅಧಿಕಾರ ಹಂಚಿಕೆ ಕುರಿತಂತೆ ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ನಡುವೆ ಮಾತುಕತೆ ನಡೆಯುತ್ತಿದೆ. ಮುಂದಿನ ನಡೆ ಬಗ್ಗೆ ಇಬ್ಬರೂ ನಾಯಕರು ದೀರ್ಘ ಸಮಾಲೋಚನೆ ನಡೆಸಿದ್ದಾರೆ. ಹೊಸ ಸರ್ಕಾರ ರಚನೆಯಾಗುವವರೆಗೂ ಎಲ್ಲಾ ಶಾಸಕರು ಒಟ್ಟಿಗೆ ಇರುವಂತೆ ನೋಡಿಕೊಳ್ಳುವಂತೆ ಶಿಂಧೆಗೆ ಫಡ್ನವೀಸ್ ಮನವಿ ಮಾಡಿದ್ದಾರೆ.

Eknath Shindhe And Rebel MLAs Demand For Finance And PWD Ministry

ಶುಕ್ರವಾರ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ?

ಗುರುವಾರ ಮಧ್ಯಾಹ್ನ 12 ಗಂಟೆಗೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಹೊಸ ಸರ್ಕಾರದ ರಚನೆ, ಮಂತ್ರಿ ಮಂಡಲ, ಅಧಿಕಾರ ಹಂಚಿಕೆ ಕುರಿತು ಚರ್ಚೆ ನಡೆಯಲಿದೆ. ದೇವೇಂದ್ರ ಫಡ್ನವೀಸ್ ಪ್ರಮಾಣ ವಚನದ ದಿನಾಂಕವನ್ನೂ ಕೂಡ ಈ ಸಂದರ್ಭದಲ್ಲಿ ನಿಗದಿಪಡಿಸಲಾಗಿದೆ. ಮೂಲಗಳ ಪ್ರಕಾರ ಶುಕ್ರವಾರವೇ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ರಾಜೀನಾಮೆ ಸಂತಸ ತಂದಿಲ್ಲ: ಬಂಡಾಯ ಶಾಸಕರುಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ರಾಜೀನಾಮೆ ಸಂತಸ ತಂದಿಲ್ಲ: ಬಂಡಾಯ ಶಾಸಕರು

ಇನ್ನು ಬಂಡಾಯ ಶಾಸಕರ ಜೊತೆ ಏಕನಾಥ್ ಶಿಂಧೆ ಗೋವಾದ ತಾಜ್ ಹೋಟೆಲ್‌ನಲ್ಲಿ ಸಭೆ ನಡೆಸಲಿದ್ದಾರೆ. ತಮ್ಮ ಗುಂಪಿನ ಯಾವೆಲ್ಲಾ ಶಾಸಕರಿಗೆ ಸಚಿವ ಸ್ಥಾನ ಸಿಗಬೇಕು ಎಂದು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಿದ್ದಾರೆ. ಶಾಸಕರ ಅಭಿಪ್ರಾಯ ಸಂಗ್ರಹಣೆ ನಂತರ ಶಿಂಧೆ ಒಬ್ಬರೇ ಮುಂಬೈಗೆ ತೆರಳಲಿದ್ದಾರೆ ಎನ್ನಲಾಗಿದೆ. ಅಲ್ಲಿ ಫಡ್ನವೀಸ್ ಜೊತೆ ಶಿಂಧೆ ಮುಖಾಮುಖಿ ಭೇಟಿಯಾಗಿ ಮತ್ತೊಂದು ಸುತ್ತಿನ ಚರ್ಚೆ ನಡೆಸಲಿದ್ದಾರೆ.

Eknath Shindhe And Rebel MLAs Demand For Finance And PWD Ministry

ಸಚಿವ ಸ್ಥಾನ ಹಂಚಿಕೆ ಜಟಾಪಟಿ

ಶಿಂಧೆ ಬಣಕ್ಕೆ 13 ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ಆಫರ್ ನೀಡಿದೆ. ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. 13 ಸಚಿವ ಸ್ಥಾನಗಳ ಪೈಕಿ 8 ಸಂಪುಟ ದರ್ಜೆ, ಐವರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈ ಉಸ್ತುವಾರಿ ಸೇರಿದಂತೆ ನಗರಾಭಿವೃದ್ಧಿ, ಲೋಕೋಪಯೋಗಿ ಹಾಗೂ ಆರ್ಥಿಕ ಇಲಾಖೆ ತಮಗೆ ಬೇಕೆಂದು ಏಕನಾಥ್ ಶಿಂಧೆ ಬಣದ ಶಾಸಕರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆರ್ಥಿಕ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆ ಮುಖ್ಯಮಂತ್ರಿ ಬಳಿ ಇದ್ದರೆ ಒಳಿತು ಎಂದು ಬಿಜೆಪಿ ವಾದಿಸುತ್ತಿದೆ. ಸಚಿವ ಸ್ಥಾನಗಳ ಹಂಚಿಕೆ ಬಗ್ಗೆ ಶಿಂಧೆ-ಫಡ್ನವೀಸ್ ಮುಖಾಮುಖಿ ಚರ್ಚೆ ಬಳಿಕ ಅಂತಿಮ ತೀರ್ಮಾನವಾಗಲಿದೆ.

Recommended Video

ಕರ್ನಾಟಕದಲ್ಲಿ ಈಗ ವಿಧಾನಸಭಾ ಎಲೆಕ್ಷನ್ ನಡೆದ್ರೆ BJP ಗೆ ಭಾರೀ ಮುಖಭಂಗವಾಗೋದು ಗ್ಯಾರೆಂಟಿ | OneIndia Kannada

English summary
Shiv Sena Rebel MLAs who have succeeded in dismantling the Maharashtra Vikasana Aghadi government. Uddhav Thackeray resigned even before the floor test. With the support of the rebel MLAs, the BJP is set to form the government. But before the formation of the government, the feud between rebel MLAs leader Eknath Shinde and BJP has begun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X